ಕಾರ್ಕಳದ ಶಾಸಕರು ತಮ್ಮ ವ್ಯಾಪ್ತಿಯ ಎಲ್ಲಾ ಕಡೆಯ ರಸ್ತೆಗಳನ್ನು ಸಾಧ್ಯವಿದ್ದಷ್ಟು ಅಭಿವೃದ್ಧಿಗೊಳಿಸಿ ಉತ್ತಮ ರಸ್ತೆಯನ್ನು ನಿರ್ಮಿಸಿದರು. ಆದರೆ ಅದೆಲ್ಲದಕ್ಕೂ ಕಪ್ಪು ಚುಕ್ಕೆಯಂತೆ ಕಂಡು ಬರುತ್ತಿರುವ ಕಾರ್ಕಳ ಪುರಸಭೆಯವರ ಕಾಮಗಾರಿ ಇದೀಗ ನಾಗರಿಕರ ಅಕ್ರೋಶಕ್ಕೆ ಈಡಾಗಿದೆ. ಕಳೆದ ವರ್ಷ ಒಳಚರಂಡಿ ವ್ಯವಸ್ಥೆ ಗಾಗಿ ಕಾರ್ಕಳ ಅನಂತಶಯನದಿಂದ ತೆಳ್ಳಾರು ರಸ್ತೆಯ ಮಾರ್ಗದಲ್ಲಿ ರಸ್ತೆಯನ್ನು ಅಗೆದು ಹಾಕಲಾಗಿತ್ತು. ಆದರೆ ಅಗೆದಂತಹ ರಸ್ತೆಯನ್ನು ಇದ್ದಂತೆಯೇ ಬಿಟ್ಟು ಹೋಂಡಾ ಗುಂಡಿಗಳಿಂದ ತುಂಬಿಹೋಗಿದೆ. ಅಂತಹ ಒಂದ ಗುಂಡಿಯ ರಸ್ತೆಯ ಬಗ್ಗೆ ನಾಗರಿಕರು ಅನಂತಶಯನದ ಎದುರಲ್ಲಿ ಕಳ್ಳರಿಗೆ ಹೋಗುವ ರಸ್ತೆಯ ಮಾರ್ಗದ ಎದುರು ಫ್ಲೆಕ್ಸನ್ನು ಅಳವಡಿಸಿರುತ್ತಾರೆ. ಆ ಫ್ಲಕ್ಸ್ ನ ಪ್ರಕಾರ ಯಾವುದೇ ಗರ್ಭಿಣಿ ಸ್ತ್ರೀಯರು ಹಾಗೂ ಹಿರಿಯ ನಾಗರಿಕರು ಈ ರಸ್ತೆಯಲ್ಲಿ ತೆರಳಬಾರದಾಗಿ ವಿನಂತಿಸಿರುತ್ತಾರೆ.

ಕಾರಣ ಇಷ್ಟೇ ಆ ರಸ್ತೆ ನಡೆದಾಡುವುದಕ್ಕೆ ಬಿಡಿ ವಾಹನಗಳಿಗೆ ಬಿಡಿ ಯಾವುದಕ್ಕೂ ಅನುಪಯುಕ್ತ ರೀತಿಯಲ್ಲಿ ಕಾರ್ಕಳ ಪುರಸಭೆಯವರು ಪರಿವರ್ತಿಸಿರುತ್ತಾರೆ ಎನ್ನುವುದು ಬಹಳ ಖೇದಕರ ಸಂಗತಿ. ಒಂದು ವರ್ಷಗಳಾದರೂ ಆ ರಸ್ತೆಯನ್ನು ಸಮರ್ಪಕವಾಗಿ ಸಜ್ಜುಗೊಳಿಸಿ ಪ್ರತಿಯೊಬ್ಬರಿಗೂ ನಡೆದಾಡಲು, ವಾಹನಗಳಿಗೆ ಹೋಗಲು ಸಾಧ್ಯವಾಗದ ರೀತಿಯಲ್ಲಿ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದೆಲ್ಲವನ್ನು ಮನಗಂಡ ಸಾರ್ವಜನಿಕರು ರಿಕ್ಷಾ ಚಾಲಕರು ಒಟ್ಟಾಗಿ ಈ ರಿಯಾಕ್ಷನ್ ಅಳವಡಿಸಿದ್ದಾರೆ ಎನ್ನುವುದು ಸ್ಥಳೀಯರು ನೀಡಿರುವ ಮಾಹಿತಿ. ಇನ್ನಾದರೂ ಕಾರ್ಕಳ ಪುರಸಭೆಯವರು ತಮ್ಮ ರಸ್ತೆಯನ್ನು ಬಹಳ ಉತ್ತಮವಾಗಿ ಅಭಿವೃದ್ಧಿ ಪಡಿಸಲಿ ಎಂದು ನಾಗರಿಕರು ಹಾರೈಸುತ್ತಾರೆ.
ವರದಿ-ರಾಯಿ ರಾಜ ಕುಮಾರ