ಮಂಗಳೂರುಜೆಪ್ಪುಮಹಾಕಾಳಿಪಡ್ಪುಅಂಡರ್‌ ಬ್ರಿಜ್ಡ್‌  30 ದಿನದೊಳಗೆ ಸಾರ್ವಜನಿಕ ಸೇವೆಗೆ ನೀಡದಿದ್ದರೆ ಸಾರ್ವಜನಿಕರಿಂದಲೇ ಉದ್ಘಾಟನೆ  ಐವನ್‌ ಡಿʼಸೋಜಾ ಎಚ್ಚರಿಕೆ

0
19

ಮಂಗಳೂರು ಜೆಪ್ಪು ಮಹಾಕಾಳಿಪಡ್ಪು ಅಂಡರ್‌ಬ್ರಿಜ್ಡ್‌ ಕಾಮಗಾರಿ ಕಳೆದ 4 ವರ್ಷಗಳಿಂದ ಯಾವುದೇ ಕಾಮಗಾರಿ ನಡೆಸದೇ ಕೇವಲ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿ, 4 ವರ್ಷಗಳಿಂದ ಜನರಿಗೆ ಸತತವಾಗಿ ಸತಾಯಿಸದ ಬಿಜೆಪಿಯ ಸಂಸದ ಕ್ಯಾಪ್ಟನ್‌ ಬ್ರಿಜೇಷ್‌ ಚೌಟ ಮತ್ತು ಶಾಸಕ ವೇದವ್ಯಾಸ್‌ ಕಾಮತ್‌ ರಮೇಲೆ ಇಂದು ಕಾಂಗ್ರೆಸ್‌ ಕಾರ್ಯಕರ್ತರು ಐವನ್‌ ಡಿಸೋಜಾ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸುವ ಮೂಲಕ ತೀವ್ರವಾದ ಅಕ್ರೋಷವನ್ನು ವ್ಯಕ್ತಪಡಿಸಿದರು. ಕೂಡಲೇ ಅಂಡರ್‌ಬ್ರಿಜ್ಡ್‌ ಸಾರ್ವಜನಿಕ ಸೇವೆಗೆ ಬಿಡುಗಡೆಗೊಳಿಸಿ ಇಲ್ಲದಿದ್ದರೆ ಅಧಿಕಾರದಿಂದ ತೊಲಗಿ ಎಂದು ಕರೆ ನೀಡಿದರು 4 ವರ್ಷಗಳ ಹಿಂದೆ ಯು.ಟಿ ಖಾದರ್‌ರವರು ಈ ರಾಜ್ಯದ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಸ್ಮಾರ್ಟ್‌ ಸಿಟಿಯ ಮೂಲಕ ರಾಜ್ಯ ಹೆದ್ದಾರಿಯಿಂದ ಮಂಗಳೂರಿಗೆ ಪ್ರವೇಶ ನೀಡಲು ಮಂಗಳೂರಿನ ಹೆಬ್ಬಾಗಿಲು ಎಂದೇ ಗುರಿತಿಸಲ್ಪಟ್ಟಂತಹ ಈ ರಸ್ತೆಯ ಕಾಮಗಾರಿಯನ್ನು ಮಾಡಿದ್ದರೂ ಕೇವಲ ಒಂದು ಅಂಡರ್‌ಬ್ರಿಜ್ಡ್‌ ಮಾಡಿಕೊಡಲು ಲೋಕಸಭಾ ಸದಸ್ಯರಿಂದ ಹಾಗೂ ಶಾಸಕರಿಂದ ಅಗಲಿಲ್ಲ ಎಂಬುದು ಬಹಳ ದುರಾದೃಷ್ಟಕರ ಎಂದು ಮಾನಾಡುತ್ತಾ ಐವನ್‌ ಡಿʼಸೋಜಾ ತಿಳಿಸಿದರು.

