ನಗರಸಭೆಯಿಂದ ನೀಡುವ ದಾಖಲೆಗಳಲ್ಲಿ ಅಕ್ಷರಲೋಪವಾದರೆ ಸಿಬ್ಬಂದಿಯೇ ಹೊಣೆ:ಪ್ರಭಾಕರ ಪೂಜಾರಿ

0
20

ಉಡುಪಿ: ನಗರಸಭೆಯಿಂದ ನೀಡುವ ದಾಖಲೆಗಳಲ್ಲಿ ಅಕ್ಷರಲೋಪವಾದರೆ ಸಿಬ್ಬಂದಿಯನ್ನೇ ಹೊಣೆಯಾಗಿಸಿ, ದಂಡವಿಧಿಸಲಾಗುವುದು ಎಂದು ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಹೇಳಿದರು.
ನಗರಸಭೆ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಷಯ ಪ್ರಸ್ತಾಪಿಸಿದ ಸದಸ್ಯ ಯೋಗೀಶ್​ ಸಾಲ್ಯಾನ್​ ನಗರಸಭೆಯಲ್ಲಿ ಅಧಿಕಾರಿಗಳ ರ್ನಿಲಕ್ಷಯದಿಂದ ಜನನ ಮತ್ತು ಮರಣ ಪ್ರಮಾಣಪತ್ರಗಳಲ್ಲಿ ಹೆಸರು ತಪ್ಪಾಗಿ ಉಲ್ಲೇಖವಾಗುತ್ತಿದ್ದು, ಕೋರ್ಟ್​ ಮೂಲಕ ಹೆಸರು ಸರಿಪಡಿಸಿಕೊಂಡು ಬರಬೇಕಾದ ಅನಿವಾರ್ಯತೆ ಇದೆ. ಇದರಿಂದ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷರು, 9/11 ದಾಖಲೆ, ಪ್ರಮಾಣಪತ್ರಗಳಲ್ಲಿ ಅಕ್ಷರಲೋಪ, ಹೆಸರು ಬದಲಾವಣೆ ಮುಂತಾದ ತಪು$್ಪಗಳು ಮರುಕಳಿಸಬಾರದು. ಪೈಲ್​ ಸಿಗುತ್ತಿಲ್ಲ ಎಂಬ ಸಬೂಬು ಹೇಳಿ ಜನರನ್ನು ಅಲೆದಾಡಿಸಬಾರದು. ಈ ರೀತಿ ವರ್ತನೆ ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಲಾಗುವುದು ಎಂದು ಹೇಳಿದರು.
ಸದಸ್ಯ ರಮೇಶ್​ ಕಾಂಚನ್​ ಮಾತನಾಡಿ, ಅಂಬಲಪಾಡಿ ರಸ್ತೆ, ಕಲ್ಯಾಣಪುರ ರಸ್ತೆ, ಕರಾವಳಿ ಬೈಪಾಸ್​&ಮಲ್ಪೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಗುಂಡಿ ಮುಚ್ಚುವ ಕಾರ್ಯ ನಡೆಸಬೇಕು.
ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ಈ ಬಾರಿ ವಿಪರೀತ ಮಳೆಯಿಂದ ಗುಂಡಿಮುಚ್ಚುವ ಕಾರ್ಯ ವಿಳಂಬವಾಗಿದೆ. ಕೋಲ್ಡ್​ ಟಾರ್​ ಒಣಗಲು 12 ಗಂಟೆ ಬಿಸಲು ಬೇಕು. ಇಲ್ಲದಿದ್ದರೆ ಮತ್ತೆ ಎದ್ದು ಹೋಗಲಿದೆ. ಸ್ವಲ್ಪ ಮಳೆ ಬಿಟ್ಟ ತಕ್ಷಣ ಕಾಮಗಾರಿ ಪ್ರಾರಂಭಿಸುತ್ತೇವೆ. ಗುಂಡಿ ಮುಚ್ಚಲು 20 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ ಎಂದರು.
ಎಇಇ ದುರ್ಗಾಪ್ರಸಾದ್​ ಮಾತನಾಡಿ, ಮಳೆಯಿಂದಾಗಿ ನಗರದಲ್ಲಿ ಒಟ್ಟು 3.02 ಕೋಟಿ ರೂ. ನಷ್ಟವಾಗಿದ್ದು, ಪರಿಹಾರ ಮಂಜೂರಾತಿಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2 ಸೇತುವೆಗಳು ಕುಸಿತವಾಗಿದ್ದು, ನಗರಸಭಾ ನಿಧಿಯಲ್ಲಿ ದುರಸ್ತಿಗೊಳಿಸಲಾಗುತ್ತಿದೆ ಎಂದರು.
ಸದಸ್ಯ ಕೃಷ್ಣರಾವ್​ ಕೊಡಂಚ ಮಾತನಾಡಿ, ಚಿಟ್ಪಾಡಿ ವಾರ್ಡ್​ನಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಕಟ್ಟಿದ ಅಕ್ರಮ ಕಟ್ಟಡಕ್ಕೆ ಸಂಬಂಧಿಸಿದಂತೆ ಹಿಂದಿನ ಪೌರಾಯುಕ್ತರು ಕೋರ್ಟ್​ಗೆ ತಪ್ಪು ಮಾಹಿತಿ ನೀಡಿದ್ದು, ಅವರ ವಿರುದ್ಧ ಯಾಕೆ ಕ್ರಮ ವಹಿಸಿಲ್ಲ ಎಂದು ಪ್ರಶ್ನಿಸಿದರು.
ಇದಕ್ಕೆ ಧ್ವನಿಕೂಡಿಸಿದ ಶಾಸಕರು, ಅಧಿಕಾರ ದುರುಪಯೋಗಿಸಿಕೊಂಡು ಇಂಜಿನಿಯರ್​ ವರದಿ ಪಡೆಯದೇ ಕಟ್ಟಡ ಕಾನೂನು ಬದ್ಧವಾಗಿದೆ ಎಂಬುದಾಗಿ ಕೋರ್ಟ್​ಗೆ ಮಾಹಿತಿ ನೀಡಿದ ಹಿಂದಿನ ಪೌರಾಯುಕ್ತರ ಬಗ್ಗೆ ಶಿಸ್ತುಕ್ರಮ ಜರಗಿಸಲೇ ಬೇಕು. ಈ ಬಗ್ಗೆ ರ್ನಿಣಯ ಕೈಗೊಂಡು ಇಲಾಖೆಗೆ ಶಿಫಾರಸ್ಸು ಮಾಡಬೇಕು ಎಂದು ಪೌರಾಯುಕ್ತರಿಗೆ ಸೂಚಿಸಿದರು. ಅಧ್ಯಕ್ಷರ ಮೂಲಕ ಕೋರ್ಟ್​ನಲ್ಲಿ ದಾವೆ ಹೂಡಲು ರ್ನಿಣಯಿಸಲಾಯಿತು. ಉಪಾಧ್ಯೆ ರಂಜನಿ ಹೆಬ್ಬಾರ್​ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here