ಮೂಡುಬಿದಿರೆ: ಕೋಟೆಬಾಗಿಲು 1ನೇ ವಾರ್ಡಿನ ಮಹಮ್ಮಾಯಿ ದೇವಸ್ಥಾನದ 2ನೇ ಅಡ್ಡ ರಸ್ತೆ ಬಳಿಯಲ್ಲಿ ವಿದ್ಯುತ್ ತಂತಿಯು ಭಾಗಶಃ ತುಂಡಾಗುತ್ತಾ ಬಂದಿದ್ದು.. ಸ್ಥಳೀಯರೊಬ್ಬರು ಮೂಡಬಿದ್ರೆ ಮೆಸ್ಕಾಂಗೆ ದೂರು ನೀಡಿ 3 ದಿನ ಕಳೆದರೂ ಯಾವುದೇ ದುರಸ್ತಿ ಕಾರ್ಯ ಕೈಗೊಂಡಿಲ್ಲ.
ಸತತ ಬೆನ್ನು ಬಿದ್ದರೂ ಕ್ಯಾರೆ ಎನ್ನದ ಮೆಸ್ಕಾಂ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇಂದು(ಅ .8)ಮಧ್ಯಾಹ್ನ ಸ್ಥಳಕ್ಕೆ ಪರಿಶೀಲನೆಗೆ ಬಂದ ಮೆಸ್ಕಾಂ ಲೈನ್ ಮ್ಯಾನ್ ಸರಿಪಡಿಸುವುದಾಗಿ ತಿಳಿಸಿ ಸ್ಥಳದಿಂದ ಕಾಲು ಕಿತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಕ್ಕಳು ಹೆಚ್ಚಾಗಿ ಆಟವಾಡುವ ಜಾಗ ಇದಾಗಿದ್ದು ಮತ್ತು ಜನರು ತಿರುಗಾಡುವ ರಸ್ತೆಯ ಪಕ್ಕದಲ್ಲಿ ಇಂತಹ ಸಮಸ್ಯೆ ನಡೆದರೂ ಮೆಸ್ಕಾಂ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಮೂಡಬಿದ್ರೆ ಮೆಸ್ಕಾಂನ S.O ವಿರುದ್ಧ ಇಂತಹದೇ ಒಂದು ಬೇಜವಾಬ್ದಾರಿ ನ್ಯೂಸ್ ನಮ್ಮ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ.