ಮುಂಬೈ: ಭಾರತದ ಮುಂಚೂಣಿಯ ಖಾಸಗಿ ವಲಯದ ಬ್ಯಾಂಕ್ ಎಚ್.ಡಿ.ಎಫ್.ಸಿ. ಬ್ಯಾಂಕ್ ಇಂದು ಹಿರಿಯ ನಾಗರಿಕರ ಮುಂಚೂಣಿಯ ಕಮ್ಯುನಿಟಿ ಪ್ಲಾಟ್ ಫಾರಂ ವಾಕ್ಅಬೌಟ್ ಗೆ ಸೀಡ್ ಫಂಡಿಂಗ್ ನೀಡುವುದಾಗಿ ಪ್ರಕಟಿಸಿದೆ. ಈ ಹೂಡಿಕೆಯಿಂದ ವಾಕ್ಅಬೌಟ್ ತನ್ನ ಕಮ್ಯುನಿಟಿ ಪ್ಲಾಟ್ ಫಾರಂ ವಿಸ್ತರಿಸಲು ಮತ್ತು ಹಿರಿಯ ನಾಗರಿಕರಿಗೆ ವಿಶೇಷ ಅನುಭವಗಳನ್ನು ನೀಡಲು ವಿಸ್ತರಿಸಲು ನೆರವಾಗುತ್ತದೆ.
ಗೆಟ್ ಸೆಟಪ್ ಇಂಡಿಯಾ ಪ್ರೈ.ಲಿ. ಎಂದು ಖ್ಯಾತಿ ಪಡೆದಿದ್ದ ವಾಕ್ಅಬೌಟ್ ಮುಂಬೈ, ನವದೆಹಲಿ, ಬೆಂಗಳೂರು ಮತ್ತು ಚೆನ್ನೈಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಮತ್ತು ಅನುಭವಗಳನ್ನು ನಿರ್ವಹಿಸುತ್ತದೆ ಮತ್ತು ಹಿರಿಯ ನಾಗರಿಕರಿಗೆ ಅವರ ಜೀವನವನ್ನು ಉತ್ತಮವಾಗಿ ನಡೆಸಲು ಸಂಪರ್ಕ ಹೊಂದುವ, ಸಾಮಾಜೀಕರಣಗೊಳ್ಳುವ, ಕಲಿಯುವ ಮೂಲಕ ಸಬಲೀಕರಿಸುತ್ತದೆ. ಈ ಕಾರ್ಯಕ್ರಮಗಳು 55 ವರ್ಷ ವಯಸ್ಸು ಮೀರಿದವರಿಗೆ ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತ ದೈಹಿಕವಾಗಿ ಚಟುವಟಿಕೆಯಿಂದ ಇರಲು ಅವಕಾಶ ಕಲ್ಪಿಸುತ್ತದೆ.
ಎಚ್.ಡಿ.ಎಫ್.ಸಿ. ಬ್ಯಾಂಕ್ ಟ್ರೆಷರಿಯ ಗ್ರೂಪ್ ಹೆಡ್ ಅರುಪ್ ರಕ್ಷಿತ್, “ದೇಶದ ಮುಂಚೂಣಿಯ ಸಂಸ್ಥೆಯಾಗಿ ನಾವು ಸಮಾಜದ ಮೇಲೆ ಅರ್ಥಪೂರ್ಣ ಪರಿಣಾಮ ಬೀರುವ ಹೊಸ ಕೈಗಾರಿಕೆಗಳಿಗೆ ಮತ್ತು ಆವಿಷ್ಕಾರಕ ಪರಿಹಾರಗಳನ್ನು ಸೃಷ್ಟಿಸುವವರನ್ನು ಬೆಂಬಲಿಸುವುದರಲ್ಲಿ ನಂಬಿಕೆ ಇರಿಸಿದ್ದೇವೆ. ಹಿರಿಯರಿಗೆ ವಾಕ್ಅಬೌಟ್ ರೂಪಿಸುವ ಕಾರ್ಯಕ್ರಮಗಳು ಅವರಿಗೆ ಹೆಚ್ಚಾಗುತ್ತಿರುವ ವಯಸ್ಸಿನಲ್ಲಿ ಆನಂದ ತರುವುದಲ್ಲದೆ ಬೌದ್ಧಿಕವಾಗಿಯೂ ಉತ್ತೇಜಕವಾಗಿವೆ. ನಮ್ಮ ಸೀಡ್ ಫಂಡಿಂಗ್ ಮೂಲಕ ಅಂತಹ ಉದ್ಯಮಕ್ಕೆ ಕೊಡುಗೆ ನೀಡಲು ನಾವು ಬಹಳ ಸಂತೋಷ ಹೊಂದಿದ್ದೇವೆ” ಎಂದರು.
