ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಶ್ರೀ ಶಾರದಾ ಮೊಹೋತ್ಸವದ ಸಮಿತಿಯ ಆಶ್ರಯದಲ್ಲಿ 23 ನೇ ವರ್ಷದ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾ ಯಾತ್ರೆ ಅದ್ದೊರಿಯಾಗಿ ನಡೆಯಿತು.
ಶ್ರೀ ಲಕ್ಷ್ಮೀ ವೆಂಕಟೇಶ ದೇವರ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ ಗೈದು , ಅರ್ಚಕರಾದ ದಯಾಘನ್ ಭಟ್ ಆರತಿ ಬೆಳಗಿಸಿ ಶ್ರೀ ಮಾತೆಯ ಭವ್ಯ ಶೋಭಾ ಯಾತ್ರೆ ಗೆ ಚಾಲನೆ ನೀಡಿದರು ದೇವಳದಿಂದ ಹೊರಟು ಐಡಿಯಲ್ ಸರ್ಕಲ್ , ಹಳೇ ಡಯಾನ ಸರ್ಕಲ್ , ತ್ರಿವೇಣಿ ಸರ್ಕಲ್ , ಚಿತ್ತರಂಜನ್ ವೃತ್ತ , ಕೊಳದಪೇಟೆಯಾಗಿ ದೇವಳಕ್ಕೆ ಬಂದು ಪದ್ಮ ಸರೋವರದಲ್ಲಿ ತೆಪ್ಪೋತ್ಸವ ನೆಡೆಸಿ ವಿಸರ್ಜನೆ ಮಾಡಲಾಯಿತು. ಮೆರವಣಿಗೆಯಲ್ಲಿ ವಿವಿಧ ಬಗೆಯ ಟ್ಯಾಬ್ಲೋ ಗಳು , ಚಂಡೆ , ನಾಸಿಕ್ ಬ್ಯಾಂಡ್ , ಮಂಗಲವಾದ್ಯ ದೊಂದಿಗೆ ಸಾವಿರಾರು ಭಕ್ತರೂ ಸಮವಸ್ತ್ರ ಧರಿಸಿ ಪಾಲ್ಗೊಂಡರು , ಮೆರವಣಿಗೆಯಲ್ಲಿ ವಿಶೇಷ ವಾಗಿ ಬೆಳ್ಳಿ ರಥದಲ್ಲಿ ಶ್ರೀ ಕೃಷ್ಣ ಅರ್ಜುನ್ , ಕೃತಕ ಆನೆ , ವಿಠೋಬಾ ರುಖುಮಾಯಿ , ಶ್ರೀ ಪುರಂದರದಾಸ , ಶ್ರೀ ಕನಕದಾಸ ವೇಷ ಧರಿಸಿ ಮೆರಗಿ ಹೆಚ್ಚಿಸಿದರು , ಸಾವಿರಾರು ಪುರುಷರು , ಮಹಿಳಾಯರು , ಯುವಕ , ಯುವತಿಯರು ಭಜನೆ ಸಂಕೀರ್ತನೆ ಹಾಡಿ ನಲಿದು ಕುಣಿದಾಡಿದರು , ವಿಶೇಷ ಆಕರ್ಷಣೆಯ ಉತ್ಸವದಲ್ಲಿ ಪಾಲ್ಗೊಂಡ ಪುರಾಣ ಪ್ರಸಿದ್ಧ ಹತ್ತಾರು ಟ್ಯಾಬ್ಲೋ ಗಳು ಭಕ್ತರ ಮನಸೆಳೆಯಿತು , ಊರಿನ ಮುಖ್ಯ ರಸ್ತೆಗಳಲ್ಲಿ ತಾಳಿರೋ ತೋರಣ ವಿದ್ಯುತ್ ದೀಪಾಲಂಕಾರ , ಸುಡು ಮದ್ದು ಪ್ರದರ್ಶನ ನಡೆಯಿತು.
ಸಮಾರಂಭದಲ್ಲಿ, ಆಡಳಿತ ಮೊಕ್ತೇಸರ ಪಿ ವಿ ಶೆಣೈ ,ಮಟ್ಟಾರ್ ವಸಂತ ಕಿಣೆ , ಅಲೆವೂರು ಗಣೇಶ್ ಕಿಣಿ , ಉಮೇಶ್ ಪೈ , ವಿಶ್ವನಾಥ್ ಭಟ್ , ಶಾಂತರಾಮ ಪೈ , ಕೈಲಾಸ್ ನಾಥ ಶೆಣೈ, ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್ , ಸುಬ್ರಮಣ್ಯ ಪೈ ,ಮಟ್ಟಾರ್ ಸತೀಶ್ ಕಿಣಿ , ನರಹರಿ ಪೈ , ನಾಗೇಶ್ ಪ್ರಭು , ಭಾಸ್ಕರ್ ಶೆಣೈ , ಅರುಣ್ ಕುಡ್ವ ಹಾಗೂ ದೇವಳದ ಆಡಳಿತ ಮಂಡಳಿಯ ಸದಸ್ಯರು , ಜಿ ಎಸ್ ಬಿ ಯುವಕ ಮಂಡಳಿ , ಭಗಿನಿ ವೃಂದ, ಜಿ ಎಸ್ ಬಿ ಮಹಿಳಾ ಮಂಡಳಿ , ಶ್ರೀ ಶಾರದಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು , ನೂರಾರು ಭಕ್ತಾಧಿಗಳು ಉಪಸ್ಥರಿದ್ದರು.