ವರದಿ ರಾಯಿ ರಾಜ ಕುಮಾರ
ಮಂಗಳೂರು ಎಸ್.ಡಿ.ಎಂ. ವ್ಯವಹಾರ ಆಡಳಿತ ಕಾಲೇಜಿನ ಗ್ರಾಹಕ ಕ್ಲಬ್ ನ ಉದ್ಘಾಟನೆಯನ್ನು ನ್ಯಾಯವಾದಿ, ನೋಟರಿ, ಹಳೆಯ ವಿದ್ಯಾರ್ಥಿ ರಾಘವೇಂದ್ರ ಪಿ ಅವರ ಉದ್ಘಾಟಿಸಿದರು. ಅವರು ತಮ್ಮ ಭಾಷಣದಲ್ಲಿ ಗ್ರಾಹಕ ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಗ್ರಾಹಕರು ಕಾನೂನಿನ ಅಂಶಗಳನ್ನು ತಿಳಿಯುವ ಅಗತ್ಯವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ವೇದಿಕೆಯಲ್ಲಿ ಉಪ ಪ್ರಾಂಶುಪಾಲೆ ದಿವ್ಯ ಉಚ್ಚಿಲ್, ಗ್ರಾಹಕ ಕ್ಲಬ್ ಸಂಚಾಲಕಿ ಶ್ವೇತ ವೈ, ಪ್ರೀತಿಕಾ, ಡಾ. ಸೌಮ್ಯ ಹೆಗ್ಡೆ ಉಪಸ್ಥಿತರಿದ್ದರು. ಸ್ರೀಜನ್ ಸ್ವಾಗತಿಸಿದರು. ಶ್ರೇಯಾ ಶೆಟ್ಟಿ ವಂದಿಸಿದರು.