ಸ್ವಚ್ಛ ಮಂಗಳೂರು ‘ಓನ್‌ಅಪ್‌ಕುಡ್ಲ’ ಭಿತ್ತಿ ಚಿತ್ರಗಳ ಸ್ವಚ್ಛತಾ ಅಭಿಯಾನ

0
16


ರಾಮಕೃಷ್ಣ ಮಿಷನ್ ಮತ್ತು ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ, ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯಕಾಲೇಜಿನ ಮುಖ್ಯದ್ವಾರದಿಂದ ವೆನ್ಲಾಕ್‌ ಆಸ್ಪತ್ರೆವರೆಗಿನ ಗೋಡೆಗಳ ಮೇಲಿನ ಭಿತ್ತಿಚಿತ್ರಗಳ ಸ್ವಚ್ಛತಾಕಾರ್ಯಕ್ರಮವನ್ನುಕಾಲೇಜಿನವಿದ್ಯಾರ್ಥಿಗಳ ಸಹಕಾರದೊಂದಿಗೆ ಆಯೋಜಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಸಿ. ಗಣಪತಿ ಮತ್ತು ಹಿರಿಯ ಸ್ವಚ್ಛ ಮಂಗಳೂರು ಕಾರ್ಯಕರ್ತರಾದಗೋಪಾಲಕೃಷ್ಣ ಭಟ್ ಹಸಿರು ನಿಶಾನೆಯನ್ನು ತೋರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿಎನ್.ಎಸ್.ಎಸ್‌ಘಟಕ ಸಂಯೋಜಕರಾದ ಸುರೇಶ್ ಕುಂಭಾಸಿ ಉಪಸ್ಥಿತರಿದ್ದರು. ನಂತರ ಮಾತನಾಡಿದ ಪ್ರಾಂಶುಪಾಲರು ಸ್ವಚ್ಛ ಮಂಗಳೂರು ಪ್ರತಿಷ್ಠಾನದ ನಿರಂತರ ಸೇವಾ ಚಟುವಟಿಕೆಗಳನ್ನು ಮೆಚ್ಚಿ, “ಸ್ವಚ್ಛತೆ ಕೇವಲ ಕರ್ತವ್ಯವಲ್ಲ, ಅದು ನಮ್ಮ ಮನಸ್ಸಿನ ಸಂಸ್ಕಾರವೂ ಹೌದು” ಎಂದು ಹೇಳಿದರು.
ವಿದ್ಯಾರ್ಥಿಗಳು ಹಿರಿಯ ಸ್ವಯಂಸೇವಕರಾದಕಮಲಾಕ್ಷ ಪೈ, ಶಿವರಾಂ ಮತ್ತು ಸುನಂದಾ ಶಿವರಾಂ ಅವರ ಮಾರ್ಗದರ್ಶನದಲ್ಲಿಉತ್ಸಾಹದಿಂದ ಭಾಗವಹಿಸಿ, ಗೋಡೆಗಳ ಭಿತ್ತಿಚಿತ್ರಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ ಪಾದಚಾರಿಗಳ ಮಾರ್ಗದ ರೈಲಿಂಗುಗಳಿಗೆ ಅಂಟಿಸಿದ್ದ ಪೋಸ್ಟರ್‌ಗಳನ್ನು ತೆರವುಗೊಳಿಸಿದರು.
ಈ ವೇಳೆ ಕ್ಲಾಕ್‌ಟವೆರ್ ಸುತ್ತಮುತ್ತ ಬೆಳೆದಿದ್ದ ಗಿಡಗಳನ್ನು ಕತ್ತರಿಸಿ, ಕಾರಂಜಿಯ ಕೊಳದಲ್ಲಿ ಜಮೆಯಾಗಿದ್ದ ಕಸಕಡ್ಡಿಗಳನ್ನು ಶ್ರಮದಾನದಿಂದ ಸ್ವಚ್ಛಗೊಳಿಸಲಾಯಿತು. ಈ ಚಟುವಟಿಕೆ ಸ್ವಚ್ಛ ಮಂಗಳೂರು ಪ್ರತಿಷ್ಠಾನದ “ಓನ್‌ಅಪ್‌ಕುಡ್ಲ” ಕಾರ್ಯಕ್ರಮದ ಭಾಗವಾಗಿ ಯಶಸ್ವಿಯಾಗಿ ನೆರವೇರಿತು.

LEAVE A REPLY

Please enter your comment!
Please enter your name here