ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮ ದಿನಾಚರಣೆ,ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಯುವ ಕಾಸರಗೋಡು ಕನ್ನಡ ಗ್ರಾಮೋತ್ಸವ – 2025 ಕಾರ್ಯಕ್ರಮವು ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ನವಂಬರ್ 4 ಮಂಗಳವಾರದಂದು ಬೆಳಿಗ್ಗೆ ಗಂಟೆ 11.00 ಕ್ಕೆ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ, ಚುಟುಕು ಕವಿಗೋಷ್ಠಿ , ಮಕ್ಕಳ ಕವಿಗೋಷ್ಠಿ, ಕನ್ನಡ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ. ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸುವ ಬಗ್ಗೆ ತಮ್ಮ ಒಪ್ಪಿಗೆ ಪತ್ರ ಹಾಗೂ ಕವಿಗಳು ಎ 4 ಅಳತೆಯ ಹಾಳೆಯಲ್ಲಿ ಬರೆದ ಸ್ವರಚಿತ ಕವನಗಳು 12 ಸಾಲು ಮೀರಬಾರದು. ಹಾಗೂ ನಾಲ್ಕು ಸಾಲಿನ ಮೂರು ಸ್ವರಚಿತ ಚುಟುಕುಗಳನ್ನು
ಕವರ್ ನಲ್ಲಿರಿಸಿ ತಮ್ಮ ಹೆಸರು,
ವಿಳಾಸ,ಮೊಬೈಲ್ ವಾಟ್ಸ್ ಪ್ ಸಂಖ್ಯೆ ಮತ್ತು ಪಾಸ್ಪೋರ್ಟ್ ಅಳತೆಯ ಫೋಟೋ ಚುಟುಕು ಪರಿಚಯ ಪತ್ರವನ್ನು ಬರಹ ಮೂಲಕ ದಿನಾಂಕ 14 ಅಕ್ಟೋಬರ್ 2025 ರ ಮುಂಚಿತವಾಗಿ ಸಾಮಾನ್ಯ ಅಂಚೆ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಬೇಕು.
ಕಾವ್ಯ ಚುಟುಕು,ಮಕ್ಕಳ ಸಾಹಿತ್ಯ ಕ್ಷೇತ್ರಗಳಲ್ಲಿ ರಚನಾತ್ಮಕವಾಗಿ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಅವರ ಗಣನೀಯ ಸಾಹಿತ್ಯ ಸಾಧನೆಯನ್ನು ಗೌರವಿಸುವ ಉದ್ದೇಶದಿಂದ ಕವನ,ಚುಟುಕು ವಾಚಿಸಿದ ಕವಿ, ಸಾಹಿತಿಗಳಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ರಾಜ್ಯ ಮಟ್ಟದ ಕವಿಗೋಷ್ಠಿಯ ಕವನ ವಾಚನ ಪ್ರಶಸ್ತಿಯನ್ನು ನೀಡಲು ಉದ್ದೇಶಿಸಲಾಗಿದೆ.
ಈ ಮಾಧ್ಯಮ ಪ್ರಕಟಣೆಯನ್ನು ತಮ್ಮ
ವಾಟ್ಸ್ ಪ್ ಬಳಗದ ಮೂಲಕ ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರದ ಸರ್ವಸದಸ್ಯರಿಗೂ ಫಾರ್ವರ್ಡ್ ಮಾಡಿ ಪ್ರೋತ್ಸಾಹಿಸಲು ಕೋರಲಾಗಿದೆ.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ),ಕನ್ನಡ ಗ್ರಾಮ, ಕಾಸರಗೋಡು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್,ಕನ್ನಡ ಗ್ರಾಮ,ಕಾಸರಗೋಡು ಜಂಟಿಯಾಗಿ ರಾಜ್ಯಮಟ್ಟದ ಕವಿಗೋಷ್ಠಿಯನ್ನು ಆಯೋಜಿಸಿರುತ್ತದೆ.
ಸಂಪರ್ಕ ವಿಳಾಸ:- ಶಿವರಾಮ ಕಾಸರಗೋಡು ಸಂಸ್ಥಾಪಕ ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್
ಕನ್ನಡ ಗ್ರಾಮ, ಕನ್ನಡ ಗ್ರಾಮ ರಸ್ತೆ ಕಾಸರಗೋಡು – 671121
(ದಾರಿ:- ಮಧೂರು ಶ್ರೀಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ ರಸ್ತೆ ಮೀಪುಗುರಿ ಬಸ್ ಸ್ಟಾಪ್, ಪಾರೆಕಟ್ಟೆ ಕನ್ನಡ ಗ್ರಾಮ ರಸ್ತೆ)
ಮೊಬೈಲ್:9448572016,9901951965
Home Uncategorized ಕಾಸರಗೋಡು ಕನ್ನಡ ಗ್ರಾಮೋತ್ಸವ – 2025: ಬಹುಭಾಷಾ ಕವಿಗೋಷ್ಠಿ, ಚುಟುಕು ಕವಿಗೋಷ್ಠಿ, ಮಕ್ಕಳ ಕವಿಗೋಷ್ಠಿ, ಕನ್ನಡ...