ಅಳದಂಗಡಿ: ಶ್ರೀ ಆದಿ ಧೂಮಾವತಿ, ಶ್ರೀ ದೇಯಿ ಬೈದ್ಯೆತಿ ಕೃಪಾಪೋಷಿತಾ ಯಕ್ಷಗಾನ ಮಂಡಳಿ ಮೂಲಸ್ಥಾನ, ಗೆಜ್ಜೆಗಿರಿ ಮೇಳ ದಿನಾಂಕ 23-11-2025 ರಿಂದ ಪ್ರಥಮ ಸೇವೆಯಾಟದೊಂದಿಗೆ 4ನೇ ವರ್ಷದ ತಿರುಗಾಟ ಪ್ರಾರಂಭಗೊಳ್ಳಲಿದೆ. ಈ ವರ್ಷದ ನೂತನ ಪ್ರಸಂಗಗಳ ಸಾಲಿಗೆ ಅರುವ ರಮೇಶ್ ಸುವರ್ಣ ಅವರ ರಚನೆಯ ಗಗ್ಗರ ಪ್ರಸಂಗದ ಪ್ರದರ್ಶನ ನಡೆಯಲಿರುವುದು ವಿಶೇಷ.
ರಮೇಶ್ ಸುವರ್ಣ ಇವರು ಈವರೆಗೆ ನಾಟಕ ರಚನೆಕಾರನಾಗಿ ಹಲವು ನಾಟಕಗಳನ್ನು ರಂಗಕ್ಕೆ ಅರ್ಪಿಸಿದ್ದರು. ನಮ್ಮ ಮಾತೆಲ್ಲ ಒಂಜೇ ಕಲಾವಿದೆರ್ ಅರುವ ಎನ್ನುವ ಸಂಘಟನೆಯನ್ನು ಹೊಂದಿದ್ದು ಅದರ ಸಂಚಾಲಕರಾಗಿ ಹಲವಾರು ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುತ್ತಿದ್ದರು.

