ಹೆಜಮಾಡಿ ಬಿಲ್ಲವರ ಸಂಘದ ಆಶ್ರಯದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಹೇಮಚಂದ್ರ ಎರ್ಮಾಲ್ ಬಳಗ ಮತ್ತು ಕಟಪಾಡಿ ಪಡು ಏಣಗುಡ್ಡೆ ಬಿಲ್ಲವ ಒಕ್ಕೂಟ ಸದಸ್ಯರಿಂದ ಸಂಗೀತ ಹಾಗೂ ದಾಂಡಿಯಾ ನೃತ್ಯ ಕಾರ್ಯಕ್ರಮ ಸೆಪ್ಟೆಂಬರ್ 26ರಂದು ಹೆಜಮಾಡಿ ಬಿಲ್ಲವರ ಸಂಘದಲ್ಲಿ ಜರಗಿತು. ಕಾರ್ಯಕ್ರಮವನ್ನು ಶ್ರೀ ವಿಠೋಭ ಗೋಪಾಲಕೃಷ್ಣ ಮಂದಿರದ ಅಧ್ಯಕ್ಷ ವೇಣುಗೋಪಾಲ್ ಬಿ.ಬಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿಸಿದ ಹೆಜಮಾಡಿ ಬಿಲ್ಲವರ ಸಂಘ ದ ಮೋಹನ್ ದಾಸ್ ಹೆಜಮಾಡಿಯವರು ದಾಂಡಿಯಾ ನೃತ್ಯ ದೇವಿಯ ಪಿತೃತ್ಯ ಸೇವೆಯಾಗಿದೆ, ಹೆಜಮಾಡಿಯಲ್ಲಿ ಎರಡೇ ಬಾರಿ ಈ ಕಾರ್ಯಕ್ರಮ ಜರಗುತಿದೆ ಎಂದರು. ಕಾರ್ಯಕ್ರಮದಲ್ಲಿ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ, ಬಿಲ್ಲವರ ಸಂಘದ ಮಾಜಿ ಅಧ್ಯಕರಾದ ಜಿನರಾಜ್ ಬಂಗೇರ, ದೊಂಬ ಕೆ.ಪೂಜಾರಿ, ಬಿಲ್ಲವ ಸಂಫದ ಕಾರ್ಯದರ್ಶಿ ಪ್ರಭೋದ್ ಚಂದ್ರ ಹೆಜಮಾಡಿ, ಕೋಶಾಧಿಕಾರಿ ಲೀಲೇಶ್ ಸುವರ್ಣ, ಮಹಿಳಾ ಮಂಡಳಿ ಅಧ್ಯಕ್ಷೆ ಲಾವಣ್ಯ ಪ್ರಭೋದ್, ಯುವ ವಾಹಿನಿ ಘಟಕದ ಅಧ್ಯಕ್ಷ ನಿಶಾಂಕ್ ಕೋಟ್ಯಾನ್, ಬಿರ್ವೆರ್ ಬ್ರದರ್ಸ್ ಅಧ್ಯಕ್ಷ ಮನೋಜ್ ಸುವರ್ಣ, ಪಡುಕರೆಯ ಗೌರವ ಅಧ್ಯಕ್ಷ ಮಾಧವ ಸನೀಲ್, ಬದ್ರಿನಾಥ್ ಸನೀಲ್ ಕಟಪಾಡಿ, ಕೋಡಿಕರೆ ಅಧ್ಯಕ್ಷ ಸಂಜೀವ ಜೆ. ಕೋಟಿಯನ್, ದೇವ್ರಾಜ್ ಅಂಚನ್,ಸುಭಾಸ್ ಜಿ ಸಾಲಿಯಾನ್. ಮುಂತಾದದವರು ಉಪಸಿತರಿದ್ದರು. ಮನೋಹರ್ ಹೆಜಮಾಡಿ ಕಾರ್ಯಕ್ರಮ ನಿರ್ವಹಿಸಿದರು.