ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಅಮೃತ ಆವಿಷ್ಕಾರ ಕಾರ್ಯಕ್ರಮ

0
126

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಅಮೃತ ಆವಿಷ್ಕಾರ ಕಾರ್ಯಕ್ರಮ ನಡೆಯಿತು.

ವಿಶೇಷ ಪರಿಕಲ್ಪನೆಯೊಂದಿಗೆ ನಡೆದ ಪ್ರಾಡಕ್ಟ್ ಲಾಂಚ್ ಕಾರ್ಯಕ್ರಮವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತರ ಅಧ್ಯಯನ ಕೇಂದ್ರದ ಅಸೋಸಿಯೇಟ್ ಪ್ರೊಫೆಸರ್ ಸುಷ್ಮಾ ರಾವ್ ಕೆ. ಅವರು ಉದ್ಘಾಟಿಸಿ ಮಾತನಾಡಿ, ಹೊಸ ಉದ್ಯಮ ಪ್ರಾರಂಭಿಸುವ, ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಪ್ರಕ್ರಿಯೆಯು ಉದ್ಯಮಶೀಲತೆಯಲ್ಲಿ ಇರುತ್ತದೆ. ಇದು ಹೊಸ ಉತ್ಪನ್ನಗಳು, ಸೇವೆಗಳು ಅಥವಾ ಮಾರುಕಟ್ಟೆಗಳನ್ನು ಒದಗಿಸಲು ಸೃಜನಾತ್ಮಕತೆ, ನಾವೀನ್ಯತೆ ಮತ್ತು ಅಪಾಯಗಳನ್ನು ಎದುರಿಸುವ ಪ್ರಕ್ರಿಯೆ ಗಳನ್ನು ಒಳಗೊಂಡಿದೆ. ವಾಣಿಜ್ಯೋದ್ಯಮಿ ಹೊಸ ಆಲೋಚನೆಗಳನ್ನು ಮಾರುಕಟ್ಟೆಗೆ ತರಲು ಮತ್ತು ಸಂಸ್ಥೆಯನ್ನು ಬೆಳೆಸಲು ಶ್ರಮವಹಿಸುತ್ತಾರೆ. ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ ಸಂವಹನ ಕಲೆಯನ್ನು ಓದಿನ ಜೊತೆಗೆ ಕಲಿಯಬೇಕು ತಮ್ಮ ಜೀವನದ ಗುರಿಯನ್ನು ನಿರ್ಧರಿಸಿ ಅದನ್ನು ತಲುಪಲು ಸತತ ಪರಿಶ್ರಮ ಪಡಬೇಕು ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಜೋಗಿ ಅವರು ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಸಂಘದ ಮುಖ್ಯಸ್ಥರು ವಿದ್ಯಾರ್ಥಿ ಕಾರ್ಯದರ್ಶಿ ಹಾಗೂ ಜೊತೆ ಕಾರ್ಯದರ್ಶಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಮೀಕ್ಷಾ ಪೂಜಾರಿ ಅತಿಥಿಗಳ ಪರಿಚಯ ಮಾಡಿ, ಸ್ವಸ್ತಿ ಎಸ್. ಕಿಣಿ ಸ್ವಾಗತಿಸಿ, ಪ್ರಿಯಾಂಕಾ ವಂದಿಸಿದರು. ಧೃತಿ ಎಸ್. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು .

LEAVE A REPLY

Please enter your comment!
Please enter your name here