ನಿಟ್ಟೆಯ ಅಭಿಷೇಕ್ ಆಚಾರ್ಯ ಆತ್ಮಹತ್ಯೆ ಸಂಬಂಧಿಸಿ ವಿಶ್ವಕರ್ಮ ಒಕ್ಕೂಟದ ನಿಯೋಗ ಉಡುಪಿಯ ಪೊಲೀಸ್ ಅಧೀಕ್ಷಕರ ಭೇಟಿ ಮಾಡಿ ಉನ್ನತ ಮಟ್ಟದ ತನಿಖೆಗೆ ಆಗ್ರಹ

0
72

ನಿಟ್ಟೆ: ತನ್ನ ಆತ್ಮಹತ್ಯೆಯ ಹೊಣೆಗಾರರು ಎಂದು ನಾಲ್ಕು ಜನರ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಿ, ಸೆಕ್ಸ್ ಟ್ರಾಪ್ ಜಾಲದ ಭಯಾನಕ ವಿಷಯಗಳನ್ನು ಒಳಗೊಂಡ ಏಳು ಪುಟಗಳ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಡಿರುವ ನಿಟ್ಟೆ ಗ್ರಾಮದ ಪರಪ್ಪಾಡಿಯ ನಿವಾಸಿ ಅಭಿಷೇಕ್ ಆಚಾರ್ಯನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿ ಇಂದು ಅವಿಭಜಿತ ದಕ್ಶಿಣ ಕನ್ನಡ ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ನಿಯೋಗ ಉಡುಪಿಯ ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಚರ್ಚಿಸಿ, ಇನೊಂದು ಸಾಮಾನ್ಯ ಆತ್ಮಹತ್ಯೆ ಪ್ರಕರಣವಲ್ಲ, ಇದೊಂದು ಬೆದರಿಕೆ ಹಾಗೂ ಬ್ಲಾಕ್ ಮೇಲ್ ನಿಂದಾಗಿರುವ ಆತ್ಮಹತ್ಯೆ ಪ್ರಕರಣವಾಗಿದ್ದು ಶೀಘ್ರವೇ ಉನ್ನತ ಮಟ್ಟದ ತನಿಖೆ ನಡೆಸಿ ಆರ್ತಒಪಿಗ್ಪ್ಪಿಅಕಾಲನ್ನು ಕೂಡಲೇ ಬಂಧಿಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಕೊಳ್ಳುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ವಿಶ್ವಕರ್ಮ ಒಕ್ಕೂಟ ಅಧ್ಯಕ್ಷರಾದ ಮಧು ಆಚಾರ್ಯ ಮುಲ್ಕಿ, ಅಲೆವೂರು ಯೋಗೀಶ್ ಆಚಾರ್ಯ, ಮುರಳೀಧರ ಕೆ., ಜನಾರ್ಧನ ಎಸ್ ಆಚಾರ್ಯ, ಹರ್ಷವರ್ಧನ್ ನಿಟ್ಟೆ, ಕಾಪು ಯುವ ಸೇವಾ ಬಳಗದ ಅಧ್ಯಕ್ಷರಾದ ಬಿಳಿಯರು ಸುಧಾಕರ ಆಚಾರ್ಯ, ಹರೀಶ್ ಆಚಾರ್ಯ ಕಳತ್ತೂರು, ಪ್ರಕಾಶ್ ಆಚಾರ್ಯ ಕಟಪಾಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here