ಕೋಡಿ ಬೆಂಗ್ರೆ ಹಂಗಾರಕಟ್ಟೆ ಬಾರ್ಜ್​ ಲೋಕಾರ್ಪಣೆ

0
55

ಉಡುಪಿ: ಕೋಡಿ ಬೆಂಗ್ರೆಯಿಂದ ಹಂಗಾರಕಟ್ಟೆಗೆ ಸ್ಥಳಿಯರು ಹಾಗೂ ಪ್ರವಾಸಿಗರು ಸಹ ಕಡಿಮೆ ಅವಧಿಯಲ್ಲಿ ಪ್ರಯಾಣ ಬೆಳಸಲು ಅನುಕೂಲವಾಗಲಿದೆ. ಬಾರ್ಜ್​ ಇಲ್ಲದಿದ್ದಲ್ಲಿ ರಸ್ತೆ ಮೂಲಕ ಸುತ್ತುವರಿದು ಹೋಗಬೇಕಿತ್ತು. ಮುಂದಿನ ದಿನಗಳಲ್ಲಿ ಸ್ಥಳಿಯ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸೇತುವೆ ನಿಮಾರ್ಣ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಮಾಂಕಾಳ ವೈದ್ಯ ಹೇಳಿದರು.

ಕೋಡಿ ಬೆಂಗ್ರೆ- ಹಂಗಾರಕಟ್ಟೆ ನದಿಯ ನಡುವೆ ಸಂಪರ್ಕ ಕಲ್ಪಿಸುವ 2.5 ಕೋಟಿ ರೂ. ವೆಚ್ಚದ ಮಧ್ಯಮ ಗಾತ್ರದ ಹೊಸ ಬಾರ್ಜ್​ ಕಾವೇರಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಹಂಗಾರಕಟ್ಟೆ ಬಂದರಿನಲ್ಲಿ ಹೂಳೆತ್ತುವ ಕಾರ್ಯವನ್ನು ಮಾಡಲಾಗುವುದು. 50 ಲಕ್ಷ ರೂ.ಗಳಲ್ಲಿ ಶೆಡ್​ ನಿಮಾರ್ಣದ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಕೋಡಿ-ಬೆಂಗ್ರೆ ಗ್ರಾಮವನ್ನು ಈಗಾಗಲೇ ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಲಾಗಿದೆ. ಸ್ಥಳಿಯ ಜನರು ವ್ಯಸನ ಮುಕ್ತವಾಗಿರುವುದು ಒಂದು ಉತ್ತಮ ಕಾರ್ಯವಾಗಿದ್ದು ಇದರಿಂದ ಜನರ ಆರೋಗ್ಯ ಹೆಚ್ಚಿನ ಸುಧಾರಣೆ ಸಾಧ್ಯವಾಗುತ್ತದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್​, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮ, ಮುಖಂಡರುಗಳಾದ ದಿನೇಶ್​ ಹೆಗ್ಡೆ, ರಾಜು ಬಂಗೇರ, ಪ್ರಸಾದ್​ ಪಿಂಗಳಾಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here