ಶ್ರೀ ಮಹಾವೀರ ಪದವಿ ಪೂರ್ವಕಾಲೇಜಿನಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನ ಸಮಾರಂಭವು ಶಿರ್ತಾಡಿ ಜವಾಹರ ಲಾಲ್ ನೆಹರು ಪ್ರೌಢಶಾಲೆಯಲ್ಲಿ ನಡೆಯಿತು.ಮಾಜಿ ಸಚಿವ, ಶ್ರೀ ಮಹಾವೀರಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಅಭಯಚಂದ್ರಜೈನ್‌ಅಧ್ಯಕ್ಷತೆ ವಹಿಸಿ, ಮಕ್ಕಳಿಗೆ ಎನ್.ಎಸ್.ಎಸ್. ಶಿಬಿರದ ಮಹತ್ವ ತಿಳಿಸಿ ಮುಂದೆ ಜವಾಬ್ದಾರಿಯುತ ಪ್ರಜೆಗಳಾಗಿ ದೇಶದಉನ್ನತಿಗೆಕೊಡುಗೆಯನ್ನು ನೀಡಬೇಕೆಂಬ ಕಿವಿಮಾತನ್ನು ಶಿಬಿರಾರ್ಥಿಗಳಿಗೆ ಹೇಳಿದರು.
ಶ್ರೀ ಮಹಾವೀರಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಹಾಗೂ ಜವಾಹರ್ ವಿದ್ಯಾಸಂಘದಅಧ್ಯಕ್ಷ ಸಂಪತ್ ಸಾಮ್ರಾಜ್ಯ, ಕೋಶಾಧಿಕಾರಿಡಾ. ಆಶೀರ್ವಾದ್, ಪಂಚಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಅರುಣ್ ಶೆಟ್ಟಿ, ಶಿರ್ತಾಡಿ ಗ್ರಾ.ಪಂ. ಅಧ್ಯಕ್ಷಆಗ್ನೆಸ್ ಡಿ’ಸೋಜಾ, ಗ್ರಾಮಪಂಚಾಯತಿಯ ಸದಸ್ಯಎಸ್. ಪ್ರವೀಣ್‌ಕುಮಾರ್, ಶ್ರೀ ಮಹಾವೀರ ಕಾಲೇಜಿನ ಪ್ರಾಂಶುಪಾಲ, ಎಸ್‌ಎಂಸಿ ಟ್ರಸ್ಟ್ ಕಾರ್ಯದರ್ಶಿ ಡಾ.ರಾಧಾಕೃಷ್ಣ, ಶ್ರೀ ಮಹಾವೀರ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷಿ÷್ಮÃ ಕೆ., ಮಾರ್ಲ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸವಿತಾ, ಶಾಲೆಯ ಹಳೆವಿದ್ಯಾರ್ಥಿ, ಉದ್ಯಮಿ ಶ್ರೀ ಗಜೇಂದ್ರ ಮತ್ತು ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್ ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ಎನ್.ಎಸ್.ಎಸ್‌ಯೋಜನಾಧಿಕಾರಿ ರಶ್ಮಿತಾ ಸ್ವಾಗತಿಸಿ, ಪೂರ್ಣಿಮಾ ನಿರೂಪಿಸಿ, ಕವಿತಾ ವಂದಿಸಿದರು.