ಬಿಜೆಪಿ ವಾಷಿಂಗ್​ ಪೌಡರ್​ ನಿರ್ಮಾ

0
45


ಉಡುಪಿ: ಅಜಿತ್​ ಪವರ್​ ಮೇಲೆ ಅರವತ್ತು ಸಾವಿರ ಕೋಟಿ ಆರೋಪವಿತ್ತು. ಅವರನ್ನು ಬಿಜೆಪಿಗೆ ಕರೆದುಕೊಂಡು ಬಂದು ಶುದ್ಧಿ ಮಾಡಿದ್ದಾರೆ. ಯಾರು ದುಡ್ಡು ಕೊಡ್ತಾರೋ ಅಂತವರನ್ನ ಹಿಡ್ಕೊಂಡು ಪಾರ್ಟಿಗೆ ಸೇರಿಸ್ತಾರೆ. ಇಡೀ ಮಹಾರಾಷ್ಟ್ರ ಚುನಾವಣೆಗೆ ಅಜಿತ್​ ಪವಾರ್​ ಹಣ ಕೊಟ್ಟಿದ್ದಾರೆ. ಬಿಜೆಪಿಯವರ ಹತ್ತಿರ ವಾಷಿಂಗ್​ ಪೌಡರ್​ ನಿಮಾರ್ ಮಿಷಿನ್​ ಇದೆ ಎಂದು ಸಚಿವ ಲಾಡ್​ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಭ್ರಷ್ಟಾಚಾರಿಗಳಿರುತ್ತಾರೆ ಅವರನ್ನು ವಾಷಿಂಗ್​ ಪೌಡರ್​ ನಿರ್ಮಾ ಮಿಷನ್​ಗೆ ಹಾಕುತ್ತಾರೆ. 25 ರಾಜಕಾರಣಿಗಳನ್ನು ಈ ರೀತಿ ಮಾಡಿದ್ದಾರೆ. ಬಿಜೆಪಿ ಸೇರಿದ ಕೂಡಲೇ ಎಲ್ಲರೂ ಪ್ರಾಮಾಣಿಕರಾಗಿ ಬಿಡ್ತಾರೆ ಎಂದು ತಿಳಿಸಿದರು.
ಮುಟ್ಟಿನ ರಜೆ ಮಹಿಳಾಪರ ಕಾಳಜಿಯ ದ್ಯೋತಕ
ಹೆಣ್ಣು ಮಕ್ಕಳ ಮುಟ್ಟಿನ ರಜೆ ವಿಚಾರದಲ್ಲಿ ಪರ ವಿರೋಧ ಏನೇ ಇದ್ದರೂ ಇದೊಂದು ಪ್ರಗತಿಪರ ಬಿಲ್​ ಆಗಿದೆ. ಕರ್ನಾಟಕ ಸರ್ಕಾರ ಒಮ್ಮತದಿಂದ ಈ ನಿರ್ಧಾರ ಕೈಗೊಂಡಿದೆ. ಬುದ್ಧ ಬಸವ ಅಂಬೇಡ್ಕರ್​ ಸಿದ್ಧಾಂತ ಆಧಾರದಲ್ಲಿ ತೀರ್ಮಾನ ಕೈಗೊಂಡಿದೆ. ಇದು ಮಹಿಳಾಪರ ಕಾಳಜಿಯ ದ್ಯೋತಕವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್​ ಲಾಡ್​ ಹೇಳಿದರು.
ಒರಿಸ್ಸಾದ ರಂಜಿತಾ ಪ್ರಿಯದರ್ಶಿನಿ ಎಂಬುವವರು ನನ್ನನ್ನು ಭೇಟಿಯಾಗಿದ್ದರು. ಸೈಕಲ್​ ಮುಖಾಂತರ ಆಕೆ ಜಾಗೃತಿ ಮೂಡಿಸುತ್ತಿದ್ದರು. ಅವರೇ ವರ್ಷದ ಹಿಂದೆ ಈ ಪ್ರಪೋಸಲ್​ ಕೊಟ್ಟವರು. ಇದಕ್ಕಾಗಿ ನಾವು ಸಮಿತಿ ರಚನೆ ಮಾಡಿದ್ದೆವು. ರಾಜ್ಯಾದ್ಯಂತ ಜನರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಮಾಡಿದ್ದೇವೆ. ಗಾಮೆಂರ್ಟ್​ ಇಂಡಸ್ಟ್ರಿ ಸೇರಿದಂತೆ, ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಬಹಳಷ್ಟು ಹೆಣ್ಣು ಮಕ್ಕಳಿಗೆ ಇದರಿಂದ ಅನುಕೂಲವಾಗಲಿದೆ. 12 ತಿಂಗಳಲ್ಲಿ 12 ದಿನ ರಜೆ ಮಾಡಬಹುದು. ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ ಎಂದರು.
ಮುಖ್ಯಮಂತ್ರಿಗಳು ಪ್ರತಿ ವರ್ಷ ಔತಣಕೂಟ ಕರೆಯುತ್ತಾರೆ. ಇದೇನು ಹೊಸತಲ್ಲ ಕಳೆದ ಬಾರಿಯೂ ಕರೆದಿದ್ದರು. ಮಂತ್ರಿಮಂಡಲ ವಿಸ್ತರಣೆ ಅಥವಾ ಪುನರ್​ ರಚನೆ ಆಗುವುದು ಸಹಜ ಪ್ರಕ್ರಿಯೆ. ಯಾವಾಗ ಮಾಡಬೇಕು ಬೇಡ ಅನ್ನೋದನ್ನು ಮುಖ್ಯಮಂತ್ರಿ ಉಪಮುಖ್ಯಮಂತ್ರಿಗಳು, ಹೈಕಮಾಂಡ್​ ತೀಮಾರ್ನ ಮಾಡುತ್ತಾರೆ ಎಂದರು.

LEAVE A REPLY

Please enter your comment!
Please enter your name here