ಅ.11ರಂದು ಗಮ್ಮತ್ ಕಲಾವಿದೆರ್ ದುಬೈ ಯುಎಇ ತಂಡದ ಮತ್ತೊಂದು ಅಮೋಘ ನಾಟಕ ಪ್ರದರ್ಶನ

0
40

ದುಬೈ : ಯುಎಇಯಲ್ಲಿ ಇರುವ ನಾಟಕ ಅಭಿಮಾನಿಗಳಿಗೆ ಕಳೆದ ಹಲವಾರು ವರ್ಷಗಳಿಂದ ಮನರಂಜನೆ ನೀಡುತ್ತ ಬಂದಿರುವ ಗಮ್ಮತ್ ಕಲಾವಿದೆರ್ ದುಬೈ ಯುಎಇ ತಂಡವು ಅಕ್ಟೋಬರ್ 11 ಮತ್ತೊಮ್ಮೆ ಮನರಂಜನೆ ನೀಡಲು ತಯಾರಾಗಿ ನಿಂತಿದೆ.
ಅಕ್ಟೋಬರ್ ಹನ್ನೊಂದರಂದು ಸಂಜೆ ಐದು ಗಂಟೆಗೆ ನಗರದ ಎಮಿರೇಟ್ಸ್ ಥೀಯೇಟರ್ ಉಮ್ ಅಲ್ ಸೈಫ್ ನ ಸಭಾಂಗಣದಲ್ಲಿ “ಪೋನಗ ಕೊನೊಪರಾ..?” ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ನಾಟಕ ನಿರ್ದೇಶಕರಾದ ವಿಶ್ವನಾಥ ಶೆಟ್ಟಿಯವರು ಮಾಧ್ಯಮದೊಂದಿಗೆ ಮಾತನಾಡುತ್ತಾ ಖ್ಯಾತ ರಂಗ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ ರಚನೆಯ “ಪೋನಗ ಕೊನೊಪರಾ” ಈ ನಾಟಕವು ವಿಶೇಷ ಶೈಲಿಯಲ್ಲಿ ಮೂಡಿಬಂದಿದೆ.ಈ ನಾಟಕವು ಯುಎಇಯ ನಾಟಕ ಅಭಿಮಾನಿಗಳಿಗೆ ಇಷ್ಟವಾಗಬಹುದು.ಯುಎಇಯಲ್ಲಿ ಇರುವ ತುಳುವರು ಈ ನಾಟಕವನ್ನು ನೊಡಲೆಬೇಕು ಎಂದು ವಿನಂತಿಸುತ್ತ ಕಾರ್ಯಕ್ರಮಕ್ಕೆ ಊರಿಂದ ಮುಖ್ಯ ಅತಿಥಿಯಾಗಿ ಮ ಪ್ರಖ್ಯಾತ ಜ್ಯೋತಿಷ್ಯರು ಮುಂಬಯಿ,ಸೈನ್ ಕನ್ನಡ‌ ಸಂಘದ ಅಧ್ಯಕ್ಷರಾದ ಡಾ.ಎಂ.ಜೆ.ಪ್ರವೀಣ್ ಭಟ್, ಖ್ಯಾತ ಮುಳುಗು ತಜ್ಞ ,ಸಮಾಜ ಸೇವಕರಾದ ಈಶ್ವರ್ ಮಲ್ಪೆ, ಕರಾವಳಿಯ ಪ್ರಸಿದ್ಧ ವಾಹಿನಿಯ ಸಂಪಾದಕರಾದ ವಾಲ್ಟರ್ ನಂದಳಿಕೆಯವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here