ಅಂಡರ್‌ಬ್ರಿಜ್ಡ್‌ ಮಾಡುವಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ನಗರ ಪಾಲಿಕೆ ಬಿಜೆಪಿ   ಹಾಗೂ  ಕೇಂದ್ರ ಸರ್ಕಾರವು ಬಿಜೆಪಿ ಸರ್ಕಾರ ಇದ್ದು  ಅಂಡರ್‌ಪಾಸ್‌ ನ್ನು ಮಾಡಿಕೊಡಲು ನಾಲ್ಕು ವರ್ಷದಿಂದ ಕಾಮಗಾರಿಯನ್ನು ನಡೆಸುತ್ತಾ ಇರುವುದು ಎನು ಮಹಾ ದೊಡ್ಡ ಅಣೆಕಟ್ಟಿನ ಕಾಮಗಾರಿಯೇ? ಎಂದು ಐವನ್‌ ಡಿʼಸೋಜಾ ಪ್ರಶ್ನಿಸಿದರು. ಕೇವಲ ಅಂಡರ್‌ಬ್ರಿಜ್ಡ್‌ ಮಾಡಲು ನಾಲ್ಕು ವರ್ಷ ತೆಗೆದುಕೊಳ್ಳುವುದಾದರೆ ಬಿಜೆಪಿಯ ಸಂಸದರಿಗೆ ಶಾಸಕರಿಗೆ ರಾಜಕೀಯ ಇಚ್ಚಾಶಕ್ತಿ ಇಲ್ಲ ಎಂದು ಸ್ಪಷ್ಟವಾಗುತ್ತದೆ. ಇಚ್ಚಾಶಕ್ತಿ ಇಲ್ಲದವರು ಅಧಿಕಾದಲ್ಲಿ ಇರಲು ಕೂಡದು ಎಂದು ಇವತ್ತಿನ ಪ್ರತಿಭಟನೆ ಪ್ರಮುಖ ಅಂಶ ಎಂದು ತಿಳಿಸಿದರು. ರಾಜಕೀಯ ಇಚ್ಚಾಶಕ್ತಿ ಇದ್ದವರು ಚುನಾವಣೆಯಲ್ಲಿ ಗೆದ್ದ ಮೇಲೆ ಜನರ ಸೇವೆಯನ್ನು ಮಾಡುವಲ್ಲಿ ವಿಫಲರಾದರೆ ಅವರು ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಲೇಸು ಎಂದು ಐವನ್‌ ಡಿʼಸೋಜಾ ತಿಳಿಸಿದರು.

ಈ ಸಂದರ್ಭದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯ್ತು ಕೇವಲ ಒಂದೇ ದಿನದಲ್ಲಿ ಐನೂರಕ್ಕೂ ಅಧಿಕ ಮಂದಿ ಪ್ರತಿಭಟನೆ ನಡೆಸಿದ್ದು ಸಾರ್ವಜನಿಕರಲ್ಲಿ ಬಹಳ ಕೂತೂಹಲಕ್ಕೆ ಕಾರಣವಾಗಿತ್ತು. ಸಾರ್ವಜನಿಕರೆಲ್ಲರೂ ಸೇರಿ ಈ ರಸ್ತೆಯನ್ನು ಸರಿಪಡಿಸಲಾಗದ ಎಂ.ಪಿ. ಮತ್ತು ಎಂ.ಎಲ್‌.ಎ ಗಳಿಗೆ ದಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಫೋರೇಟರ್‌ ಅದ ಪ್ರವೀಣ್‌ ಚಂದ್ರ ಮಾತನಾಡಿ ಈ ರಸ್ತೆಯನ್ನು ಕೂಡಲೇ ಸರಿಪಡಿಸಬೇಕು  ರಾಜಕೀಯ ಇಚ್ಚಾಶಕ್ತಿ ಇಲ್ಲದ ಜನ ಪ್ರತಿನಿಧಿಗಳು  ಈ ರೀತಿಯ ವರ್ತನೆಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಐವನ್‌ ಡಿʼಸೋಜಾರವರು ಮಾತನಾಡಿ ಈ ರಸ್ತೆಯನ್ನು ಮೂವತ್ತು ದಿನದ ಒಳಗಡೆ ಸಾರ್ವಜನಿಕರ ಸೇವೆಗೆ ನೀಡದಿದ್ದಲ್ಲಿ ರೈಲ್ವೆ ಇಲಾಲೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಮತ್ತು ಮುತ್ತಿಗೆ ಹಾಕಲಾಗುವುದು ಸಾರ್ವಜನಿಕರು ಸೇರಿಕೊಂಡು ಈ ರಸ್ತೆಯ ಕಾಮಗಾರಿಗಳನ್ನು ಸಾರ್ವಜನಿಕರೇ ಮಾಡಿ ರಸ್ತಯನ್ನು ಉದ್ಘಾಟಿಸಲಾಗುವುದು ಎಂದು ಐವನ್‌ ಡಿʼಸೋಜಾ ಎಚ್ಚರಿಕೆ ನೀಡಿದರು. ಸ್ಥಳೀಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಕು| ಅಪ್ಪಿಯವರು ಮಾತನಾಡಿ ಸಾರ್ವಜನಿಕರು ಬರುತ್ತಿರುವ  ಬವಣೆಗೆ ಮತ್ತು ಅಪಘಾತಗಳಿಗೆ ಕಾರಣವಾಗಿರುವುದು ಈ ರಸ್ತೆಯನ್ನು ಸರಿಪಡಿಸದೇ ಇರುವುದು ಎಂದು ತಿಳಿಸಿದರು. ಬಿಜೆಪಿಯ ಆಡಳಿತದಿಂದ ಅನಾನೂಕೂಲವಾಗಿದೆ ಎಂದು ತಿಳಿಸಿದರು.

ದ.ಕ. ಜಿಲ್ಲಾ ಎಲ್ಲಾ ಸೇತುವೆಗಳು ಕಾಮಗಾರಿಗಳು ಅಪೂರ್ಣವಾಗಿವೆ ಪಡೀಲ್‌ ಕೆಳಸೇತುವೆ ಪಂಪ್ವೆಲ್‌ ಮೇಲ್‌ಸೇತುವೆ ಕೊಟ್ಟಾರ ಚೌಕಿ, ಮುಕ್ಕ, ಕೂಳೂರು ರಸ್ತೆಗಳು ತೀರಾ ಅವೈಜ್ಞಾನಿಕವಾಗಿವೆ ಇದನ್ನು ಖಂಡಿಸಬೇಕಾಗಿದೆ ಎಂದು ಐವನ್‌ ಡಿʼಸೋಜಾರವರು ತಿಳಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಬ್ಲಾಕ್ ಸಮಿತಿ ಅಧ್ಯಕ್ಷರು ಅಬ್ದುಲ್ ಸಲೀಂ, ಮಾಜಿ ಕಾರ್ಪೊರೇಟರ್ ಪ್ರವೀಣ್ ಚಂದ್ರಆಳ್ವ, ಅಶ್ರಫ್ ಬಜಾಲ್, ಅಪ್ಪಿಲತ, ನಾಗೇಂದ್ರ ಕುಮಾರ್, ಕವಿತಾ ವಾಸು, ವಿಜಯ ಲಕ್ಷ್ಮಿ, ಬಾಸ್ಕರ್ ರಾವ್, ಸತೀಶ್ ಪೆಂಗಲ್, ಪ್ರೇಮ್ ಬಲ್ಲಾಳ್ ಬಾಗ್, ಕಾಂಗ್ರೆಸ್ ನಾಯಕರಾದ ಸಾಹುಲ್ ಹಮೀದ್, ನವಾಜ್ ಜೆಪ್ಪು, ನೆಲ್ಸನ್ ರೊಚೆ, ಹೈದರ್, ಮನೀಶ್ ಬೋಳಾರ್, ಸೋಹನ್ ಎಸ್.ಕೆ, ಸುಧೀರ್ ಟಿ.ಕೆ, ಡೆನಿಸ್ ಡಿ’ಸಿಲ್ವ, ನೀತು ಡಿಸೋಜಾ, ಅಲ್ಸ್ಟನ್ ಡಿ’ಕುನ್ಹಾ , ಮೀನ ಟೆಲಿಸ್, ಚಂದ್ರಹಾಸ್ ಪೂಜಾರಿ ಕೋಡಿಕಲ್, ಬಬಿತಾ, ಪವಿತ್ರ ಕರ್ಕೇರ, ರಫೀಕ್, ಹೊನ್ನಯ್ಯ, ವಿದ್ಯಾ ಅತ್ತಾವರ, ಹರ್ಬರ್ಟ್ ಜೆಪ್ಪಿನಮೊಗರು, ಸುಧಾಕರ್ ಜೆಪ್ಪಿನಮೊಗರು, ದಿನೇಶ್ ರಾವ್, ವಸಂತ್ ಶೆಟ್ಟಿ ವೀರನಗರ, ಅನಿಲ್ ಲೋಬೋ, ಜೇಮ್ಸ್, ನೆಲ್ಸನ್, ವಿಕಾಸ್ ಶೆಟ್ಟಿ, ಶರತ್, ಹುಸೇನ್ ಬೋಳಾರ್, ಜೇಮ್ಸ್ ಪ್ರವೀಣ್, ಕ್ರಿಸ್ಟನ್ ಮಿನೇಜಸ್, ಅನಿಲ್ ರಸ್ಕಿನ್ಹ, ಶಾಲಿನಿ, ಅರ್ಚನ, ಬಶೀರ್, ಆಸಿಫ್ ಬಜಾಲ್, ಪೃಥ್ವಿರಾಜ್, ಕಿರಾಣ್‌  ಬಡ್ಲೆಗುತ್ತು, ಮಹೇಶ್, ರವಿ, ಡಾಲ್ಸಿ, ರಾಬಿನ್, ತಾರಾನಾಥ್, ದುರ್ಗಾಪ್ರಸಾದ್, ಪ್ರಶಾಂತ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here