ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಸಮಿತಿ ವತಿಯಿಂದ ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಿರುವ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳದಲ್ಲಿ ಶನಿವಾರ 4 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಮಹಾಕವಿ ಕುವೆಂಪು ವೇದಿಕೆಯಲ್ಲಿ ಅರ್ಚನಾ ಪಾಟೀಲರ “ಲಾಸ್ಟ್ ಚಾನ್ಸ್ ಬದಲಾಗೋಕೆ”, ಎಂ.ಆರ್ ಮಂಜುನಾಥ ರವರ ‘ಅಕ್ಷರಗಳ ಪಯಣ’, ಡಾ. ಗುಣವಂತ್ ಮಂಜುರವರ ‘ಪದ್ಯದಂಗಡಿ’, ಮಹೇಶ ಕುಮಾರರ ‘ಅವ್ಯಕ್ತ’ ಪುಸ್ತಕಗಳನ್ನು ಶ್ರೀ ಜೀನಹಳ್ಳಿ ಸಿದ್ದಲಿಂಗಪ್ಪನವರು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ಉಪಸಮಿತಿ ಸದಸ್ಯರಾದ ಕವಯತ್ರಿ ಸುಚಿತ್ರಾ ಹೆಗಡೆ, ರಾಜಶೇಖರ ಕದಂಬ, ಕಸಾಪ ಜಿಲ್ಲಾ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ ಮತ್ತಿತರು ಉಪಸ್ಥಿತರಿದ್ದರು.

