ಶೃಂಗೇರಿ ಮಠದಿಂದ ಸರ್ವ ಸುಸಜ್ಜಿತ ಸಂಚಾರಿ ಆಸ್ಪತ್ರೆ ಲೋಕಾರ್ಪಣೆ

0
33


ವರದಿ ರಾಯಿ ರಾಜ ಕುಮಾರ
ಶೃಂಗೇರಿ ಹಿರಿಯ ಜಗದ್ಗುರುಗಳ 75ನೇ ಹುಟ್ಟುಹಬ್ಬದ ಪ್ರಯುಕ್ತ ಎಲ್ಲಾ ರೀತಿಯಿಂದಲೂ ಸರ್ವ ಸುಸಜ್ಜಿತವಾದ, ಎಲ್ಲಾ ವಿಧದ ಚಿಕಿತ್ಸೆಗಳೂ ಲಭ್ಯವಿರುವ ವಿನೂತನ ಮಾದರಿಯ ಸಂಚಾರೀ ಆಸ್ಪತ್ರೆಯನ್ನು ಇಂದು ಲೋಕಾರ್ಪಣೆ ಗೊಳಿಸಿದರು. ಕಿರಿಯ ಜಗದ್ಗುರುಗಳು ಈ ಬಗ್ಗೆ ವಿವರಣೆ ನೀಡಿ ಇಂತಹ ಅಪೂರ್ವವಾದ ಸಂಚಾರೀ ಆಸ್ಪತ್ರೆಯಲ್ಲಿ ಒಂದು ಆಸ್ಪತ್ರೆಯಲ್ಲಿ ದೊರಕುವ ಎಲ್ಲ ರೀತಿಯ ಸೌಲಭ್ಯಗಳು ಒಂದೇ ಸೂರಿ ನಡಿ ಜನರು ಅಪೇಕ್ಷೆ ಪಟ್ಟಲ್ಲಿ ದೊರಕುತ್ತಿರುವುದು ಸಂತಸಕರ ಸಂಗತಿ. ಇದು ಬಡವರು ಹಾಗೂ ಸಾಮಾನ್ಯ ಜನರಿಗೆ ಬಹಳ ಉಪಯುಕ್ತಕರವಾದ ಮತ್ತು ಸ್ಥಳೀಯವಾಗಿ ಅವರಿದ್ದಲ್ಲಿಯೇ ಎಲ್ಲ ಸೌಲಭ್ಯಗಳು ದೊರಕುವಂತೆ ಆಗಿರುವುದು ಬಹಳ ಸಂತಸವನ್ನು ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿಗಳು, ಅರ್ಚಕ ವರ್ಗ, ಸಾರ್ವಜನಿಕರು ಹಾಜರಿದ್ದರು.

LEAVE A REPLY

Please enter your comment!
Please enter your name here