ರೆಂಜಾಳ: ಸಾಮಾಜಿಕ ಹೊಣೆಗಾರಿಕೆಯನ್ನು ತಮ್ಮ ಕೃತ್ಯಗಳ ಮೂಲಕ ತೋರಿಸಿದ ರೆಂಜಾಳ ಕಾಂಗ್ರೆಸ್ ಸಮಿತಿ, ಮತ್ತೊಮ್ಮೆ ಮಾನವೀಯತೆಯ ನಿಜವಾದ ಅರ್ಥವನ್ನು ನೆನಪಿಸಿದೆ.
ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮಂಜೊಟ್ಟು ಅವರ ನೇತೃತ್ವದಲ್ಲಿ ಹಾಗೂ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಹಕಾರದೊಂದಿಗೆ, ಪ್ರತಿ ಆರು ತಿಂಗಳಿಗೊಮ್ಮೆ ನೀಡುವ ನಾಲ್ಕನೇ ಕಂತಿನ ₹2,36,000 ಧನ ಸಹಾಯವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ KDP ಸದಸ್ಯೆ ವೀಣಾ ಶೆಟ್ಟಿ ಉಪಸ್ಥಿತರಿದ್ದರು. ಧನ ಸಹಾಯದಲ್ಲಿ ₹1,70,000 ರೂಪಾಯಿಯನ್ನು ಕಾಣಿಕಟ್ಟ ಸವಿತಾ ಶೆಟ್ಟಿ ಅವರ ಮನೆ ರಿಪೇರಿಗೆ ನೀಡಲಾಗಿದ್ದು, ಉಳಿದ ₹66,000 ರೂಪಾಯಿಯನ್ನು ಹಲವು ಬಡ ಕುಟುಂಬಗಳ ಚಿಕಿತ್ಸೆ ಹಾಗೂ ವಿದ್ಯಾಭ್ಯಾಸದ ನೆರವಿಗೆ ವಿತರಿಸಿದರು