ಆಕ್ಸಿಸ್ ಮ್ಯಾಕ್ಸ್ ಇನ್ಸೂರೆನ್ಸ್ ಶಿಕ್ಷಾರತ್ನ ಪ್ರಶಸ್ತಿ

0
14


ಸರಕಾರಿ ಪ್ರೌಢಶಾಲೆ ಕಬಕದಲ್ಲಿ ಶಿಕ್ಷಕಿಯಾಗಿರುವ ಡಾ.ಶಾಂತಾ ಪುತ್ತೂರು ರವರು ಮೂವತ್ತು ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಸ್ನಾತಕೋತ್ತರ ಪದವೀಧರರಾಗಿದ್ದು,ಯೋಗದಲ್ಲಿ ಡಿಪ್ಲೋಮ ಮಾಡಿದ್ದು,ನಲಿಕಲಿ, ಯೋಗರಾಜ್ಯ ಸಂಪನ್ಮೂಲ ವ್ಯಕ್ತಿ ಯಾಗಿದ್ದು, ಗೈಡ್ಸ್ ಶಿಕ್ಷಕಿಯಾಗಿದ್ದು,ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿ ಯಾಗಿದ್ದು, ಧರ್ಮಸ್ಥಳ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಧರ್ಮ ಸ್ಥಳ ದ ಬಂಟ್ವಾಳ ತಾಲೂಕು ಯೋಗಸಂಘಟಕಿಯಾಗಿ ಎಂಟು ವರ್ಷ ಸೇವೆ ಸಲ್ಲಿಸಿರುತ್ತಾರೆ, ಪ್ರಸ್ತುತ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಕಾಸರಗೋಡು ಕರ್ನಾಟಕ ರಾಜ್ಯ ಸಂಚಾಲಕಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷ ರು,ಸೌರಭ ಕವನ ಸಂಕಲನ ಬಿಡುಗಡೆ ಯಾಗಿದ್ದು ಅನೇಕ ಕವಿಗೋಷ್ಠಿ ಯ ಅಧ್ಯಕ್ಷ ತೆ ವಹಿಸಿರುತ್ತಾರೆ.ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ಕವನ ಪ್ರಸಾರವಾಗಿದೆ.ಇವರ ಕವನ ,ಲೇಖನ, ವ್ಯಕ್ತಿ ಚಿತ್ರ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಇವರ ಸಾಧನೆ ಗುರುತಿಸಿ ಆಕ್ಸಿಸ್ ಮ್ಯಾಕ್ಸ್ ಇನ್ಸೂರೆನ್ಸ್ ಶಿಕ್ಷಾರತ್ನ 2025ಪ್ರಶಸ್ತಿನೀಡಲಾಗಿದೆ.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಟ್ರ್ಯೈ ನಿಂಗ್ ಮ್ಯಾನೇಜರ್ ಸಚಿನ್ ಕೆ.ಎಸ್ ಮ್ಯಾನೇಜರ್ಸ್ ರಿತೇಶ್ ಶೆಟ್ಟಿ, ಆಶ್ರೀತ್ ಎನ್ ,ನಿದೀಶಾ ಉಪಸ್ಥಿತರಿದ್ದರು.ಇವರೊಂದಿಗೆ ಕವಿ,ಸಂಘಟಕ,ಶಿಕ್ಷಕ, ಪತ್ರಕರ್ತ ಶ್ರೀ ಜಯಾನಂದ ಪೆರಾಜೆ, ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿ ದೇವಕಿಯವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here