ಮೂಡುಬಿದಿರೆ ಬನ್ನಡ್ಕ ವಿಶ್ವವಿದ್ಯಾನಿಲಯ ಕಾಲೇಜಿನ ಶಿಕ್ಷಕ ರಕ್ಷಕ ಮಹಾಸಭೆ ಅಕ್ಟೋಬರ್ 15ರಂದು ಕಾಲೇಜಿನಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಆರ್ಕೆ ನ್ಯೂಸ್ ನ ರಾಯಿ ರಾಜ ಕುಮಾರರು ಹೆತ್ತವರು ಬಹಳ ಜತನದಿಂದ ಮಕ್ಕಳನ್ನು ಪ್ರತೀ ಹಂತದಲ್ಲೂ ತಿದ್ದ ಬೇಕು. ಪ್ರೀತಿ, ತಾಳ್ಮೆ, ಸಂತಸದ ಕ್ಷಣಗಳನ್ನು ಹಂಚಿಕೊಂಡು ಅನುಭವಿಸಬೇಕು ಎಂದು ಹಲವಾರು ಉದಾಹರಣೆಗಳ ಮೂಲಕ ಮನದಟ್ಟು ಮಾಡಿದರು.

ಪ್ರಾಧ್ಯಾಪಕರು ಉತ್ತಮ ಜವಾಬ್ದಾರಿಯಿಂದ ದುಡಿದು ಸೂಕ್ತ ಮಾರ್ಗದರ್ಶನ ನೀಡುತ್ತಿರುವುದರಿಂದ ಹೆತ್ತವರೂ ಕಾಲೇಜಿನ ಅಭಿವೃದ್ಧಿಗೆ ಕೈಜೋಡಿಸಿ ಬೆಳೆಸಿ ಎಂದು ವಿನಂತಿಸಿದರು. ಶಿಕ್ಷಕ ರಕ್ಷಕ ಸಂಘದ ಕಾರ್ಯದರ್ಶಿ ಆಶಾ ಶಾಲೆಟ್ ಡಿ ‘ಸೋಜ ಇವರು ವರದಿ ವಾಚನ ಮಾಡಿದರು. ಕಾರ್ಯಧ್ಯಕ್ಷರಾದ ಶ್ರೀಮತಿ ಕಾವೇರಮ್ಮನವರು ಪ್ರಾಸ್ತಾವಿಕ ನುಡಿದರು. ನಂತರ ಪೋಷಕರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು, ಕಾಲೇಜಿನ ಸಂಯೋಜಕ-ಪ್ರಾಚಾರ್ಯರಾದ ಡಾ. ಕುಮಾರ ಸುಬ್ರಹ್ಮಣ್ಯ ಭಟ್ ಇವರು ಅಧ್ಯಕ್ಷತೆ ವಹಿಸಿ ಕಾಲೇಜಿನ ಸ್ಥಿತಿಯನ್ನು ಪೋಷಕರಿಗೆ ಅರ್ಥಯಿಸಿದರು. ಕಾಲೇಜಿನ ಉಪನ್ಯಾಸಕರುಗಳಾದ ಮಂಜುಶ್ರೀ ಸ್ವಾಗತಿಸಿದರು, ಡಾ. ಸುಜಾತಾ ವಂದಿಸಿದರು ಮತ್ತು ಕಾಲೇಜು ವಿದ್ಯಾರ್ಥಿನಿ ಕುಮಾರಿ ಸುಕನ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು.

ವರದಿ: ರಾಯಿ ರಾಜಕುಮಾರ