ವರದಿ ರಾಯಿ ರಾಜ ಕುಮಾರ
ಬೆಳುವಾಯಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯಲ್ಲಿ ಹೊಸ ವಾಹನ ಲೋಕಾರ್ಪಣ ಕಾರ್ಯಕ್ರಮ ನಡೆಯಿತು. ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರಿನ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ವಾಹನವನ್ನು ಲೋಕಾರ್ಪಣೆಗೊಳಿಸಿದರು. ನಾಗರಾಜ ಹೆಗಡೆ ಶೌಚಾಲಯವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಉದ್ಯಮಿಗಳಾದ ಪಿಕೆ ಥೋಮಸ್, ದುರ್ಗಾ ದಾಸ್ ಶೆಟ್ಟಿ ಸಿದ್ದಕಟ್ಟೆ, ಪ್ರವೀಣ ಮಸ್ಕರೇಣಸ್, ಅಬುಲಾಲ್ ಪುತ್ತಿಗೆ, ಅಬ್ದುಲ್ ಗಪೂರ್, ಸಂಘದ ಟ್ರಸ್ಟಿ ಯುವರಾಜ್ ಜೈನ್ ಕಲ್ಲೋಳಿ, ಪೋಷಕ ಸಮಿತಿಯ ಅಧ್ಯಕ್ಷೆ ಲತಾ ಹಾಜರಿದ್ದರು.
ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ ಸ್ವಾಗತಿಸಿ ಪ್ರಸ್ತಾವಿಕ ನುಡಿದರು. ಶಿಕ್ಷಕಿಯರಾದ ಸುಚಿತ್ರ ಕಾರ್ಯಕ್ರಮ ನಿರ್ವಹಿಸಿದರು. ರಮ್ಯಾ ದಾನಿಗಳ ವಿವರ ನೀಡಿದರು. ಅನಿತಾ ರೋಡ್ರಿಗಸ್ ವಂದಿಸಿದರು.
,,.

