ಉಡುಪಿ ಶ್ರೀ ಶಾರದಾಂಬ ದೇವಸ್ಥಾನ ಚಿಟ್ಪಾಡಿ ನವರಾತ್ರಿ ನವಮಿ ಪ್ರಯುಕ್ತ ಶ್ರೀದೇವಿ ಸನ್ನಿಧಿಯಲ್ಲಿ ಮಹಾ ಚಂಡಿಕಾಯಾಗ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನೆಡೆಯಿತು ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮಿಜೀ ಆಶೀರ್ವಾದದೊಂದಿಗೆ ದೇವಳದ ತಂತ್ರಿಗಳಾದ ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನ ದಲ್ಲಿ ದೇವಿಯ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ , ದೇವರಿಗೆ ವಿಶೇಷ ಅಲಂಕಾರ , ಪಂಚಾಮೃತ ಅಭಿಷೇಕ , ಸಾಮೂಹಿಕ ನಮಸ್ಕಾರ , ಪೂರ್ಣಾಹುತಿ , ಮಹಾಪೂಜೆ ಯನ್ನು ಅರ್ಚಕ ಬಳಗದವರು ನೆರವೇರಿಸಿದರು ಪಲ್ಲಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆಡೆಯಿತು ,ದೇವಳದ ಪ್ರಧಾನ ಅರ್ಚಕರಾದ ಜಯರಾಮ್ ಭಟ್ , ವಿಧಾತ್ರಿ ಜೆ ಭಟ್ ಹಾಗೂ ನೂರಾರು ಭಕ್ತರೊ ಉಪಸ್ಥರಿದ್ದರು.