ಮುದ್ರಾಡಿ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ವತಿಯಿಂದ 6 ನೇ ವರ್ಷದ ಶಾರದಾ ಮಹೋತ್ಸವ

0
27

ಹೆಬ್ರಿ : ಮುದ್ರಾಡಿ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ವತಿಯಿಂದ 6 ನೇ ವರ್ಷದ ಶಾರದಾ ಮಹೋತ್ಸವ ಮುದ್ರಾಡಿ ಶ್ರೀ ಗುರುರಕ್ಷಾ ಸೌಹಾರ್ದ ಸಹಕಾರಿ ಸಂಘದ ಆವರಣದಲ್ಲಿ ಸೋಮವಾರ ನಡೆಯಿತು.

ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಭಾರತೀಯರೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಜೀವನ ನಡೆಸಬೇಕು, ಶಾರದಾ ಮಹೋತ್ಸವದ ಮೂಲಕ ಸಮಾಜದ ಏಕತೆ ಬೆಳೆದು ಎಲ್ಲರೂ ಒಗ್ಗಟ್ಟಾಗಿ ಬಾಳುವಂತಾಗಲಿ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿದ ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು, ಶಾರದೆ ತಾಯಿಯ ರೂಪದಲ್ಲೇ ಇರುತ್ತಾಳೆ ಮಕ್ಕಳ ಭವಿಷ್ಯ ಬೆಳಗಿಸುವಲ್ಲಿ ತಂದೆ ತಾಯಿಯ ಪಾತ್ರ ಮುಖ್ಯವಾಗಿದೆ ಉತ್ತಮ ಸಂಸ್ಕಾರ ವಿದ್ಯೆ ನೀಡಿದಾಗ ಮಕ್ಕಳು ಯಶಸನ್ನು ಕಾಣುತ್ತಾರೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಎಂ. ಮಂಜುನಾಥ ಪೂಜಾರಿ ಮಾತನಾಡಿ ಕಿತ್ತಳೆ ಮಾರಿ ಶಾಲೆಯನ್ನು ತೆರೆದು ಎಷ್ಟೋ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ಹರೇಕಳ ಹಾಜಬ್ಬ ನಮಗೆಲ್ಲ ಮಾದರಿ, ನಾರಾಯಣಗುರು ನಿಗಮದ ಅಧ್ಯಕ್ಷನಾಗಿ ಆಯ್ಕೆಯಾದ ತಾನು ನಿಗಮದ ಮೂಲಕ ನಾರಾಯಣಗುರು ತತ್ವದಂತೆ ಒಂದೇ ಜಾತಿಗೆ ಸೀಮಿತವಾಗದೆ ಜಾತಿಬೇದ, ರಾಜಕೀಯ ಮರೆತು ಎಲ್ಲಾ ಸಮಾಜದವರಿಗೂ ಸೇವೆ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ವಿ.ಸುನಿಲ್ ಕುಮಾರ್, ಹೆಬ್ರಿ ತಹಶೀಲ್ದಾರ್ ಪ್ರಸಾದ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಪೂರ್, ಮಂಗಳೂರು ಮಾಜಿ ಮೇಯರ್ ಪ್ರತಿಭಾ ಕುಳಾಯಿ, ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ, ನ್ಯಾಯವಾದಿ ಶೇಖರ ಮಡಿವಾಳ, ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಲಕ್ಷಣ ಆಚಾರ್ಯ, ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಬಾಯರಿ, ಉದ್ಯಮಿ ಗೋಪಿನಾಥ ಭಟ್, ಕಾಡುಹೊಳೆ ಜನಪ್ರಿಯ ರೈಸ್ ಮಿಲ್ ಮಾಲೀಕ ಮಂಜುನಾಥ್, ಉದ್ಯಮಿ ಯೋಗಿಶ್ ಭಟ್, ಮುದ್ರಾಡಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ಹೆಗ್ಡೆ, ಗ್ರಾಮ ಪಂಚಾಯತ್ ಸದಸ್ಯ ಗಣಪತಿ ಎಂ, ಸಮಿತಿಯ ಕೋಶಾಧಿಕಾರಿ ಚಂದ್ರಶೇಖರ ಭಟ್ ಮುಂತಾದವರು ಉಪಸ್ಥಿತರಿದ್ದರು.

