12 ವರ್ಷದ ವಿದ್ಯಾರ್ಥಿನಿ ಬೆಂಗಳೂರಿನ “ಅಕ್ಷರ ಸಂಗೀತ”  ಲೇಖಕಿಯಾಗಿ ಬರೆದ ಚೊಚ್ಚಲ ಕಥಾ ಪುಸ್ತಕ ಲೋಕಾರ್ಪಣವಾಗಿ ಕಲಾ ಸರಸ್ವತಿ ರಂಗ ಕ್ಷೇತ್ರ ಪ್ರವೇಶ

0
8

ಬೆಂಗಳೂರಿನ ಹೆಸರಾಂತ ವೈದ್ಯಕೀಯ ಕ್ಷೇತ್ರ ತಜ್ಞ, ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣದ ಪ್ರಸಿದ್ಧ ಫುಡ್ ವಾಗ್ಲರ್, ವಿವಿಧ ಪಾಕಶೈಲಿಗಳ ಮೂಲಕ ಬೇರೆ ಬೇರೆ ಸಂಸ್ಕೃತಿಗಳನ್ನು ಸದಾ ಅನ್ವೇಷಿಸಿ ಪ್ರಪಂಚಕ್ಕೆ ಪರಿಚಯಿಸುತ್ತಿರುವ ಶ್ರೀ ಸಂಗೀತ್ ಕುಮಾರ್ ಮತ್ತು ಶ್ರೀಮತಿ ಕಲ್ಪನಾ ರಾಮು  ಅವರ ಸುಪುತ್ರಿಯಾಗಿರುವ ಅಕ್ಷರ ಸಂಗೀತ  ಬೆಂಗಳೂರಿನ ಶ್ರೀ ಕುಮಾರನ್ಸ್ ಚಿಲ್ಡ್ರನ್ ಹೋಮ್‌ ಶಾಲೆಯ ಹೆಮ್ಮೆಯ ವಿದ್ಯಾರ್ಥಿನಿ. ಬಾಲ್ಯದಿಂದಲೇ ಕಥೆಗಳು, ಕವನಗಳು ಮತ್ತು ಕಲ್ಪನೆಗಳ ಮೇಲೆ ಆಕೆಗೆ ಅಪಾರ ಪ್ರೀತಿ. ಅಕ್ಷರಗಳ ಲೋಕವು ಅನುನಿತ್ಯವೂ ಆಶ್ಚರ್ಯಗಳಿಂದ ತುಂಬಿದೆ — ಪ್ರತಿ ಹೂವಿನಲ್ಲೂ, ಪ್ರತಿ ಮೋಡದಲ್ಲೂ  ಹಾಗೂ ಪ್ರತಿಯೊಂದು ಮೊಳಕೆಯೊಡೆದ ಚಿಗುರುಗಳಲ್ಲೂ ಒಂದೊಂದು ಕಥೆ ಅಡಗಿದೆ ಎಂಬ ಭಾವನೆ ಆಕೆಗೆ.

ಅಕ್ಷರಳ ಮೊದಲ ಕಥಾಪುಸ್ತಕದ “Sprout’s Big Dream” ಇಂದು ಲೋಕಾರ್ಪಣಗೊಂಡಿದೆ. ಈ ಕಥಾಪುಸ್ತಕವು  “ಯಶಸ್ಸು ಪಡೆಯಲು ಸಮಯವೂ ಶ್ರಮವೂ ಬೇಕಾಗುತ್ತದೆ. ಸಾಧನೆ ಕಷ್ಟವಾದರೂ ಎಂದಿಗೂ ಕೈ ಬಿಡಬೇಡಿ” ಎಂಬ ಕಥೆಯ ನೀತಿಯನ್ನು ಹೊಂದಿದೆ.  ಈ ಕಥೆಯು ಸಹನೆ ಮತ್ತು ಭರವಸೆಯಿಂದ ಅತೀ ಚಿಕ್ಕ ಆರಂಭವೂ ಕೂಡ ಸುಂದರವಾದ ಬೆಳವಣಿಗೆಗೆ ಹೇಗೆ ಕಾರಣವಾಗಬಹುದು ಎಂಬ ಆಕೆಯ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.

ಅಕ್ಷರಳು ತನ್ನ ಸಮಯವನ್ನು ಸರಳವಾದ ಆದರೆ ಬಲವಾದ ಸಂದೇಶಗಳನ್ನು ಹೊತ್ತಿರುವ ಚಿಕ್ಕ ಕಥೆಗಳು ಮತ್ತು ಕವನಗಳನ್ನು ಬರೆಯುವುದರಲ್ಲಿ ಕಳೆಯುತ್ತಾಳೆ.  ಆಕೆಯ ಕನಸು — ಜನರಿಗೆ ನಗು, ಚಿಂತನೆ ಮತ್ತು ಆತ್ಮವಿಶ್ವಾಸ ನೀಡುವ ಇನ್ನೂ ಅನೇಕ ಕಥೆಗಳನ್ನು ಬರೆಯುವುದಾಗಿದೆ.

ತನ್ನ ಚೊಚ್ಚಲ ಕಥಾ ಪುಸ್ತಕವನ್ನು ಆಕೆ ಸಮಾಜದ ಮಕ್ಕಳಿಗೆ ಮುಕ್ತವಾಗಿ ನೀಡಿದ್ದಾಳೆ. ಕಥಾ ಪುಸ್ತಕವನ್ನು https://drive.google.com/file/d/1Mdk16TiYShQDt9aZX-YhzOCpIimIf7p_/view?usp=sharing ಮುಖಾಂತರ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಸಹೃದಯಿ ಓದುಗರು ಯುವ ಲೇಖಕಿಯನ್ನು aksharaskk@gmail.com ಇಮೇಲ್ ಮುಖಾಂತರ ಅಥವಾ 94004 83000 ಫೋನ್ ಮುಖಾಂತರ ಸಂಪರ್ಕಿಸಿ ಪ್ರೋತ್ಸಾಹ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here