ಮಂಗಳೂರು: ಪ್ರತಿಯೊಬ್ಬ ವ್ಯಕ್ತಿಗೂ ನೆಮ್ಮದಿಯಿಂದ ಬದುಕುವ ಮತ್ತು ಗೌರವಯುತವಾಗಿ ಬದುಕುವ ಹಕ್ಕು ಇದೆ ಎಂದು ನಗರ ಮಿಷನ್ ಮ್ಯಾನೇಜರ್ ಆದ ಚಿತ್ತರಂಜನ್ ದಾಸ್ ರವರು ಹೇಳಿದರು.
ಅವರು ಅಕ್ಟೋಬರ್ 10 ವಿಶ್ವ ವಸತಿ ರಹಿತರ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಮತ್ತು ವಿಧಾತ್ರೀ ಕಲಾವಿದೆರ್ (ರಿ) ಕೈಕಂಬ ಕುಡ್ಲ ಇವರ ಸಹಯೋಗದೊಂದಿಗೆ ದೀನ್ ದಯಾಳ್ ಜನ ಆಜೀವಿಕ ಯೋಜನೆ (ಶಹರಿ) ಯ ಅಡಿಯಲ್ಲಿ
ಮಂಗಳೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ನಡೆದ ರಾತ್ರಿ ವಸತಿ ರಹಿತ ನಾಗರಿಕರೊಂದಿಗೆ ಆಯೋಜಿಸಿದ್ದ ಕೇಂದ್ರೀಕೃತ ಗುಂಪು ಚರ್ಚೆಯಲ್ಲಿ ಹೇಳಿದರು.
ಅವರು ಮಾತನಾಡುತ್ತಾ, ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ನಗರಕ್ಕೆ ಬದುಕು ಕಟ್ಟಲು ಬಂದು ಕಾರಣಾಂತರಗಳಿಂದ ಬೀದಿ ಬದಿಯಲ್ಲಿ ನಿದ್ರಿಸುತ್ತಿದ್ದಾರೆ. ಇದರಿಂದಾಗಿ ಬಹಳಷ್ಟು ತೊಂದರೆಗಳನ್ನು ಅನುಭವಿಸುವಂತಾಗಿದೆ. ಇದನ್ನು ತಪ್ಪಿಸಲು ದೇಶಾದ್ಯಂತ ನಗರ ಪ್ರದೇಶಗಳಲ್ಲಿ ರಾತ್ರಿ ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾತ್ರಿ ವಸತಿ ರಹಿತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ,ಪ್ರತಿ ಯೊಬ್ಬ ನಾಗರಿಕರು ಬದುಕುವ ಹಕ್ಕಿ ನ ಬಗ್ಗೆ ತಿಳಿದು ಗೌರವ ಯುತ ವಾಗಿ ಬದುಕಿ ಕಟ್ಟಿ ಕೊಳ್ಳುವ ವಾತಾವರಣ ರೂಪಿಸುವ ಅವಶ್ಯಕತೆ ಇದೆ ಎಂದರು.
ವಿಧಾತ್ರೀ ಸಂಸ್ಥೆಯ ಅಧ್ಯಕ್ಷರಾದ ಚಿದಾನಂದ ಅದ್ಯಪಾಡಿ ಮಾತನಾಡುತ್ತಾ, ಸುಂದರವಾದ ಬದುಕು ಕಟ್ಟಿಕೊಳ್ಳುವ ಹಂಬಲದಿಂದ ಊರು ಬಿಟ್ಟು ಬರುವ ಜನರಿಗೆ ಕಾರಣಾಂತರಗಳಿಂದ ಬೀದಿಯಲ್ಲೇ ನಿದ್ರಿಸುವ ಸಂದರ್ಭದಲ್ಲಿ ಶಾರೀರಿಕ, ಮಾನಸಿಕ ಮತ್ತು ಸಾಮಾಜಿಕ ದುಷ್ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಲು ರಾತ್ರಿ ವಸತಿ ರಹಿತರ ಕೇಂದ್ರಗಳನ್ನು ಬಳಸಿಕೊಳ್ಳಬೇಕು ಎಂದರು.
ವಿಧಾತ್ರೀ ಸಂಸ್ಥೆಯ ಕಾರ್ಯದರ್ಶಿ ಭರತ್ ಎಸ್. ಕರ್ಕೇರ ಮಾತನಾಡುತ್ತಾ, ಹೊರ ಊರಿನಿಂದ
ಬಂದು ಸರಿಯಾದ ವಸತಿ ಇಲ್ಲದೆ ಬೀದಿ ಬದಿ ಮತ್ತು ಅಂಗಡಿ ಮುಂಗಟ್ಟುಗಳ ಬದಿಯಲ್ಲಿ ಮಲಗುವ ವಲಸೆ ಕಾರ್ಮಿಕರ ಪರಿಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಅಕ್ಟೋಬರ್ 10 ರಂದು ವಿಶ್ವ ನಿರಾಶ್ರಿತರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಹಗಲು ದುಡಿದು ರಾತ್ರಿ ಮಲಗಲು ಸೂರು ಇಲ್ಲದ ಕಾರ್ಮಿಕರು ನಗರದ ಉರ್ವಾ ಮತ್ತು ಸುರತ್ಕಲ್ ನಲ್ಲಿರುವ ರಾತ್ರಿ ವಸತಿ ರಹಿತರಿಗಿರುವ ಉಚಿತ ಕೇಂದ್ರಗಳನ್ನು ಬಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉರ್ವಾ ವಸತಿ ರಹಿತರ ಕೇಂದ್ರದ ಆರೈಕೆದಾರರಾದ ಶರತ್ ಕುಮಾರ್, ಬಸವರಾಜ್, ಮಣಿ ಮುಂತಾದವರು ಇದ್ದರು
ಜೊತೆಗೆ ನಿರ್ವಸಿತ ಕೇಂದ್ರಗಳ ನಿರ್ವಹಣೆ ಮತ್ತು ಮೇಲ್ವೀಚಾರಣೆ ಕುರಿತು ಜಾಗೃತಿ ಸೃಷ್ಟಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾಹಿತಿ ಕರಪತ್ರಗಳನ್ನು ಹಂಚಲಾಯಿತು.