ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರು ಶಿರ್ಲಾಲು ಬೆಳ್ತಂಗಡಿ ತಾಲೂಕು ಬದ್ಯಾರು ದೇವಸ್ಥಾನದಲ್ಲಿ ತೆನೆ ತರುವ ಕಾರ್ಯಕ್ರಮ ನಡೆಯಿತು ಕ್ಷೇತ್ರದ ಅರ್ಚಕರಾದ ಸೂರ್ಯನಾರಾಯಣ ರಾವ್ ವಿಧಿ ವಿಧಾನವನ್ನು ನೆರವೇರಿಸಿದರು. ಚೆಂಡೆ ಬ್ಯಾಂಡ್ ವಾದ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆನೆಯನ್ನು ತರಲಾಯಿತು ಅನೇಕ ಮಂದಿ ಭಕ್ತಾದಿಗಳು ಊರಿನವರು ತೆನೆ ಮತ್ತು ಗಂಧ ಪ್ರಸಾದವನ್ನು ಸ್ವೀಕರಿಸಿದರು ಮತ್ತು ಮದ್ಯಾಹ್ನ 12.30ಕ್ಕೆ ಶ್ರೀ ಲೋಕನಾಥೇಶ್ವರ ದೇವರಿಗೆ ಹೊಸ ಅಕ್ಕಿ ನೈವೇದ್ಯ ಸಮರ್ಪಣೆ ಮತ್ತು ಮದ್ಯಾಹ್ನ ಮಹಾ ಪೂಜೆ, ಅನ್ನಸಂತರ್ಪಣೆ ನಡೆಯಲಿರುದು.
ರಾತ್ರಿ ವಿಜಯ ದಶಮಿ ಮಹಾ ಪೂಜೆ ಭಜನಾ ಮಂಗಳೋತ್ಸವವು ನಡೆಯಲಿರುದು. ಈ ಸಂದರ್ಭದಲ್ಲಿ ಆಡಳಿತ ಸಮಿತಿ ಭಜನಾ ಮಂಡಳಿ ಶ್ರೀದೇವಿ ಮಹಿಳಾ ಕೇಂದ್ರ ಮತ್ತು ಊರಿನವರು ಉಪಸ್ಥಿತಿ ಇದ್ದರು