ವೋಟ್ ಚೋರ್ ಗದ್ದಿ-ಚೋಡ್ ಸಹಿ ಸಂಗ್ರಹ ಈ ಅಭಿಯಾನ ಇಂದು ಜೆಪ್ಪಿನಮೊಗರಿನಲ್ಲಿ ನಡೆಸಲಾಯಿತು ಈ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಐವನ್ ಡಿʼಸೋಜಾ ಇವರು ಜಿ.ಎಸ್.ಟಿ ಯನ್ನು ಕಡಿಮೆ ಮಾಡಿರುವುದು ಬಿಜೆಪಿಯ ಕೇಂದ್ರ ಸರ್ಕಾರವಲ್ಲ ಇದು ಕಾಂಗ್ರೆಸ್ ಸರ್ಕಾರದ ಹೋರಾಟದಿಂದ. ಬಿಜೆಪಿ ಸರ್ಕಾರ ಜಿಎಸ್.ಟಿಯನ್ನು ಕಡಿಮೆ ಮಾಡಿದೆ ಎಂದು ಡಂಗುರ ಸಾರುತ್ತಿರುವ ಶಾಸಕ ವೇದವ್ಯಾಸ್ ಕಾಮತ್ ಮತ್ತು ಸಂಸದ ಬ್ರೀಜೆಷ್ ಚೌಟರವರು ಯಾವ ಹೋರಾಟ ಮಾಡಿದ್ದಾರೆ ಜೆ.ಎಸ್.ಟಿ ಕಡಿಮೆ ಮಾಡಬೇಕೆಂದು ಎಂಬ ದಾಖಲೆ ನೀಡಲಿ. ಇಂದು ಸತತವಾದ ಕಾಂಗ್ರೆಸ್ ಸರ್ಕಾರದ ಹೋರಾಟದ ಫಲ. ಲೋಕಸಭೆಯಲ್ಲಿ ಮತ್ತು ಎನ್.ಡಿ.ಎ ಪಕ್ಷದ ಪ್ರಯತ್ನದಿಂದ ಇವತ್ತು ಸರಕಾರ ಹೋರಾಟಕ್ಕೆ ಮಣಿದು ಜಿ.ಎಸ್.ಟಿಯನ್ನು ಕಡಿಮೆ ಮಾಡಿದೆ ಹೊರತು ಬಿಜೆಪಿಯ ಸ್ವಇಚ್ಚೆಯಿಂದಲ್ಲ ಎಂದು ಬಿಜೆಪಿಯ ನಾಯಕರ ಹೋರಾಟದಿಂದ ಅಲ್ಲ ಬಿಜೆಪಿಯ ನಾಯಕರಿಗೆ ಮೋದಿ ಯವರ ವಿರುದ್ದ ಮಾತನಾಡುವ ಧೈರ್ಯ ಎಂದಾದರೂ ಮಾತಾಡಿದ್ದರೆಯೇ ?….. ಎಂಬ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಐವನ್ ಡಿʼಸೋಜಾ ರವರು ಜೆಪ್ಪಿನಮೊಗರಿನಲ್ಲಿ ಎಂಬ ವೋಟ್ ಚೋರ್ ಗದ್ದಿ-ಚೋಡ್ ಸಹಿ ಸಂಗ್ರಹ ಈ ಅಭಿಯಾನದಲ್ಲಿ ಸಭೆಯಲ್ಲಿ ಮಾತನಾಡಿದರು.
