ಕ್ರಿಯೇಟಿವ್ ಕಾಲೇಜಿನಲ್ಲಿ ರೋಟರಿ ಇಂಟರಾಕ್ಟ್ ಇನ್ಸ್ಟಾಲೇಶನ್ ಕಾರ್ಯಕ್ರಮ

0
47

ಕಾರ್ಕಳ: ಕ್ರಿಯೇಟಿವ್ ಕಾಲೇಜಿನಲ್ಲಿ ರೋಟರಿ ಇಂಟರಾಕ್ಟ್ ಕ್ಲಬ್‌ನ ನೂತನ ಕ್ಲಬ್ ನ ಇನ್ಸ್ಟಾಲೇಶನ್ ಕಾರ್ಯಕ್ರಮ ನೆರವೇರಿತು. ಅತಿಥಿಯಾಗಿ ಆಗಮಿಸಿದ ರೋಟರಿ ಕ್ಲಬ್ ಕಾರ್ಕಳದ ಮಾಜಿ ಅಧ್ಯಕ್ಷರು ಹಾಗೂ ಇಸ್ರೋ ವಿಜ್ಞಾನಿ ಜನಾರ್ಧನ್ ಇದ್ಯಾ ರವರು ದೀಪ ಪ್ರಜ್ವಲಿಸಿ ಸಮಾರಂಭವನ್ನು ಉದ್ಘಾಟಿಸಿದರು. ನಂತರ ಅವರು ಇಂಟರಾಕ್ಟ್ ಚಟುವಟಿಕೆಗಳ ಮಹತ್ವ ಮತ್ತು ವಿದ್ಯಾರ್ಥಿಗಳ ಸಮಾಜಮುಖಿ ಬೆಳವಣಿಗೆಯ ಕುರಿತು ಮಾತನಾಡಿದರು.

ನೂತನ ಇಂಟರಾಕ್ಟ್ ಅಧ್ಯಕ್ಷರಾಗಿ ಎಚ್.ಎಂ. ಸಮೃದ್ಧ್ ಹಾಗೂ ಕಾರ್ಯದರ್ಶಿಯಾಗಿ ದಿಗಂತ್ ಅಧಿಕಾರ ಸ್ವೀಕರಿಸಿದರು. ತಮ್ಮ ತಂಡದ ಸದಸ್ಯರನ್ನು ಅವರು ಈ ಸಂದರ್ಭದಲ್ಲಿ ಪರಿಚಯಿಸಿದರು.

ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ಅವರು ನೂತನ ತಂಡದ ಪದಗ್ರಹಣ ನೆರವೇರಿಸಿ, ಹೊಸ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರಿಗೆ ಶುಭಹಾರೈಕೆಗಳನ್ನು ನೀಡಿದರು. ಅವರು “ಇಂಟರಾಕ್ಟ್ ಕ್ಲಬ್‌ನಲ್ಲಿ ಭಾಗಿಯಾಗುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಾಮಾಜಿಕ ಜವಾಬ್ದಾರಿ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಲು ಅವಕಾಶ ಸಿಗುತ್ತದೆ” ಎಂದು ಹೇಳಿದರು.

ಇಂಟರಾಕ್ಟ್ ಚೇರ್ಮನ್ ಬಾಲಕೃಷ್ಣ ದೇವಾಡಿಗ ಅವರು ಇಂಟೆರೆಕ್ಟ್ ಸಕಾರಾತ್ಮಕ ಬಳಕೆ ಹಾಗೂ ಅದರ ಮಹತ್ವದ ಕುರಿತು ಮಾತನಾಡಿದರು. ಕಾರ್ಕಳ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾದ ಜಗದೀಶ್ ಟಿ ನಾಯಕ್, ಹಾಗೂ ಕಾರ್ಯದರ್ಶಿ ಚೇತನ್ ನಾಯಕ್, ಕ್ರಿಯೇಟಿವ್ ಕ್ಲಬ್ ಕಾರ್ಡಿನೇಟರ್ ಜ್ಞಾನೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

ಇಂಟರಾಕ್ಟ್ ಕಾರ್ಡಿನೇಟರ್ ಯೋಗೀಶ್ ರವರು ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here