ದೈಹಿಕ ಕ್ಷಮತೆ ಕಾರಣಕ್ಕಾಗಿ ಸಕ್ರಿಯ ಪಂದ್ಯಾಟದಿಂದ ದೂರ: ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್

0
30


ಉಡುಪಿ: ದೈಹಿಕ ಕ್ಷಮತೆ ಕಾರಣಕ್ಕಾಗಿ ಸಕ್ರಿಯ ಪಂದ್ಯಾಟ ತೊರೆದಿದ್ದೇನೆ. ಆಟವಾಡುವ ಉತ್ಸಾಹವಿದ್ದರೂ, ದೇಹ ಸ್ಪಂದಿಸುವುದಿಲ್ಲ. ಮಕ್ಕಳಿಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತಿದ್ದೇನೆ. ಇದರಲ್ಲಿ ಸಂತೋಷವಿದೆ. ಭವಿಷ್ಯದಲ್ಲಿ ಅಗತ್ಯ ಎನಿಸಿದರೆ ಮಾತ್ರ ತರಬೇತಿ ಅಕಾಡೆಮಿಯಲ್ಲಿ ತೊಡಗಿಸಿಕೊಳ್ಳುವೆ ಎಂದು ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ಹೇಳಿದರು.
ಮಣಿಪಾಲದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಡ್ಮಿಂಟನ್​ ಮಾತ್ರವಲ್ಲ ಎಲ್ಲಾ ಬಗೆಯ ಕ್ರೀಡೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳಬೇಕು. ಮಕ್ಕಳು ಸಾಮಾಜಿಕ ಜಾಲತಾಣ ಬಿಟ್ಟು ಮೈದಾನದತ್ತ ಬರಬೇಕು. ಕೋಚಿಂಗ್​ ನೀಡುವ ಬಗ್ಗೆ ನನಗೆ ಆಸಕ್ತಿ ಇಲ್ಲ. ಹೈದರಾಬಾದ್​ ನಲ್ಲಿ ಬ್ಯಾಡ್ಮಿಂಟನ್​ ತರಬೇತಿ ನೀಡುವ ಅತ್ಯುತ್ತಮ ಅಕಾಡೆಮಿಗಳಿವೆ. ಕೋಚಿಂಗ್​ ತುಂಬಾ ಕಷ್ಟಕರ ಕೆಲಸ. ಆಡುವುದಕ್ಕಿಂತಲೂ ಕೋಚಿಂಗ್​ಗೆ ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ. ಹತ್ತು ಹದಿನೈದು ಗಂಟೆ ನಿಂತುಕೊಂಡು ಬೊಬ್ಬೆ ಹೊಡೆಯುತ್ತಾ ತರಬೇತಿ ನೀಡುವುದು ಸುಲಭವಲ್ಲ. ಗೋಪಿ ಸರ್​ ಹಾಗೂ ಪತಿ ಕಶ್ಯಪ್​ ತುಂಬಾ ಆಕ್ಟಿವ್​ ಆಗಿದ್ದಾರೆ. ನಾನೀಗ ಆಟಗಾರ್ತಿಯ ಮನಸ್ಥಿತಿಯಿಂದ ಹೊರಗೆ ಬರಬೇಕು. ಬ್ಯಾಡ್ಮಿಂಟನ್​ ಆಟಕ್ಕಾಗಿ ನಾನು ತುಂಬಾ ತ್ಯಾಗ ಮಾಡಬೇಕಾಯಿತು. ಕಳೆದ 25 ವರ್ಷಗಳಿಂದ ಮನೆ , ಸ್ನೇಹಿತರು, ಆಹಾರ ಎಲ್ಲವನ್ನು ಬಿಟ್ಟು ಕ್ರೀಡಾಕ್ಷೇತ್ರದಲ್ಲಿದ್ದೇನೆ. ತುಂಬಾ ಒತ್ತಡದ ಜೀವನ ನಡೆಸಿದ್ದೇನೆ ಎಂದು ಹೇಳಿದರು.
ಸಕ್ರಿಯ ರಾಜಕೀಯದಲ್ಲಿ ಆಸಕ್ತಿಯಿಲ್ಲ
ನನಗೆ ಸಕ್ರಿಯ ರಾಜಕಾರಣದಲ್ಲಿ ಯಾವುದೇ ಆಸಕ್ತಿ ಇಲ್ಲ. ನನಗೆ ಪುಟ್ಟ ಮಕ್ಕಳನ್ನು ಕ್ರೀಡೆಯುತ್ತ ಸೆಳೆಯುವುದರಲ್ಲಿ ಆಸಕ್ತಿ. ಬ್ಯಾಡ್ಮಿಂಟನ್​ ನನ್ನ ಹೃದಯಕ್ಕೆ ತುಂಬಾ ಹತ್ತಿರದ ಕ್ರೀಡೆ. ಯಾವತ್ತಾದರೂ ರಾಜಕೀಯದ ಬಗ್ಗೆ ಆಸಕ್ತಿ ಬಂದರೆ ಈ ಬಗ್ಗೆ ಯೋಚಿಸುತ್ತೇನೆ. ನನಗೆ ನರೇಂದ್ರ ಮೋದಿಯವರ ಚಿಂತನೆ ತುಂಬಾ ಇಷ್ಟವಾಗಿದೆ. ರಾಜಕೀಯ ನಾಯಕರಲ್ಲಿ ಮೋದಿ ನನ್ನ ನೆಚ್ಚಿನ ಮುಖಂಡರಾಗಿದ್ದಾರೆ. ಹೀಗಾಗಿ ಕೆಲವೊಮ್ಮೆ ಅವರ ಕಾರ್ಯಕ್ರಮಗಳಿಗೆ ತೆರಳಿ ನಾನು ಬೆಂಬಲಿಸುತ್ತೇನೆ. ರಾಜಕೀಯ ತುಂಬಾ ಸುಲಭ ಎಂದು ಭಾವಿಸುತ್ತಾರೆ. ಆದರೆ ಅದು ನಾವು ಊಹಿಸಿದಷ್ಟು ಸುಲಭವಿಲ್ಲ. ಪ್ರತಿಯೊಂದು ಕ್ಷೇತ್ರವು ಭಿನ್ನ ವಾಗಿರುತ್ತದೆ ಎಂದರು.

LEAVE A REPLY

Please enter your comment!
Please enter your name here