ನರಿಕೊಂಬು ಶಾಲಾ ಅಕ್ಷರ ದಾಸೋಹ ಹಾಗೂ ಭೋಜನಾಲಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

0
28

ಬಂಟ್ವಾಳ : ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ಏನ್ ಎಮ್ ಪಿ ಟಿ (NMPT) ಸಂಸ್ಥೆಯ ಸಿಎಸ್ಆರ್ ಅನುದಾನ ರೂಪಾಯಿ 25 ಲಕ್ಷ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಊರ ವಿದ್ಯಾ ಅಭಿಮಾನಿಗಳ ಸಹಕಾರದೊಂದಿಗೆ ನಿರ್ಮಾಣಗೊಳ್ಳಲಿರುವ ನೂತನ ಶಾಲಾ ಅಕ್ಷರ ದಾಸೋಹ ಹಾಗೂ ಭೋಜನಾಲಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಬುಧವಾರ ಜರಗಿತು

ಶಾಲಾ ಹಿರಿಯ ವಿದ್ಯಾರ್ಥಿ ಪುರೋಹಿತ ಶ್ರೀಮಾನ್ ಕೃಷ್ಣರಾಜ ಭಟ್ ಪೂಜಾ ವಿಧಿ ವಿಧಾನ ನೆರವೇರಿಸಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಅಂಚನ್ ಕಟ್ಟಡ ರಚನೆಯ ಗುತ್ತಿಗೆದಾರ ಸಂದೀಪ್ ಶೆಟ್ಟಿ ಅರೆಬೆಟ್ಟು ರವರಿಗೆ ಕಟ್ಟಡ ನಿರ್ಮಾಣ ಕಾಮಗಾರಿಯ ಜವಾಬ್ದಾರಿ ಹಸ್ತಾಂತರ ಮಾಡಿದರು.

ಈ ಕಾರ್ಯಕ್ರಮದಲ್ಲಿ ನರಿಕೊಂಬು ಗ್ರಾಮಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್, ಉಪಾಧ್ಯಕ್ಷೆ ಶ್ರೀಮತಿ ಮೋಹಿನಿ ಸದಸ್ಯರಾದ ಪುರುಷೋತ್ತಮ್ ಟೈಲರ್, ಕಿಶೋರ್ ಶೆಟ್ಟಿ, ಉಷಾಲಾಕ್ಷಿ, ರಮನಾಥ್, ಹೇಮಾವತಿ, ಸವಿತಾ, ಸುಜಾತ, ಪ್ರಮುಖರಾದ ಶ್ರೀ ಪ್ರೇಮನಾಥ್ ಶೆಟ್ಟಿ, ಮಾಧವ ಕರ್ಬೆಟ್ಟು, ಮಹಮದ್ ಇಲಿಯಾಸ್, ಸುರೇಶ್ ಕೋಟ್ಯಾನ್, ನಿವೃತ್ತ ಶಿಕ್ಷಕಿ ಶ್ರೀಮತಿ ದೇವಕಿ, ಅನಿತಾ ಲಸ್ರಾದು, ಮಾಜಿ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಮಾಜಿ ಗ್ರಾಮ್ ಪಂಚಾಯತ್ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಮೂರ್ತೆದಾರರ ಸೇವಾ ಸಹಕಾರಿ ಸಂಘ ನರಿಕೊಂಬು ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಲಕ್ಷ್ಮಿ ಪ್ರಕಾಶ್, ಸದಸ್ಯರಾದ ದಾಮೋದರ್, ಕೇಶವ, ಕಮಲಾಕ್ಷ, ಜಯ ಪ್ರಕಾಶ್, ಪ್ರಮೋದ, ನವೀನ್, ಶಶಿಕಲಾ, ಪ್ರಿಯಾ, ಮೀನಾಕ್ಷಿ,ಮಾಜಿ ಸದಸ್ಯರಾದ ಸತೀಶ್, ಪ್ರಸಾದ್, ಗೋಪಾಲಕೃಷ್ಣ, ವೀಣಾ, ತಾಯಂದಿರ ಸಮಿತಿಯ ಉಪಾಧ್ಯಕ್ಷ ರೇಖಾ, ಸದಸ್ಯ ಅಮಿತಾ, ನರಿಕೊಂಬಿನ ಸಂಘ ಸಂಸ್ಥೆಗಳ ಅಧ್ಯಕ್ಷರುಗಳಾದ ಚಂದ್ರಹಾಸ, ಕೃಷ್ಣಪ್ಪ, ಶಾಲಾ ಶಿಕ್ಷಕರು, ತಾಯಂದಿರ ಸಮಿತಿಯ ಸದಸ್ಯರುಗಳು, ಮಕ್ಕಳ ಪೋಷಕರು, ಶಾಲಾಭಿಮಾನಿಗಳು ಹಿರಿಯ ವಿದ್ಯಾರ್ಥಿಗಳು,   ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here