ನದಿಗೆ ಕಸದ ಎಸೆದ ವ್ಯಕ್ತಿಗೆ ಕಿರಿಮಂಜೇಶ್ವರ ಗ್ರಾಮ ಪಂಚಾಯತಿಯಿಂದ ದಂಡ

0
31

ಕಿರಿಮಂಜೇಶ್ವರ: ನದಿಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುತ್ತಿದ್ದ ವ್ಯಕ್ತಿಗೆ ದಂಡ ವಿಧಿಸಿದ ಘಟನೆ ಕಿರಿಮಂಜೇಶ್ವರ ಗ್ರಾಮದಲ್ಲಿ ಅ.10ರಂದು ನಡೆದಿದೆ.ಕಂಬದಕೋಣೆ ರಾ.ಹೆದ್ದಾರಿ 66ರಲ್ಲಿ ಎಡಮಾವಿನ ಹೊಳೆಗೆ ಹುಬ್ಬಳ್ಳಿ ಮೂಲದ ವ್ಯಕ್ತಿ ತನ್ನ ಗೂಡ್ಸ್ ವಾಹನದಲ್ಲಿ ಇದ್ದ ಪ್ಲಾಸ್ಟಿಕ್ ತ್ಯಾಜ್ಯಗಳಲ್ಲಿ ನದಿಗೆ ಎಸೆಯುವುದನ್ನು ಸ್ಥಳೀಯರಾದ ರಾಮಚಂದ್ರ ಅವರು ಕಿರಿಮಂಜೇಶ್ವರ ಗ್ರಾ.ಪಂ.ಗೆ ಗಮನಕ್ಕೆ ತಂದರು. ತತ್‌ಕ್ಷಣ ಗ್ರಾ.ಪಂ. ಅಧ್ಯಕ್ಷ ಶೇಖರ ಖಾರ್ವಿ, ಅಭಿವೃದ್ಧಿ ಅಧಿಕಾರಿ ರಾಜೇಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಸ ಎಸೆದ ವ್ಯಕ್ತಿಗೆ ಎಚ್ಚರಿಕೆ ನೀಡಿದರು. ಬಳಿಕ ದಂಡ ವಿಧಿಸಿದರು.

ಕಂಬದಕೋಣೆ ರಾ.ಹೆದ್ದಾರಿ 66ರಲ್ಲಿ ಎಡಮಾವಿನ ಸೇತುವೆಗಳಲ್ಲಿ ಕಸ ಹಾಕುವುದು ಮಾಮೂಲಾಗಿತ್ತು. ಈ ಕಸ ನದಿ ಸೇರಿ ನೀರು ಮಲೀನವಾಗುತ್ತಿತ್ತು. ಈ ನೀರು ಹಲವಾರು ಕೃಷಿ ಜಮೀನಿಗೆ ಹಾಗೂ ಸ್ಥಳೀಯರಿಗೆ ಪ್ರಮುಖ ಆಶ್ರಯವಾಗಿದ್ದಿ ಇದೀಗ ಪಂಚಾಯಿತಿ ವತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಸ್ಥಳೀಯರಿಂದ ಪ್ರಶಂಸೆಗೆ ಪಾತ್ರವಾಗಿದೆ.

LEAVE A REPLY

Please enter your comment!
Please enter your name here