ಅಖಿಲ ಭಾರತ ದೈವಾರಾಧಾಕರ ಒಕ್ಕೂಟ (ರಿ ) ಕೇಂದ್ರೀಯ ಉಡುಪಿ ಜಿಲ್ಲೆ ಇದರ ಸಕ್ರಿಯ ಸದಸ್ಯರಾಗಿದ್ದ ಸಂಜೀವ ಅವರು ಇತ್ತೀಚಿಗೆ ನಿಧನರಾಗಿದ್ದರು ಅವರು ಡೋಲು ವಾದನ ಮೂಲಕ ಸುಮಾರು ವರ್ಷಗಳಿಂದ ದೈವ ಚಾಕ್ರಿ ಮಾಡಿದವರು.
ಇವತ್ತಿನ ದಿವಸ ಒಕ್ಕೂಟದ ವತಿಯಿಂದ ಅವರ ಮನೆಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿ ಅವರ ಹೆಂಡತಿ ಮಕ್ಕಳಿಗೆ ಧೈರ್ಯ ತುಂಬಿ ನಿಮ್ಮ ಜೊತೆಗೆ ಒಕ್ಕೂಟ ಯಾವಾಗಲು ಸದಾ ಬೆಂಬಲವಾಗಿರುತ್ತದೆ ಎಂದು ಭರವಸೆಯ ಮಾತಿನೊಂದಿಗೆ ಹಣದ ನೆರವನ್ನು ಚೆಕ್ ಮೂಲಕ ವಿತರಿಸಲಾಯಿತು.

ಈ ಒಂದು ಸಂದರ್ಭದಲ್ಲಿ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ವಿನೋದ್ ಶೆಟ್ಟಿ ಉಪಾಧ್ಯಕ್ಷರಾದ ಉದಯ ಮೆಂಡನ್ ವಾಸು ಶೇರಿಗಾರ ನವೀನ್ ಪಾತ್ರಿ ಹಾಗೂ ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ
ಸಂಘಟನೆ ಕಾರ್ಯದರ್ಶಿ ವಿಜಯ ಮಡಿವಾಳ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೃಷ್ಣ ಪೂಜಾರಿ ಅಂಜಾರು ರವಿ ಜೊತೆ ಕಾರ್ಯದರ್ಶಿ ಶ್ಯಾಮ್ ಕುರ್ಕಾಲ್ ಹಾಗೂ ಸದಸ್ಯರಾದ ಸುಂದರ ಕುಚ್ಚಿಕಾಡು ಸಂದೀಪ್ ದೆಂದೂರ್ ಉಪಸ್ಥಿತಿ ಇದ್ದರು.