ಭಾರತ 50+ ವಯಸ್ಸಿನ ಜನಸಂಖ್ಯೆಯು 2050ರ ವೇಳೆಗೆ 300 ಮಿಲಿಯನ್ ತಲುಪುವ ನಿರೀಕ್ಷೆ ಇದೆ. ವಾಕ್ಅಬೌಟ್ ಈ ಜನಸಂಖ್ಯೆಯ ಬದಲಾವಣೆಯನ್ನು ವಿಶೇಷ ತಾಣಗಳನ್ನು ಸೃಷ್ಟಿಸುವ ಮೂಲಕ ಮತ್ತು ಸಾಮಾಜಿಕ ಸಂಪರ್ಕ, ದೈಹಿಕ ಸ್ವಾಸ್ಥ್ಯ ಮತ್ತು ಜೀವನಪೂರ್ತಿ ಕಲಿಕೆಯ ಕಾರ್ಯಕ್ರಮಗಳ ಮೂಲಕ ಇದನ್ನು ನಿರ್ವಹಿಸುತ್ತದೆ.
ವಾಕ್ಅಬೌಟ್ ಸಂಸ್ಥಾಪಕ ಮತ್ತು ಸಿಇಒ ದೇವಲ್ ದೇಲಿವಾಲಾ, “ಎಚ್.ಡಿ.ಎಫ್.ಸಿ. ಬ್ಯಾಂಕ್ ಹೂಡಿಕೆಯು ಸಕ್ರಿಯ ವಯಸ್ಸಾಗುವಿಕೆ ಬರೀ ಜೀವನಶೈಲಿಯ ಆಯ್ಕೆಯಲ್ಲ, ಅದು ಆರ್ಥಿಕ ಮತ್ತು ಸಾಮಾಜಿಕ ಅನಿವಾರ್ಯತೆಯಾಗಿದೆ. ಅವರ ಬೆಂಬಲದಿಂದ ನಾವು ಹಿರಿಯ ನಾಗರಿಕರ ಸಮುದಾಯಕ್ಕೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸುವಂತೆ ನಮ್ಮ ಪ್ಲಾಟ್ ಫಾರಂ ಮತ್ತು ಅನುಭವಗಳನ್ನು ಉನ್ನತೀಕರಿಸಬಹುದು. ಈ ಸಹಯೋಗವು ನಾವು ಹಿರಿಯರಿಗೆ ಸಮಗ್ರವಾದ ಮೂರನೇ ತಾಣ ನಿರ್ಮಿಸುವುದನ್ನು ಮುಂದುವರಿಸುತ್ತಿರುವಾಗ ನಮಗೆ ನಮ್ಮ ಡಿಜಿಟಲ್ ಕೊಡುಗೆಗಳನ್ನು ಮತ್ತು ವೈಯಕ್ತಿಕ ಅನುಭವಗಳನ್ನು ಸದೃಢಗೊಳಿಸಲು ನೆರವಾಗುತ್ತಿದೆ. ಜನರಿಗೆ ಕುತೂಹಲದಿಂದಿರಲು, ಸಂಪರ್ಕದಲ್ಲಿರಲು ಮತ್ತು ಆರೋಗ್ಯವಾಗಿರಲು ಇಂದು ಬೆಂಬಲಿಸಿದರೆ ಅವರಿಗೆ ಘನತೆಯಿಂದ ವಯಸ್ಸಾಗಲು ಮತ್ತು ನಾಳೆ ಸ್ವತಂತ್ರವಾಗಿರಲು ಅತ್ಯುತ್ತಮ ಅವಕಾಶ ನೀಡಿದಂತೆ” ಎಂದರು.
