ವರದಿ ಮಂದಾರ ರಾಜೇಶ್ ಭಟ್
ದಕ್ಷಿಣ ಕನ್ನಡ: ಮೂಡುಬಿದಿರೆಯ ಪ್ರವೀಣ್ ಎಸ್ ಲೋಬೊ ಇವರು ನೀಡಿದ ಕಾನೂನು ಸೇವೆಯನ್ನು ಪರಿಗಣಿಸಿ ಸರಕಾರ ನೋಟರಿಯಾಗಿ ಆಯ್ಕೆ ಮಾಡಿದೆ.
ನ್ಯಾಯಾಂಗ ಸೇವೆಯಲ್ಲಿ ಸುಮಾರು 20 ವರ್ಷಗಳ ಅನುಭವ ಹೊಂದಿರುವ ಇವರು ಹಲವಾರು ವರ್ಷಗಳಿಂದ ಕ್ರಿಶ್ಚಿಯನ್ ಮ್ಯಾರೇಜ್ ರಿಜಿಸ್ಟರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ತಮ್ಮ ಸೇವಾ ಕ್ಷೇತ್ರದಲ್ಲಿ ಅನುಭವಿಯಾಗಿದ್ದಾರೆ
ನೋಟರಿ ಎಂದರೆ, ಸರ್ಕಾರ ಮಾನ್ಯತೆ ನೀಡಿದ ಅಧಿಕಾರಿಯಾಗಿದ್ದು, ಪ್ರಮುಖ ಕಾನೂನು ದಾಖಲಾತಿಗಳ ಉತ್ತಮ ದೃಢೀಕರಣ ಮತ್ತು ಪ್ರಮಾಣಪತ್ರ ನೀಡುವ ಕಾರ್ಯವನ್ನು ನಿರ್ವಹಿಸುತ್ತಾರೆ. ಆಸ್ತಿ ದಾಖಲೆಗಳು, ಒಪ್ಪಂದಗಳು, ವಿಲ್, ಟ್ರಸ್ಟ್ ಮುಂತಾದ ದಾಖಲೆಗಳಲ್ಲಿ ಸತ್ಯತೆ ಮತ್ತು ಪ್ರಾಮಾಣಿಕತೆಯನ್ನು ಸಾಬೀತುಪಡಿಸುವ ಜವಾಬ್ದಾರಿಯ ಹುದ್ದೆಯಾಗಿದ್ದು, ನೋಟರಿ ತನ್ನ ಕರ್ತವ್ಯದ ಅಂಗವಾಗಿ,ಪ್ರಮಾಣ ನಿರ್ವಹಿಸುವುದು ಒಪ್ಪಂದಗಳಿಗೆ, ದಾಖಲೆಗಳಿಗೆ ದೃಢೀಕರಣ ನೀಡುವುದು,ಸಾರ್ವಜನಿಕರಿಗೆ ನ್ಯಾಯ ಅಥವಾ ನ್ಯಾಯಾರ್ಥ ಸೇವೆ ಒದಗಿಸುವ ಮಹತ್ತರ ಸೇವೆಯನ್ನು ನಿರ್ವಹಿಸಬೇಕಾಗುತ್ತದೆ ಗ್ರಾಮೀಣ ಪ್ರದೇಶವನ್ನು ಹೊಂದಿದ ಮೂಡಬಿದರೆ ಪ್ರದೇಶದಲ್ಲಿ ಶ್ರೀಯುತ ಲೋಬೊ ಅವರ ಆಯ್ಕೆ ದಾಖಲೆಗಳ ದೃಢೀಕರಣ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲಿದೆ. ಸಾರ್ವಜನಿಕರಿಗೆ ಪ್ರಮಾಣಪತ್ರಗಳು, ಅಫಿಡವಿಟ್‌ಗಳು, ಒಪ್ಪಂದಗಳು ಮತ್ತು ಇತರ ಕಾನೂನು ದಾಖಲೆಗಳನ್ನು ತ್ವರಿತವಾಗಿ ಮತ್ತು ವಿಶ್ವಾಸಾರ್ಹವಾಗಿ ದೃಢೀಕರಿಸಲು ಇದರಿಂದ ಅನುಕೂಲವಾಗಲಿದೆ.
ಪ್ರವೀಣ್ ಎಸ್ ಲೋಬೊ ಅವರ ಆಯ್ಕೆಗೆ ಜನರಿಂದ ಅಭಿನಂದನೆಗಳು ವ್ಯಕ್ತವಾಗಿವೆ. ಇವರ ಸೇವೆಯು ಸಮಾಜದಲ್ಲಿ ನ್ಯಾಯ ಮತ್ತು ಪ್ರಾಮಾಣಿಕತೆ ಬೆಳೆಯಲು ಬಹುದೊಡ್ಡ ಹಾದಿ ತೋರಲಿದೆ.