71ನೇ ವನ್ಯಜೀವಿ ಸಪ್ತಾಹ – 2025 : ಮಾಳ ಚೆಕ್ ಪೋಸ್ಟ್‌ನಲ್ಲಿ ಪರಿಸರ ಸ್ವಚ್ಛತಾ ಕಾರ್ಯಕ್ರಮ

0
37

ಕಾರ್ಕಳ: ಕುದುರೆಮುಖ ವನ್ಯಜೀವಿ ವಿಭಾಗದ ಆಶ್ರಯದಲ್ಲಿ 71ನೇ ವನ್ಯಜೀವಿ ಸಪ್ತಾಹ – 2025 ಅಂಗವಾಗಿ ಎಸ್.ಕೆ. ಬಾರ್ಡರ್ ಮಾಳ ಚೆಕ್ ಪೋಸ್ಟ್‌ನಲ್ಲಿ ಪರಿಸರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಂದರ್ಭದಲ್ಲಿ ಕುದುರೆಮುಖ ವನ್ಯಜೀವಿ ವಿಭಾಗದ ಡಿ.ಎಫ್.ಓ ಶಿವರಾಮ್ ಬಾಬು (ಐ.ಎಫ್.ಎಸ್) ಅವರು ವನ್ಯಜೀವಿ ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಯ ಅಗತ್ಯತೆ ಕುರಿತು ಮಾಹಿತಿ ನೀಡಿದರು.

ಕುದುರೆಮುಖ ವೈಲ್ಡ್‌ಲೈಫ್ ಸಬ್‌ಡಿವಿಷನ್‌ನ ಎ.ಸಿ.ಎಫ್ ಸತೀಶ್ ಎನ್ ಹಾಗೂ ಸಿದ್ದಾಪುರ ವೈಲ್ಡ್‌ಲೈಫ್ ಡಿವಿಷನ್‌ನ ಜಿಡಿ ದಿನೇಶ್ ಎ.ಸಿ.ಎಫ್ ಹಾಜರಿದ್ದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಭುವನೇಂದ್ರ ಕಾಲೇಜಿನ ರೋಟ್ರಾಕ್ಟ್ ಸದಸ್ಯರು, ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಮೂಡರ್ ಬಜೆಗೋಳಿ ಇದರ ಎನ್‌ಎಸ್ಎಸ್ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು. ದೈಹಿಕ ಶಿಕ್ಷಕರಾದ ಪ್ರವೀಣ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಎಸ್ ಕೆ ಬಾರ್ಡರ್ ಮಾಳ ಚೆಕ್ ಪೋಸ್ಟ್ ನಿಂದ ಸುಮಾರು 10 ಕಿ.ಮೀ ವರೆಗೆ ರಸ್ತೆಯ ಇಕ್ಕೆಲದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸ ಹೆಕ್ಕುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿ, ಪಿ.ಡಿ.ಜಿ ಭರತೇಶ್ ಆದಿರಾಜ್, ಜನಾರ್ಧನ್ ಇದ್ಯಾ, ಇಕ್ಬಾಲ್ ಅಹಮದ್, ಪದ್ಮಪ್ರಸಾದ್ ಜೈನ್, ಚೇತನ್ ನಾಯಕ್, ರವೀಂದ್ರ ಮೊಯ್ಲಿ, ನಿರಂಜನ್ ಜೈನ್, ಪ್ರಭ ನಿರಂಜನ್, ಬಾಲಕೃಷ್ಣ ದೇವಾಡಿಗ, ವಿಜೇಂದ್ರ ಕುಮಾರ್, ಶ್ರೀಶ ಭಟ್, ಡಯಾಸ್ ಚೆರಿಯನ್ ಹಾಗೂ ದಿವಾಕರ್ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಕಳದ ವತಿಯಿಂದ ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಸಂದೇಶ ನೀಡಲಾಯಿತು.

LEAVE A REPLY

Please enter your comment!
Please enter your name here