ವರದಿ ರಾಯಿ ರಾಜ ಕುಮಾರ
ಉಳ್ಳಾಲದ ಭಾರತ್ ಬೀಡಿ ಡಿಪೋ ಎದುರು ಬೀಡಿ ಕಾರ್ಮಿಕರಿಗೆ ಬಾಕಿಯಾಗಿರುವ ತುಟ್ಟಿ ಭತ್ಯೆ ಹಾಗೂ ಮಜೂರಿಯನ್ನು ತಕ್ಷಣ ಪಾವತಿಸಬೇಕೆಂದು ಬೀಡಿ ಕಾರ್ಮಿಕರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. 2018 ರಿಂದ 2024 ರವರೆಗಿನ ತುಟ್ಟಿ ಭತ್ಯೆಯನ್ನು ಸಾವಿರ ಬೀಡಿಗೆ ರೂ 301.92 ರಂತೆ ನೀಡಬೇಕೆಂದು ಸರಕಾರ ಕಾನೂನು ಜಾರಿಗೊಳಿಸಿದ್ದರೂ ಈ ತನಕ ನೀಡದೇ ಇರುವ ಕಾರಣ ಜೆಸಿಟಿಯು ವತಿಯಿಂದ ಧರಣಿ ಸತ್ಯಾಗ್ರಹ ಕಾರ್ಮಿಕರಿಂದ ನಡೆಯುತ್ತಿದ್ದು ತಕ್ಷಣ ಪಾವತಿಗೆ ಒತ್ತಾಯಿಸುತ್ತಿದ್ದಾರೆ.
.