ಹೆಬ್ರಿ : ಕರ್ನಾಟಕ ರಾಜ್ಯ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಮುದ್ರಾಡಿ ಮಂಜುನಾಥ ಪೂಜಾರಿ ದಂಪತಿಗೆ ಕಬ್ಬಿನಾಲೆ ಗ್ರಾಮಸ್ಥರು ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಮುದ್ರಾಡಿಯಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ.ಯೋಗಿಂದ್ರ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು, ಕಪೋಳಿ ಶ್ರೀಧರ ಹೆಬ್ಬಾರ್ ಅಭಿನಂದನಾ ಭಾಷಣ ಮಾಡಿದರು, ಪಂಚಾಯತ್ ಮಾಜಿ ಸದಸ್ಯೆ ರಾಜೇಶ್ವರಿ ಹೆಬ್ಬಾರ್ ಮತ್ತು ಸವಿತಾ ಅವರು ಬಾಗಿನ ಸಮರ್ಪಿಸಿ ಆರತಿ ಬೆಳಗಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ತಾನೆಂದೂ ಕೈ ಕೆಸರು ಮಾಡಿಕೊಳ್ಳದೆ 30 ವರ್ಷಗಳಿಂದ ಪಂಚಾಯಿತಿ, ತಾ.ಪಂ, ಜಿ.ಪಂ. ಪ್ರತಿನಿಧಿಯಾಗಿ ಪ್ರಾಮಾಣಿಕ ರಾಜಕೀಯ ಜೀವನ ನಡೆಸಿ, ಹುಟ್ಟೂರ ಗ್ರಾಮಸ್ಥರ ಕಷ್ಟ ಸುಖಕ್ಕೆ ಸದಾ ಸ್ಪಂದಿಸಿದ ತೃಪ್ತಿ ಹೊಂದಿದ್ದೀನೆ, ನಿಗಮದ ಅಧ್ಯಕ್ಷನಾಗಿಯೂ ಅದೇ ಪ್ರಾಮಾಣಿಕತೆ ಮುಂದುವರೆಸುವೆ ಎಂದರು.

ರಾಜ್ಯ ಸಂಪನ್ಮೂಲ ವ್ಯಕ್ತಿ ಕಬ್ಬಿನಾಲೆ ಸೀತಾರಾಮ ಹೆಬ್ಬಾರ್ ಕಾರ್ಯಕ್ರಮ ಸಂಘಟಿಸಿ ನಿರೂಪಿಸಿದರು, ಪಂಚಾಯತ್ ಸದಸ್ಯ ಜಗದೀಶ್ ಪೂಜಾರಿ, ಸಮಿತಿಯ ಕಾರ್ಯದರ್ಶಿ ನಾಗರಾಜ ಶೆಟ್ಟಿಗಾರ್, ಮೋಹನ ಹೆಬ್ಬಾರ್, ಸುಬ್ರಮಣ್ಯ ಕಂಗಿನಾಯ, ಅಚ್ಯುತ ಪೂಜಾರಿ, ಸದಾಶಿವ ಶೆಟ್ಟಿ, ಗುರುಪ್ರಸಾದ ಹೆಬ್ಬಾರ್, ಮಮತಾ ಶೆಟ್ಟಿ, ರಾಜೇಶ್ವರಿ ಹೆಬ್ಬಾರ್, ಸವಿತಾ, ಪ್ರವೀಣ್, ದೋಗು ಪೂಜಾರಿ, ಪ್ರತಾಪ್ ಚಂದ್ರ ಶೆಟ್ಟಿ, ಪ್ರಭಾಕರ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.