ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ನವರಾತ್ರಿ ವೇದಿಕೆಯಲ್ಲಿ, ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಪ್ರಯೋಜಕತ್ವದಲ್ಲಿ ನಡೆದ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025.ಸರಣಿ ಕಾರ್ಯಕ್ರಮ ದಲ್ಲಿ ನಡೆದ “ಕಾಸರಗೋಡು ದಸರಾ ಕವಿಗೋಷ್ಠಿ ಯಲ್ಲಿ ಮೇರು ಕವಿ ಸಂಘಟಕಿ, ಕನ್ನಡ ಭವನ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷೆಯಾದ ಶ್ರೀಮತಿ ಶೋಭಾ ದಿನೇಶ್ ಉದ್ಯಾವರ ಇವರೀಗೆ “ಕಾಸರಗೋಡು ದಸರಾ ಕವಿ ಸಾಧಕ ಪ್ರಶಸ್ತಿ ನೀಡಲಾಯಿತು. ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡು ಜಿಲ್ಲಾ ಘಟಕ ಸಹಯೋಗದಲ್ಲಿ ಕಾರ್ಯಕ್ರಮ ನಡೆದಿತ್ತು. ಡಾ ಕೊಳಚಪ್ಪೆ ಗೋವಿಂದ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಸುರೇಶ್ ನೆಗಳಗುಳಿ ಅದ್ಯಕ್ಷತೆಯಲ್ಲಿ, ವಿರಾಜ್ ಅಡೂರ್, ದೇವರಾಜ್ ಆಚಾರ್ಯ, ವಿಶಾಲಾಕ್ಷ ಪುತ್ರಕಳ, ಸಂದ್ಯಾ ರಾಣಿ ಟೀಚರ್, ಡಾ. ಶಾಂತ ಪುತ್ತೂರು, ಜಯಾನಂದ ಪೆರಾಜೆ, ರೇಖಾ ಸುದೇಶ್ ರಾವ್, ಪ್ರಭಾವತಿ ಕೆದಿಲ್ಲಾಯ ಮುಂತಾದವರಿದ್ದರು.