ಮುಲ್ಕಿ: ಹಿಂದೂ ಯುವ ಸೇನೆ ಹಾಗೂ ಮಹಿಳಾ ಮಂಡಳಿ ಘಟಕದ ಆಶ್ರಯದಲ್ಲಿ 27ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಶ್ರೀ ಶಾರದೆಯ ವಿಸರ್ಜನಾ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬುಧವಾರ ಸಂಜೆ ಅರ್ಚಕ ಪ್ರಶಾಂತ್ ಭಟ್ ನೇತೃತ್ವದಲ್ಲಿ ವಿಸರ್ಜನಾ ಪೂಜೆ ನಡೆದು ಭವ್ಯ ಶೋಭ ಯಾತ್ರೆಗೆ ಚಾಲನೆ ನೀಡಲಾಯಿತು. ಬಳಿಕ ಶ್ರೀ ಶಾರದಾ ಮಾತೆಯ ಆಕರ್ಷಕ ಶೋಭಾಯಾತ್ರೆ ಶಿವಾಜಿ ಮಂಟಪದಿಂದ ಹೊರಟು ಬಪ್ಪನಾಡು ದೇವಸ್ಥಾನ, ಪಂಚಮಹಲ್ ರಸ್ತೆ, ಬಿಲ್ಲವ ಸಮಾಜ ಸೇವಾ ಸಂಘ ,ಮುಲ್ಕಿ ಬಸ್ ನಿಲ್ದಾಣವನ್ನು ಹಾದು ಬಡಗುಹಿತ್ಲು ಶಾಂಭವಿ ನದಿಯಲ್ಲಿ ವಿಗ್ರಹವನ್ನು ಜಲ ಸ್ತಂಭನಗೊಳಿಸಲಾಯಿತು.

ಈ ಸಂದರ್ಭ ಸಮಿತಿಯ ಗೌರವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು,ಮುಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಲಯನ್ಸ್ ಕ್ಲಬ್ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಕಿಶೋರ್ ಶೆಟ್ಟಿ ಬಪ್ಪನಾಡು, ಬಿರುವೆರ್ ಕುಡ್ಲ ಮುಲ್ಕಿ ಘಟಕದ ಗೌರವಾಧ್ಯಕ್ಷ ಕಿಶೋರ್ ಸಾಲ್ಯಾನ್, ಅಧ್ಯಕ್ಷ ಉಮೇಶ್ ಮಾನಂಪಾಡಿ, ಮುಲ್ಕಿ ಹಿಂದೂ ಯುವ ಸೇನೆ ಅಧ್ಯಕ್ಷ ಸಂತೋಷ್ ಶೆಟ್ಟಿ ಹೆಜಮಾಡಿ, ಮಹಿಳಾ ಮಂಡಳಿ ಅಧ್ಯಕ್ಷೆ ಲತಾ ಶೇಖರ್, ಉಪಾಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಜೀವನ್ ಪೂಜಾರಿ ಕೊಲ್ನಾಡು ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಕೋಲ್ನಾಡು ನಿರೂಪಿಸಿದರು