ಎಸ್.ಎನ್.ಮೂಡಬಿದ್ರೆ ಪಾಲಿಟೆಕ್ನಿಕ್ ಎನ್.ಎಸ್.ಎಸ್ ನ ವಾರ್ಷಿಕ ವಿಶೇಷ ಶಿಬಿರ 1.10.2025 ರಿಂದ 7.10.2025ರ ವರೆಗೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಳಂಜ ಇಲ್ಲಿ ಯಶಸ್ವಿಯಾಗಿ ನಡೆಯಿತು.
ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಜೆ.ಜೆ ಪಿಂಟೋ ರವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶಿಬಿರವನ್ನು ಸಂತೋಷ್ ಕುಮಾರ್ ಕಾಪಿನಾಡ್ಕ ಇವರು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರು, ಶಾಲೆಯ ಮುಖ್ಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು , ಹಳೆ ವಿದ್ಯಾರ್ಥಿಗಳು, ಶಾಲೆಯ ನಾಮ ನಿರ್ದೇಶಿತ ಸದಸ್ಯರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ತದನಂತರ ವಿದ್ಯಾರ್ಥಿಗಳ ತಂಡ ಬಳಂಜ ಪರಿಸರದ ಸುಮಾರು 75ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಗ್ರಾಮ ಸಮೀಕ್ಷೆ ನಡೆಸಿ ಊರಿನ ಜನರೊಂದಿಗೆ ಬಾಂಧವ್ಯ ಬೆಸೆದರು.
ಮುಂದುವರೆದು ಶಿಬಿರದ ಎಲ್ಲಾ ದಿನಗಳು ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮಗಳು ನಡೆದವು. ಬೆಳಗಿನ ಜಾವ ಧ್ವಜಾರೋಹಣದಿಂದ ತೊಡಗಿ ಶಾಲಾ ಪರಿಸರ ಸ್ವಚ್ಛತೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಹಭೋಜನ, ಅವಲೋಕನ ಕಾರ್ಯಕ್ರಮ ಎಲ್ಲವೂ ಅತ್ಯುತ್ತಮವಾಗಿ ನಡೆದವು. ವಿಶೇಷವೆಂಬಂತೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಯಕ್ಷಗಾನ ಬಯಲಾಟ ಎಲ್ಲರ ಕಣ್ಮನ ಸೆಳೆಯಿತು. ಕೊನೆಯ ದಿನದ ಅವಲೋಕನ ಕಾರ್ಯಕ್ರಮದ ಅಂತ್ಯದಲ್ಲಿ ಶಿಬಿರ ಜ್ಯೋತಿ ನಡೆಸಲಾಯಿತು .

ಶಿಬಿರಾರ್ಥಿಗಳಿಗೆ ಪ್ರೋತ್ಸಾಹದಾಯಕವಾಗಿ ಸ್ಥಳೀಯರು ಸಿಹಿ ತಿಂಡಿ, ತರಕಾರಿ, ಧನಸಹಾಯ ವಗೈರೆ ನೀಡಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಭಾಗಿಯಾಗಿ ಶಿಬಿರದ ಯಶಸ್ಸಿಗೆ ಕಾರಣರಾದರು.
ಈ ವಿಶೇಷ ಶಿಬಿರದ ಒಂದು ದಿನ ಎನ್.ಎಸ್.ಎಸ್ ಹಿರಿಯ ವಿದ್ಯಾರ್ಥಿಗಳ ಸಂಘ ಸಮ್ಮಿಲನ ಇದರ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಲಾಯಿತು.
ಕಳೆದ 25 ವರ್ಷಗಳಿಂದ ಎನ್.ಎಸ್.ಎಸ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ನಿಕಟಪೂರ್ವ ಪ್ರಾಂಶುಪಾಲರಾದ ಜೆ.ಜೆ.ಪಿಂಟೋ ಇವರನ್ನು ಸನ್ಮಾನಿಸಿದರು.
ಈ ಏಳು ದಿನಗಳ ಶಿಬಿರವು 7.10.2025 ರಂದು ಸಮಾರೋಪಗೊಂಡಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ ಅಭಯಚಂದ್ರ ಜೈನ್ ಇವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ನಿಕಟಪೂರ್ವ ಪ್ರಾಂಶುಪಾಲರಾದ ಜೆ ಜೆ ಪಿಂಟೋ ಸಮಾರೋಪ ಭಾಷಣವನ್ನು ಮಾಡಿದರು. ನಮ್ಮ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಎಸ್ ಡಿ ಸಂಪತ್ ಸಾಮ್ರಾಜ್ಯ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಕಾರ್ಯಕ್ರಮದಲ್ಲಿ ಕೆ ವಸಂತ ಸಾಲಿಯಾನ್ ಸ್ಥಾಪಕ ಅಧ್ಯಕ್ಷರು ಜನ ಜಾಗೃತಿ ವೇದಿಕೆ, ಎಸ್ ಡಿ ಎಂ ಸಿ ಅಧ್ಯಕ್ಷರು, ಬಳಂಜದ ಉದ್ಯಮಿಗಳು, ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಮುಖ್ಯ ಶಿಕ್ಷಕರು, ಊರಿನ ಹಿರಿಯರು, ಅತಿಥಿ ಅಭ್ಯಾಗತರು ವೇದಿಕೆಯಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಸಂಪೂರ್ಣ ಕಾರ್ಯಕ್ರಮವನ್ನು ಘಟಕ ನಾಯಕರು, ಸ್ವಯಂ ಸೇವಕರು, ಸಮ್ಮಿಲನದ ಸದಸ್ಯರು ಹಾಗೂ ಕಾರ್ಯಕ್ರಮ ಅಧಿಕಾರಿಗಳಾದ ಶ್ರೀ ರಾಮ್ ಪ್ರಸಾದ್ ಎಂ ಮತ್ತು ಶ್ರೀ ಗೋಪಾಲಕೃಷ್ಣ ಕೆ ಎಸ್ ನಿರ್ವಹಿಸಿದರು.