ಶ್ರೀ ಲಕ್ಷ್ಮೀ ವೆಂಕಟೇಶ್ ದೇವಸ್ಥಾನ ಉಡುಪಿ ; ಚಂಡಿಕಾ ಯಾಗ

0
91


ಶ್ರೀ ಲಕ್ಷ್ಮೀ ವೆಂಕಟೇಶ್ ದೇವಸ್ಥಾನಉಡುಪಿ ಶ್ರೀ ದೇವರ ಸನ್ನಿಧಿಯಲ್ಲಿ ನವರಾತ್ರಿಯ ದಶಮಿ ದಿನದಂದು  ಚಂಡಿಕಾ ಯಾಗ , ಸಮಾರಾಧನೆ ನಡೆಯಿತು.
ಅರ್ಚಕರಾದ ಕೃಷ್ಣಾನಂದ ಭಟ್ ಮಣಿಪಾಲ್ , ಶರತ್ ಭಟ್ ಮಲ್ಪೆ  ಧಾರ್ಮಿಕ  ಪೂಜಾ ವಿಧಿಗಳನ್ನು  ನಡೆಸಿ ಕೊಟ್ಟರು , ದೇವಳದ ಅರ್ಚಕರಾದ  ದೀಪಕ್ ಭಟ್ , ದಯಾಘನ್ ಭಟ್ ,  ವಿನಾಯಕ ಭಟ್ ಹಾಗೂ
ಚಂಡಿಕಾ ಯಾಗದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಕೈಲಾಸನಾಥ್ ಶೆಣೈ ದಂಪತಿಗಳು ಸಹಕರಿಸಿದರು.
ಶ್ರೀದೇವರಿಗೆ ವಿಶೇಷ ಅಲಂಕಾರ , ಸಮೂಹಿಕ ನಮಸ್ಕಾರ , ಪೂರ್ಣಾಹುತಿ , ಮಹಾಪೂಜೆ ,  ಪಲ್ಲ ಪೂಜೆ , ಸಮಾರಾಧನೆ  , ಶ್ರೀ ಶಾರದಾ  ದೇವಿಗೆ  ಅರ್ಪಿಸಿದ  ಸೀರೆಗಳನ್ನು ಏಲಂ  ನೆಡೆಸಿ ವಿತರಣೆ ಮಾಡಲಾಯಿತು 
ಅಲೆವೂರು ಗಣೇಶ್ ಕಿಣಿ ,  ಪಿ ವಿ ಶೆಣೈ , ವಸಂತ್ ಕಿಣಿ  , ಶಾಂತರಾಮ ಪೈ , ಅಶೋಕ್ ಬಾಳಿಗಾ , ಉಮೇಶ್ ಪೈ , ಆಡಳಿತ ಮಂಡಳಿಯ  ಸದಸ್ಯರೂ  ಹಾಗೂ 
ಜಿ ಎಸ್ ಬಿ ಯುವಕ , / ಮಹಿಳಾ ಮಂಡಳಿಯ ಸದಸ್ಯರು , ಶ್ರೀ ಶಾರದಾ ಮೋಹೋತ್ಸವ ಸಮಿತಿಯ ಪದಾಧಿಕಾರಿಗಳು , ನೂರಾರು ಭಕ್ತರೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here