ಅತ್ತೂರು ಬ್ಯಾಸಿಲಿಕಾ ಚರ್ಚ್ – ರೋಟರಿ ಕ್ಲಬ್ ಕಾರ್ಕಳ – ಕೆಎಂಸಿ ಮಣಿಪಾಲ್ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ

0
36


ಕಾರ್ಕಳ : ಗಾಂಧಿ ಜಯಂತಿ ಪ್ರಯುಕ್ತ ಅತ್ತೂರು ಬ್ಯಾಸಿಲಿಕಾ ಚರ್ಚ್ ಹಾಗೂ ರೋಟರಿ ಕ್ಲಬ್ ಕಾರ್ಕಳ ಮತ್ತು ಕೆಎಂಸಿ ಮಣಿಪಾಲ್ ಇವರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವು ಯಶಸ್ವಿಯಾಗಿ ನೆರವೇರಿತು. ಜಾನ್ ಆರ್. ಡಿ’ಸಿಲ್ವ ಅವರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ಕೆ. ನವೀನ್ಚಂದ್ರ ಶೆಟ್ಟಿ ಅವರು ಮಾತನಾಡಿ, “ರಕ್ತದಾನವು ಸಮಾಜಕ್ಕೆ ನೀಡಬಹುದಾದ ಅತ್ಯುತ್ತಮ ಕೊಡುಗೆ. ಒಂದು ಹನಿ ರಕ್ತ ಜೀವ ಉಳಿಸಲು ಕಾರಣವಾಗಬಹುದು. ಪ್ರತಿಯೊಬ್ಬರೂ ಸಾಧ್ಯವಾದಷ್ಟೂ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು” ಎಂದು ಕೋರಿದರು.

ಕಾರ್ಯದರ್ಶಿ ಚೇತನ್ ನಾಯಕ್, ಮಾಜಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್, ಸುರೇಶ ನಾಯಕ್, ಬಾಲಕೃಷ್ಣ ದೇವಾಡಿಗ ಮತ್ತು Icym ಅತ್ತೂರು ಪ್ರೆಸಿಡೆಂಟ್ ಪ್ರೀತಮ್ ಡಿ ಸೋಜ, ಹೆಲ್ತ್ ಕಮಿಷನ್ ಕೋಆರ್ಡಿನೇಟರ್ ಅತ್ತೂರು ಸಿರಿಲ್ ಪಿಂಟು ಕಾರ್ಯಕ್ರಮದಲ್ಲಿ ಹಾಜರಿದ್ದರು. ಅತ್ತೂರು ಬ್ಯಾಸಿಲಿಕಾ ಚರ್ಚಿನ ಫಾದರ್ ರೋಬಿನ್ ಸಂತಾಮಯೂರ್ ಅವರು ರಕ್ತದಾನದ ಮಹತ್ವವನ್ನು ವಿವರಿಸಿ, “ರಕ್ತದಾನ ಮಾನವೀಯತೆಯ ಉನ್ನತ ಸೇವೆ” ಎಂದು ಅಭಿಪ್ರಾಯಪಟ್ಟರು. ಕೆಎಂಸಿ ಮಣಿಪಾಲ್‌ನ ವೈದ್ಯಕೀಯ ತಂಡದ ಡಾಕ್ಟರ್‌ಗಳು ರಕ್ತದಾನ ಪ್ರಕ್ರಿಯೆ, ಅದರ ವೈಜ್ಞಾನಿಕ ಅಂಶಗಳು ಹಾಗೂ ಸುರಕ್ಷತೆ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.

ಶಿಬಿರದಲ್ಲಿ ಗಣನೀಯ ಸಂಖ್ಯೆಯಲ್ಲಿ ದಾನಿಗಳು ಪಾಲ್ಗೊಂಡು 47 ಯೂನಿಟ್ ಗಳಷ್ಟು ರಕ್ತವನ್ನು ಸಂಗ್ರಹ ಮಾಡಲಾಯಿತು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಶ್ರಮಿಸಿದ ಸಂಘಟಕರು, ಸ್ವಯಂಸೇವಕರು, ಚರ್ಚ್ ಹಾಗೂ ವೈದ್ಯಕೀಯ ತಂಡಕ್ಕೆ ರೋಟರಿ ಕ್ಲಬ್ ಕಾರ್ಕಳದ ಪರವಾಗಿ ಧನ್ಯವಾದಗಳು ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here