ಈ ದೇಶದಲ್ಲಿ ಸುಮಾರು ಎಂಟು ವರ್ಷದಲ್ಲಿ ಜಿಎಸ್.ಟಿ ಮೂಲಕ ಸಂಗ್ರಹವಾದ ಅಷ್ಟು ದೊಡ್ಡ ಮೊತ್ತದ ಬಗ್ಗೆ ಮೊದಲು ಈ ಜನರಿಗೆ ಲೆಕ್ಕ ನೀಡಬೇಕು ಅದರಲ್ಲಿ ಸಂಗ್ರಹವಾದ ಮೊತ್ತ ಯಾಕಾಗಿ ಮತ್ತು ಯಾವ ಉದ್ದೇಶಕ್ಕಾಗಿ ಜನರನ್ನು ಸುಲಿಗೆ ಮಾಡಲಾಯಿತು ಎಂಬುದರ ಉತ್ತರ ನೀಡುವ ಬದಲು ಕಡಿಮೆ ಮಾಡಿದ್ದಾರೆ ಎಂದು ಮನೆ-ಮನೆಗೆ ಪತ್ರ ಕಳುಹಿಸಿದರೆ ಯಾವ ಸಾಧನೆಯನ್ನು ಮಾಡಿದ ಹಾಗೆ ಅಗುವುದಿಲ್ಲ ಜನರು ಬದಲಾಗಿದ್ದಾರೆ. ಎಂದು ತಿಳಿಸಿದರು ಕಾಂಗ್ರೆಸ್ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದು ರೀತಿಯ ಕ್ರಾಂತಿಯನ್ನೇ ಮಾಡಿದೆ. ಇಡೀ ದೇಶದಲ್ಲಿ ಐವತ್ತೇಂಟು ಸಾವಿರ ಕೋಟಿ ರೂಪಾಯಿಯನ್ನು ನೇರವಾಗಿ ಜನರಿಗೆ ನೀಡುವ ಮೂಲಕ ದೇಶದಲ್ಲಿ ಯೇ ಅತ್ಯಂತ ದೊಡ್ಡ ರೀತಿಯ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದನೆಮಾಡಿದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಜೆ.ಆರ್ . ಲೋಬೋ ಇವರು ಮತಕಳ್ಳತನದಿಂದೇ ನನಗೆ ಸೋಲುಂಟಾಯಿತು ಮತಕಳ್ಳದಿಂದಲೇ ಬಿಜೆಪಿಯವರು ಹಿಂದಿನ ಚುನಾವಣೆಗಳಲ್ಲಿ ಗೆದ್ದಿರುವುದು ಎಂದು ತಿಳಿಸಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ಕು| ಅಪ್ಪಿಲತಾ ಇವರು ಇವತ್ತು ಚಿನ್ನದ ದರ ಹತ್ತು ಗ್ರಾಂ. ಗೆ ಮೂವತ್ತು ಸಾವಿರ ಇದ್ದುದು ಒಂದು ಲಕ್ಷ ಹತ್ತು ಸಾವಿರವಾಗಿದೆ ಯಾವುದೇ ರೀತಿಯಿಂದಲೂ ಜನರಿಗೆ ಸಹಾಯ ಮಾಡದೆ ಜನರಿಗೆ ವಂಚನೆ ಮಾಡುತ್ತಿದೆ ಮತದಾನದ ಹಕ್ಕನ್ನು ಕೂಡ ಕಸಿದುಕೋಳ್ಳುವ ಮೂಲಕ ವಂಚನೆ ಮಾಡುತ್ತಿದೆ ಎಂದು ನುಡಿದರು.
ಕಾಂಗ್ರೆಸ್ ಮುಖಂಡರಾದ ಹೊನ್ನಯ್ಯರವರು ಮಾತನಾಡಿ ದೇಶದಲ್ಲಿ ಬಿಜೆಪಿ ಯ ಮೋದಿಯ ಅಂಧ ಭಕ್ತರಾಗಿದ್ದಾರೆ ಅಂಧ ಭಕ್ತಾದಾದರೆ ದೇಶದಲ್ಲಿ ಬಿಜೆಪಿಯವರು ಎನೂ ಸಾಧನೆ ಮಾಡಿದಂತೆ ಆಗುವುದಿಲ್ಲ ತಿಳಿಸಿದರು ಜೆಪ್ಪಿನಮೊಗರು ವಾರ್ಡಿನ ಮಾಜಿ ಕಾರ್ಪೋರೇಟರ್ ನಾಗೇಂದ್ರಕುಮಾರ್ ಸ್ವಾಗತಿಸಿದರು ಮತ್ತು ಜೆಪ್ಪಿನಮೊಗರು ವಾರ್ಡಿನ ಅಧ್ಯಕ್ಷರಾದ ಸುಧಾಕರ್ ಜೆ ವಂದಿಸಿದರು. ಸಾರ್ವಜನಿಕರು ಬಂದು ದೊಡ್ಡ ಸಂಖ್ಯೆಯಲ್ಲಿ ಬಂದು ಸಹಿಯನ್ನು ಹಾಕುಮ ಮುಖಾಂತರ ರಾಹುಲ್ ಗಾಂಧಿಯವರ ಹೋರಾಟವನ್ನು ಬೆಂಬಲಿಸಿದರು.
ಈ ಸಂದರ್ಭದಲ್ಲಿ ಡೆನ್ನಿಸ್ ಡಿಸಿಲ್ವ, ಭಾಸ್ಕರ್ ರ್ ರಾವ್,ಸಲೀಂ ಹಬೀಬ್, ರಮಾನಂದ ಪೂಜಾರಿ, ಹೈದರ್ ಬೋಳಾರ್ ,ಟಿ.ಕೆ.ಸುಧೀರ್, ಹರ್ಬಟ್ ಜೆಪ್ಪಿನಮೊಗರು, ಪ್ರಶಾಂತ್ ಡಾಲ್ಸಿ ತಾರಾನಾಥ್ ಭಂಡಾರಿ, ನವೀನ್ ಜಪ್ಪಿನಮೊಗರು ಮುಂತಾದವರು ಉಪಸ್ಥಿತರಿದ್ದರು

