ಕೈಗೊಂಡ ಕೆಲಸದಲ್ಲಿ ಹೆಮ್ಮೆ, ಪ್ರೀತಿಯಿರಲಿ:  ಶಕೀಲಾ ಹೆಗ್ಡೆ

0
27

ಬ್ರಹ್ಮಾವರ:  ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಉದ್ಯಮ ಶೀಲಾತಬಿವೃದ್ಧಿ  ತರಬೇತಿಯ  ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಾತನಾಡಿದ  ಶಕೀಲಾ ಹೆಗ್ಡೆ, ಮಾಲಕರು, ಕೌಶಲ್ಯ ಬ್ಯೂಟಿ ಪಾರ್ಲರ್, ಬ್ರಹ್ಮಾವರ ಹಾಗೂ ಅತಿಥಿ ಉಪನ್ಯಾಸಕರು, ಬ್ಯೂಟಿ ಪಾರ್ಲರ್ ತರಬೇತಿ.

ಅವರು ಶಿಬಿರಾರ್ಥಿಗಳನ್ನುದ್ದೇಶಿಸಿ ಉದ್ಯಮದಲ್ಲಿ ಯಾವುದೇ ಕ್ಷೇತ್ರವಾದರೂ ಸರಿಯೇ ಮುಖ್ಯವಾಗಿ  ಮಾಡುವ ಕೆಲಸದ ಮೇಲೆ ಪ್ರೀತಿಯಿರಬೇಕು. ಮೊಟ್ಟ ಮೊದಲಿಗೆ ನಮ್ಮನ್ನು ನಾವು ಪ್ರೀತಿಸಬೇಕು, ಆಗ ನಮ್ಮ ಕೆಲಸದ ಮೇಲೆ ನಮಗೆ ಆಸಕ್ತಿ, ಖುಷಿರುತ್ತದೆ. ಏನೇ ತೊಂದರೆಗಳು ಬಂದರೂ ಅವುಗಳನ್ನು ನಿಶ್ಚಿಂತೆಯಿಂದ ಹೋಗಲಾಡಿಸಿ, ಗುರಿ ಸಾಧಿಸುವಲ್ಲಿ ನಾವು ಸಫಲತೆಯನ್ನು ಕಂಡುಕೊಳ್ಳಲು  ಸಾಧ್ಯವಾಗುತ್ತದೆ. ಮಹಿಳೆಯರನ್ನು ಅತ್ಯಂತವಾಗಿ ಆಕರ್ಷಿಸುವ ಕ್ಷೇತ್ರವಾಗಿರುವುದು ವಸ್ತ್ರ ವಿನ್ಯಾಸ.  ಟೈಲರಿಂಗ್, ಬ್ಯೂಟಿ ಪಾರ್ಲರ್ ಮುಂತಾದ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆರ್ಥಿಕವಾಗಿ ಮುಂದೆ ಬರಲು ಸಾಕಷ್ಟು ಅವಕಾಶಗಳು ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿದೆ. ಸರಕಾರದಿಂದ ಹಲವು ಉತ್ತಮ ಸೌಲಭ್ಯಗಳು ಮಹಿಳೆಯರ ಅಭಿವೃದ್ಧಿಗಾಗಿ ಇವೆ, ಅವುಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡಲ್ಲಿ ನಮ್ಮ  ದೇಶದ ಅಭಿವೃದ್ಧಿಯಲ್ಲಿ ನಮ್ಮ ಪಾಲು ಕಿಂಚಿತ್ತಾದರೂ ನೀಡಿದಂತಾಗುತ್ತದೆ. ಯಾವುದೇ ಕ್ಷೇತ್ರವಾಗಿರಲಿ ಉದ್ಯಮ ಪ್ರಾರಂಭಿಸಿದ ತಕ್ಷಣ ನಮಗೆ ಯಶಸ್ಸು ಸಿಗುವುದಿಲ್ಲ, ಇಂತಿಷ್ಟು ಕಾಲಮಿತಿಯಿರುತ್ತದೆ, ನಮ್ಮ ಸಂಪೂರ್ಣ ಸಮಯ, ಆಲೋಚನೆ, ಮನಸ್ಸು, ಎಲ್ಲವನ್ನೂ ಉದ್ಯಮದ ಯಶಸ್ಸಿಗೆ ನೀಡಬೇಕಾಗುತ್ತದೆ. ಹಾಗದಲ್ಲಿ ಮಾತ್ರವೇ ಉದ್ಯಮದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಶ್ರದ್ಧೆಯಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಿ ಯಶಸ್ಸು ಖಂಡಿತವಾಗಿ ಸಿಗುತ್ತದೆ ಎಂದು ಹೇಳಿ  ಶಿಬಿರಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ತುಂಬಿ ಶುಭ ಹಾರೈಸಿದರು.

ಅದೇ ರೀತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ  ಡಾ. ಬೊಮ್ಮಯ್ಯ ಎಂ  ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ  ತರಬೇತಿಯನ್ನು ಶ್ರದ್ಧೆಯಿಂದ ಕಲಿಯಿರಿ, ಕಲಿತ ವಿದ್ಯೆ ಎಂದಿಗೂ ನಿಮ್ಮ ಕೈ ಬಿಡುವುದಿಲ್ಲ. ಶ್ರದ್ಧೆಯಿಂದ, ಗಮನವಿಟ್ಟು ಕಲಿಯಿರಿ. ಎಂದು ಹೇಳಿದರು.  ಅದೇ ರೀತಿ ಸರಕಾರದ ಹಾಗು ಬ್ಯಾಂಕಿನ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ಪಡೆದುಕೊಳ್ಳಿ. ಅದೇ ರೀತಿ ಸಂಸ್ಥೆಯ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಗ್ರಾಮೀಣ ಜನರು ತರಬೇತಿಯನ್ನು ಪಡೆದು ಆರ್ಥಿಕ ಪ್ರಗತಿಯನ್ನು ಸಾಧಿಸುವಂತೆ ಪ್ರೇರೇಪಿಸಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. 

 ಈ ಸಂದರ್ಭದಲ್ಲಿ   ಉಪನ್ಯಾಸಕಿ ಚೈತ್ರ . ಕೆ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು ಹಾಗು ಉಪನ್ಯಾಸಕರಾದ ಸಂತೋಷ್ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here