ಸೇನಾ ನೇಮಕಾತಿ ವೃತ್ತಿ ಮಾರ್ಗದರ್ಶನ

0
60

ಲಯನ್ಸ್ ಕ್ಲಬ್ ಮಂಗಳೂರು ಸೋಮೇಶ್ವರ ಹಾಗೂ ಪರಿಜ್ಞಾನ ಪಿಯು ಕಾಲೇಜು ಸೋಮೇಶ್ವರದ ಸಹಯೋಗದೊಂದಿಗೆ ರಕ್ಷಣಾ ಸೇವೆಗಳ ನೇಮಕಾತಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ಲಯನ್ ವಿಜಯನ್ ಕೆ ವಹಿಸಿದ್ದರು ಮತ್ತು ಮಂಗಳೂರು ದಕ್ಷಿಣ ಸಹಾಯಕ ಪೊಲೀಸ್ ಆಯುಕ್ತೆ ವಿಜಯಕ್ರಾಂತಿ ಉದ್ಘಾಟಿಸಿದರು.

ಮಾದಕ ದ್ರವ್ಯ ಮತ್ತು ಸೈಬರ್ ಅಪರಾಧ ಜಾಗೃತಿ ಕುರಿತ ಅರಿವನ್ನು ಉಳ್ಳಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕೃಷ್ಣ ಭೋದಿಸಿದರು.

ಕ್ಲಬ್ ಉಪಾಧ್ಯಕ್ಷ ಲಯನ್ ಕಮಾಂಡರ್ ಕೆ ವಿಜಯಕುಮಾರ ವಿದ್ಯಾರ್ಥಿಗಳಲ್ಲಿ ಸೇನಾ ನೇಮಕಾತಿಯ ಬಗ್ಗೆ ತಿಳುವಳಿಕೆ ನೀಡಿದರು. ಕ್ಲಬ್ ಸದಸ್ಯರಾದ ಲಯನ್ ಫ್ಲೇವಿಯಾ ಡಿ’ಸೋಜಾ, ಲಯನ್ ನಿತೀಶ್ ಕೃಷ್ಣ , ಲಯನ್ ಡಾ. ಅನುರೂಪ ಮತ್ತು ಲಯನ್ ನಿರ್ಮಿತ ಭಂಡಾರಿ ಉಪಸ್ಥಿತರಿದ್ದರು.

ತರಬೇತಿಯ ನೇತೃತ್ವವನ್ನು ನಿವೃತ್ತ ನೌಕಾ ಅಧಿಕಾರಿ ಕೆ. ವಿಜಯನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 450 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪರಿಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲ ಶ್ರೀ ವಿಕ್ರಮ್, ಎಲ್ಲರನ್ನೂ ಸ್ವಾಗತಿಸಿದರು ಮತ್ತು ಕ್ಲಬ್ ಕಾರ್ಯದರ್ಶಿ ಲಯನ್ ಕೆ ಗೋಪಿನಾಥ್ ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here