ಶಾರದಾ ಮೂರ್ತಿ ಪ್ರತಿಷ್ಠೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ನಡೆದ ರಸಪ್ರಶ್ನೆ ಸ್ಪರ್ಧೆಯನ್ನು ನೆಲ್ಲಿಕಟ್ಟೆ ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ಹೆಗ್ಡೆ ಉದ್ಘಾಟಿಸಿದರು, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ, ಸು ಫ್ರಮ್ ಸೊ ಮತ್ತು ಕಂತಾರ ಚಲನಚಿತ್ರ ಕಲಾವಿದ ದೀಪಕ್ ರೈ ಪಾಣಾಜೆ, ಮಸ್ಕಿರಿ ಕುಡ್ಲ ತಂಡದಿಂದ ತೆಲಿಕೆ ಬಂಜಿ ನಿಲಿಕೆ ಹಾಸ್ಯ ಕಾರ್ಯಕ್ರಮ, ಸಂಜೆ ಸ್ಥಳೀಯ ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ವೈಭವದ ಪುರ ಮೆರವಣಿಗೆಯೊಂದಿಗೆ ಶಾರದಾ ಮೂರ್ತಿ ವಿಸರ್ಜನೆ ನಡೆಯಿತು.

ಶಾಸಕ ಸುನಿಲ್ ಕುಮಾರ್ ದಂಪತಿ, ನಿವೃತ್ತ ಶಿಕ್ಷಕಿ ಇಂದಿರಾ ಬಾಯರಿ, ನಿವೃತ್ತ ಪಶು ವೈದ್ಯಕೀಯ ಅಧಿಕಾರಿ ನಾಗೇಶ್ ಪೈ, ಧೈವಾರಾದಕ ಭೋಜ ಪೂಜಾರಿ, ಬ್ಯಾಂಕಿಂಗ್ ಸೇವೆಗಾಗಿ ಯೂನಿಯನ್ ಬ್ಯಾಂಕ್ ಅಧಿಕಾರಿ ಆಶಾಲತಾ, ಭಜನಾ ಕ್ಷೇತ್ರದ ರಾಘವೇಂದ್ರ ನೆಲ್ಲಿಕಟ್ಟೆ, ಉದ್ಯಮ ರಂಗದಲ್ಲಿ ಹರಿಪ್ರಸಾದ್ ಶೆಟ್ಟಿ, ನಾಟಕ ರಂಗದಿಂದ ಸುಗಂಧಿ ಉಮೇಶ್ ಕಲ್ಮಾಡಿ, ಸಂಘಟನೆಗಾಗಿ ಜಯರಾಮ ಉಜೂರು ಮೊದಲಾದವರನ್ನು ಸನ್ಮಾನಿಸಲಾಯಿತು, ಶ್ರೇಷ್ಟ ಸಂಘ ಸಂಸ್ಥೆಗಳಿಗೆ ನೀಡಲಾಗುವ ಮುದ್ರಾಡಿ ಶಾರದೋತ್ಸವ ಪುರಸ್ಕಾರವನ್ನು ಬಲ್ಲಾಡಿ ಈಶ್ವರನಗರ ಕ್ರೀಡಾ ಮತ್ತು ಸಂಸ್ಕೃತಿಕ ಸಂಘಟನೆಗೆ ನೀಡಲಾಯಿತು, ಪಂಚಾಯಿತಿ ವ್ಯಾಪ್ತಿಯ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಚಂದ್ರಶೇಖರ ಭಟ್ ಸ್ವಾಗತಿಸಿ ಪ್ರಸ್ತಾವನೆಗೈದರು, ಶಿಕ್ಷಕ ಪ್ರಕಾಶ್ ಪೂಜಾರಿ ಮತ್ತು ಚೈತ್ರಾ ಕಬ್ಬಿನಾಲೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here