ಎಚ್.ಡಿ.ಎಫ್.ಸಿ. ಬ್ಯಾಂಕ್ ಈ ಹೂಡಿಕೆಯನ್ನು ಎಚ್.ಡಿ.ಎಫ್.ಸಿ. ಬ್ಯಾಂಕ್ ವೆಂಚರ್ ಕ್ಯಾಪಿಟಲ್ ಪ್ರೋಗ್ರಾಮ್ ಅಡಿಯಲ್ಲಿ ಮಾಡಿದ್ದು ಇದು ಸ್ಟಾರ್ಟಪ್ ಗಳಿಗೆ ಪ್ರಗತಿಗೆ ವೇಗ ತುಂಬಲು ವಿನ್ಯಾಸಗೊಳಿಸಲಾದ ವಿಶೇಷ ಅವಕಾಶವಾಗಿದೆ. ಇತ್ತೀಚೆಗೆ ಬ್ಯಾಂಕ್ ಕ್ವಾಂಟಂ ಸೈಬರ್ ಸೆಕ್ಯುರಿಟಿ ಸ್ಟಾರ್ಟಪ್ ಕ್ಯೂನು ಲ್ಯಾಬ್ಸ್ ಮತ್ತು ಭಾರತ್ ಜಿಪಿಟಿ ಕ್ರಿಯೇಟರ್ ಕೋರೋವರ್ ಗೆ ಹೂಡಿಕೆ ಮಾಡಿದೆ.
ಎಚ್.ಡಿ.ಎಫ್.ಸಿ. ಬ್ಯಾಂಕ್ ಕುರಿತು
ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿರಿ: www.hdfcbank.com
ವಾಕ್ಅಬೌಟ್ ಕುರಿತು
ವಾಕ್ಅಬೌಟ್ ಹಿರಿಯರಿಗೆ(55+) ಮುಂಚೂಣಿಯ ಸಮುದಾಯ ಪ್ಲಾಟ್ ಫಾರಂ ಆಗಿದ್ದು ವಯಸ್ಕರನ್ನು ಮಾನಸಿಕವಾಗಿ, ಸಾಮಾಜಿಕ ಮತ್ತು ದೈಹಿಕವಾಗಿ ಸಕ್ರಿಯವಾಗಿಸುವ ವಿಶೇಷ ಅನುಭವಗಳನ್ನು ಸೃಷ್ಟಿಸುತ್ತದೆ. ಈ ಪ್ಲಾಟ್ ಫಾರಂ ಸಮಾನ ಮನಸ್ಕ ವ್ಯಕ್ತಿಗಳನ್ನು ವೈವಿಧ್ಯಮಯ ಅನುಭವಗಳ ಮೂಲಕ ಸಂಪರ್ಕಿಸುವ “ತೃತೀಯ ತಾಣ”ವಾಗಿ ಕೆಲಸ ಮಾಡುತ್ತದೆ, ಅದರಲ್ಲಿ ಗುಂಪು ಚಟುವಟಿಕೆಗಳು, ಸ್ವಾಸ್ಥ್ಯದ ಉಪಕ್ರಮಗಳು, ಸಾಂಸ್ಕೃತಿಕ ಅನುಭವಗಳು ಮತ್ತು ಕಲಿಕಾ ಅವಕಾಶಗಳಿರುತ್ತವೆ. ವಾಕ್ಅಬೌಟ್ ಭಾರತದಲ್ಲಿ ಸಕ್ರಿಯವಾಗಿ ವಯಸ್ಸಾಗುವುದನ್ನು ಮರು ವ್ಯಾಖ್ಯಾನಿಸುತ್ತದೆ. ಇದು ಹಿಂದೆ ಗೆಟ್ ಸೆಟಪ್ ಎಂಬ ಕಂಪನಿಯ ಹೆಸರಿನಲ್ಲಿ ಕಾರ್ಯಾಚರನೆ ನಡೆಸುತ್ತಿತ್ತು.
ವಿವರಗಳಿಗೆ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿರಿ: www.mywalkabout.in