ಕಾಸರಗೋಡು : ಕಲಾವಿದ, ಸಂಘಟಕ, ಉತ್ತಮ ಫೋಟೋಗ್ರಾಫರ್, ಬಹುಮುಖ ಪ್ರತಿಭೆ ಶ್ರೀ ವಸಂತ್ ಕೆರೆಮನೆ ಇವರೀಗೆ, ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಸಾರತ್ಯದ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025.”ವೇದಿಕೆಯಲ್ಲಿ ಪಾಂಗೋಡು ಶ್ರೀ ಕ್ಷೇತ್ರ ಹಾಗೂ ಕಾಸರಗೋಡು ದಸರಾ ಸಮಿತಿ ಸಂಯುಕ್ತವಾಗಿ ದಸರಾ ಗೌರವ ನೀಡಿದರು. ಪಾಂಗೋಡು ಕ್ಷೇತ್ರ ಸಾಂಸ್ಕೃತಿಕ ಘಟಕ ಅಧ್ಯಕ್ಷರೂ, ಕ್ಷೇತ್ರ ಪಾತ್ರಿಗಳಾದ ಪಾಂಗೋಡು ಪ್ರವೀಣ್ ನಾಯಕ್ ಶಾಲು ಹೊದಿಸಿ ಗೌರವಿಸಿದರು. ಡಾ. ವಾಮನ್ ರಾವ್ ಬೇಕಲ್ ಸ್ಮರಣಿಕೆ, ಸಂಧ್ಯಾರಾಣಿ ಟೀಚರ್ ಪ್ರಮಾಣಪತ್ರ ನೀಡಿ ವಸಂತ್ ಕೆರೆಮನೆ ಬಗ್ಗೆ ಪರಿಚಯ ಭಾಷಣ ಮಾಡಿದರು. ಸುಕೇಶ್ ಮಂಗಳೂರು, ನಾಗೇಶ್ ಮಂಗಳೂರು ಉಪಸ್ಥಿತರಿದ್ದರು.