ಲಯನ್ಸ್ ಕ್ಲಬ್ ಅಲಂಗಾರುವಿನಿಂದ ಸಮಾಜ ಸೇವಕರು, ಪ್ರಾಣ ರಕ್ಷಕ ವಿದ್ಯಾರ್ಥಿಗಳಿಗೆ ಸನ್ಮಾನ

0
23

ಮೂಡುಬಿದಿರೆ: ಲಯನ್ಸ್ ಕ್ಲಬ್ ಅಲಂಗಾರು, ಪ್ರಾಂತ್ಯ 10, ವಲಯ 2ರ ಪ್ರಾಂತೀಯ ಹಾಗೂ ವಲಯ ಅಧ್ಯಕ್ಷರ ಭೇಟಿ ಕಾರ್ಯಕ್ರಮವು ಅ.7 ಕಡಲಕೆರೆಯ ಸೃಷ್ಟಿ ಗಾರ್ಡನ್‌ನಲ್ಲಿ ನಡೆಯಿತು. ಲಯನ್ಸ್ ಕ್ಲಬ್ ಅಲಂಗಾರು ಅಧ್ಯಕ್ಷ ಅಮಿತ್ ಡಿ’ಸಿಲ್ವ, ಪ್ರಾಂತೀಯ ಅಧ್ಯಕ್ಷ ಲಯನ್ ಜಗದೀಶ್ ಚಂದ್ರ, ವಲಯ ಎರಡರ ಅಧ್ಯಕ್ಷ ಲಯನ್ ಜೊಸ್ಸಿ ಮಿನೇಜಸ್, ಪ್ರಾಂತೀಯ ಎನ್ವಾಯ್ ಲಯನ್ ಪ್ರವೀಣ್‌ಚಂದ್ರ, ವಲಯ ಒಂದರ ಅಧ್ಯಕ್ಷ ಲಯನ್ ಮೆಲ್ವಿನ್ ಸಲ್ದಾನ್ಯಾ ಪ್ರಾಂತ್ಯ 10ರ ಎಲ್ಲಾ ಅಧ್ಯಕ್ಷರುಗಳು, ಲಯನ್ಸ್ ಕ್ಲಬ್ ಅಲಂಗಾರು ಕಾರ್ಯದರ್ಶಿ ಲಯನ್ ರಿಚರ್ಡ್ ಡಿ’ಸೋಜಾ, ಕೋಶಾಧಿಕಾರಿ ಲಯನ್ ರೋಕಿ ಮಸ್ಕರೇನ್ಹಸ್, ಸುಮತಿ ಜಗದೀಶ್ಚಂದ್ರ ಉಪಸ್ಥಿತರಿದ್ದರು.

ಸನ್ಮಾನ, ಧನಸಹಾಯ:

ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಅನಾಥ ಮಕ್ಕಳಿಗೆ ಆಶ್ರಯದಾತರಾಗಿರುವ ಶ್ರೀಮತಿ ತನುಲಾ ತರುಣ್ ಮತ್ತು ಸಮಾಜ ಸೇವಕ ಲಯನ್ ವಲೇರಿಯನ್ ಪಿಂಟೊ ಅವರನ್ನು ಸನ್ಮಾನಿಸಲಾಯಿತು. ಆಳ್ವಾಸ್ ರಸ್ತೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ನೆಲಕ್ಕುರುಳಿದ್ದ ಸವಾರನನ್ನು ತಕ್ಷಣವೇ ಎತ್ತಿ ಓಡಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಸೇರಿಸುವ ಮೂಲಕ ಆತನ ಪ್ರಾಣ ಉಳಿಸಿದ ಆಳ್ವಾಸ್ ವಿದ್ಯಾರ್ಥಿಗಳಾದ ಶೀತಲ್, ಶೈನು ಹಾಗೂ ಜಿನ್ನು ಇವರ ಸಮಯಪ್ರಜ್ಞೆಯನ್ನು ಗುರುತಿಸಿ ಗೌರವಿಸಲಾಯಿತು. ಸೇವಾ ಚಟುವಟಿಕೆಯ ಅಂಗವಾಗಿ, ಪಾಲಡ್ಕದ ಕ್ಯಾನ್ಸರ್ ರೋಗಿ ಮಹಿಳೆಗೆ ಹಾಗೂ ಅಲೀಶಾ ಪ್ರಿಮಲ್ ರೇಗೊ ಇವರ ಮುಂದಿನ ಶಿಕ್ಷಣಕ್ಕಾಗಿ ಕ್ಲಬ್ ವತಿಯಿಂದ ತಲಾ 10,000 ರೂಪಾಯಿ ಧನಸಹಾಯ ನೀಡಲಾಯಿತು.

ಪ್ರಾಂತೀಯ ಅಧ್ಯಕ್ಷರು ತಮ್ಮ ಮಾತಿನಲ್ಲಿ ಲಯನ್ಸ್ ಕ್ಲಬ್ ಅಲಂಗಾರು ಮಾಡುತ್ತಿರುವ ಸೇವೆಯನ್ನು ಮನಸಾರೆ ಶ್ಲಾಘಿಸಿದರು. ಈ ವರ್ಷ 16 ಹೊಸ ಸದಸ್ಯರನ್ನು ಕ್ಲಬ್‌ಗೆ ಸೇರ್ಪಡೆಗೊಳಿಸಿದ ಅಧ್ಯಕ್ಷ ಲಯನ್ ಅಮಿತ್ ಡಿ’ಸಿಲ್ವ ಅವರನ್ನು ವಿಶೇಷವಾಗಿ ಕೊಂಡಾಡಿದರು. ವಲಯ ಅಧ್ಯಕ್ಷರು ಮಾತನಾಡಿ, ಅಲಂಗಾರು ಕ್ಲಬ್‌ನ ಉತ್ತಮ ಸೇವೆಯನ್ನು ಗುರುತಿಸಿ, ಸಮಾಜಕ್ಕೆ ಇದೇ ರೀತಿ ಸೇವೆ ನಿರಂತರವಾಗಿ ದೊರೆಯುವಂತಾಗಲಿ ಎಂದು ಶುಭ ಹಾರೈಸಿದರು. ಲಯನ್ ರಿಚರ್ಡ್ ಡಿ’ಸೋಜಾ ಅವರು ಧನ್ಯವಾದ ಸಮರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಲಯನ್ ಲೊಯ್ಡ್ ರೇಗೊ ನಿರ್ವಹಿಸಿದರು.

LEAVE A REPLY

Please enter your comment!
Please enter your name here