ಮಂಜೇಶ್ವರ “ತುಳುನಾಡ ಬಾಲೆ ಬಂಗಾರ್ ದಶಮಾನೋತ್ಸವ ಸಂಭ್ರಮ”: ತುಳುನಾಡ ಸಂಸ್ಕೃತಿಗೆ ಪೂರಕವಾದ ತುಳುನಾಡ ಬಾಲೆ ಬಂಗಾರ್ – 2025 ಮುದ್ದು ಮಕ್ಕಳ ಫೋಟೋ ಸ್ಪರ್ಧೆಗೆ ಆಹ್ವಾನ

0
17

ಮಂಜೇಶ್ವರ:- ತುಳುನಾಡ ಬಾಲೆ ಬಂಗಾರ್ ಸಮಿತಿ ತುಳುವೆರೆ ಆಯನೊ ಕೂಟ ಮಂಜೇಶ್ವರ ಇದರ ದಶಮಾನೋತ್ಸವದ ಅಂಗವಾಗಿ ದೇಶಿಯ ಮಕ್ಕಳ ದಿನಾಚರಣೆ ಅಂಗವಾಗಿ ತುಳುನಾಡ ಬಾಲೆ ಬಂಗಾರ್- 2025 ಮುದ್ದು ಮಕ್ಕಳ ಫೋಟೋ ಸ್ಪರ್ಧೆ- ಸೀಸನ್ 10 ಕಾರ್ಯಕ್ರಮ ನಡೆಯಲಿದೆ. ಸ್ಪರ್ಧೆಯಲ್ಲಿ 4 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ತುಳುನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸುವ ರೀತಿಯಲ್ಲಿನ ಫೋಟೋಗಳಿಗೆ ಸ್ಪರ್ಧೆಯಲ್ಲಿ ಪ್ರಾಮುಖ್ಯತೆ ನೀಡಲಾಗುತ್ತಿದ್ದು, ಭಾಗವಹಿಸುವ ಮಕ್ಕಳ ಪೋಷಕರು ತಮ್ಮ ಮಕ್ಕಳ ಭಾವಚಿತ್ರವನ್ನು 6×9 ಸೈಜ್ ನಲ್ಲಿ 1 ಭಾವಚಿತ್ರವನ್ನು ಮಾತ್ರ ಕಳುಹಿಸತಕ್ಕದ್ದು, ಭಾವ ಚಿತ್ರದ ಹಿಂದೆ ಮಗುವಿನ ಹೆಸರು, ಹುಟ್ಟಿದ ದಿನ, ತಿಂಗಳು, ಇಸವಿ, ಜನನ ಪ್ರಮಾಣ ಪತ್ರದ ಕರಡು ಪ್ರತಿ, ಪೋಷಕರ ಹೆಸರು, ವಿಳಾಸವನ್ನು ಸ್ಪಷ್ಟವಾಗಿ ಬರೆದಿರತಕ್ಕದ್ದು, ಕಾಸರಗೋಡು ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ, ಕೊಡಗು ಜಿಲ್ಲೆ, ಉಡುಪಿ ಜಿಲ್ಲೆ, ಹಾಸನ ಜಿಲ್ಲೆ, ಚಿಕ್ಕಮಂಗಳೂರು ಜಿಲ್ಲೆಯ ಮಕ್ಕಳು ಮಾತ್ರ ಸ್ಪರ್ಧೆಗೆ ಅರ್ಹರು. ಫೋಟೋಗಳನ್ನು ಕೊರಿಯಾರ್ ಮೂಲಕ ಈ ಕೆಳಗಿನ ವಿಳಾಸಕ್ಕೆ ನವೆಂಬರ್ ತಿಂಗಳ 05 ರ ಒಳಗೆ ತಲುಪುವಂತೆ ಕಳುಹಿಸಿತಕ್ಕದ್ದು. ನವೆಂಬರ್ 13 ಮಂಜೇಶ್ವರದಲ್ಲಿ ನಡೆಯಲಿರುವ ತುಳುನಾಡ ಬಾಲೆ ಬಂಗಾರ್ – ದಶಮಾನೋತ್ಸವದ ಕಾರ್ಯಕ್ರಮದಂದು ತೀರ್ಪುಗಾರರು ಹಾಗೂ ಪ್ರಮುಖ ಅತಿಥಿ ಗಣ್ಯರ ಸಮ್ಮುಖದಲ್ಲಿ ತುಳುನಾಡ ಬಾಲೆ ಬಂಗಾರ್ – 2025 ಸ್ಪರ್ಧಾ ವಿಜೇತರ ಘೋಷಣೆ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಪಂಚಮ ಬಹುಮಾನಗಳು ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣಪತ್ರವನ್ನ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳ ಪೋಷಕರು,
ಶ್ರೀ ರತನ್ ಕುಮಾರ್ ಹೊಸಂಗಡಿ ಅಧ್ಯಕ್ಷರು ತುಳುನಾಡ ಬಾಲೆ ಬಂಗಾರ್ ಸಮಿತಿ, ತುಳುವೆರೆ ಆಯನೊ ಕೂಟ ಮಂಜೇಶ್ವರ, ಸಿಂಡ್ರೆಲಾ ನರ್ಸರಿ ಬಳಿ, ಹೊಸಬೆಟ್ಟು ಮಂಜೇಶ್ವರ – 671323, ಕಾಸರಗೋಡು ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗೆ 7034338773, 974636850 ಗೆ ಸಂಪರ್ಕಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here