ಕಾಸರಗೋಡು ಕನ್ನಡ ಗ್ರಾಮದಲ್ಲಿ ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾಸರಗೋಡು ಕನ್ನಡ ಗ್ರಾಮೋತ್ಸವ ಕವಿ, ಸಾಹಿತಿಗಳು, ಸಾಹಿತ್ಯಾಸಕ್ತರಿಗೆ ನೀಡಲು ಪುಸ್ತಕ ಹಬ್ಬ ,ಪುಸ್ತಕದಾನ, ಶ್ರೇಷ್ಠದಾನ ಯೋಜನೆಯಲ್ಲಿ ಪುಸ್ತಕಗಳ ಕೊಡುಗೆಗಳಿಗೆ ಆಹ್ವಾನ

0
158

.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ ), ಕನ್ನಡ ಗ್ರಾಮ, ಕಾಸರಗೋಡು ಇದರ 35 ನೇ ಸಂಸ್ಥಾಪನಾ ವರ್ಷಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕೇರಳ ರಾಜ್ಯ ಘಟಕ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕೇರಳ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಇದರ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ 2025 ನವಂಬರ್ 4 ರಂದು ನಡೆಯುವ ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ -ಕಾಸರಗೋಡು ಕನ್ನಡ ಗ್ರಾಮೋತ್ಸವದಲ್ಲಿ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ, ರಾಜ್ಯಮಟ್ಟದ ಚುಟುಕು ಕವಿಗೋಷ್ಠಿ, ರಾಜ್ಯಮಟ್ಟದ ಮಕ್ಕಳ ಕವಿಗೋಷ್ಠಿ ರಾಜ್ಯ ಮಟ್ಟದ ಕನ್ನಡ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿ ಸಾಹಿತಿಗಳು, ಸಾಹಿತ್ಯಾಸಕ್ತರಿಗೆ ಪುಸ್ತಕ ಕೊಡುಗೆ ನೀಡುವುದಕ್ಕಾಗಿ ಕನ್ನಡ ಕೃತಿಗಳನ್ನು ಉದಾರವಾಗಿ ನೀಡುವಂತೆ ಭಿನ್ನವಿಸಿಕೊಳ್ಳಲಾಗಿದೆ. ಕೇರಳ, ಕರ್ನಾಟಕ,ಮಹಾರಾಷ್ಟ್ರ ಹಾಗೂ ಇತರ ರಾಜ್ಯಗಳಲ್ಲಿ ನೆಲೆಸಿ ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ನಮ್ಮ ಹೆಮ್ಮೆಯ ಕವಿ ಸಾಹಿತಿ ಲೇಖಕ ಬರಹಗಾರ ಪ್ರಕಾಶಕ ಮಾಧ್ಯಮದವರು ಹಾಗೂ ಕಲಾವಿದರು ಮತ್ತು ಸಾಹಿತ್ಯ ಕ್ಷೇತ್ರದ ಪೋಷಕರು, ಸಾಹಿತ್ಯ ಅಭಿಮಾನಿಗಳು,ಕನ್ನಡ ಅಭಿಮಾನಿಗಳು ತಮ್ಮಲ್ಲಿರುವ ಹೆಚ್ಚುವರಿ ಕನ್ನಡ,ಸಾಹಿತ್ಯ ಕೃತಿಗಳನ್ನು ಉದಾರವಾಗಿ ನೀಡಿ ಪ್ರೋತ್ಸಾಹಿಸುವಂತೆ ವಿನಂತಿಸಲಾಗಿದೆ.
ತಾವು ನೀಡಿದ ಪುಸ್ತಕ ಕೊಡುಗೆಗಳನ್ನು ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ- ಕಾಸರಗೋಡು ಕನ್ನಡ ಗ್ರಾಮೋತ್ಸವದಲ್ಲಿ ಭಾಗವಹಿಸಿದ ಕವಿಗಳು, ಸಾಹಿತಿಗಳು ,ಮುಖ್ಯ ಅತಿಥಿಗಳು , ಕನ್ನಡ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಉಚಿತವಾಗಿ ಪುಸ್ತಕದಾನ ನೀಡಿದ ಮಹನೀಯರ ಹೆಸರನ್ನು ಪ್ರಸ್ತಾಪಿಸಿ ಕನ್ನಡ, ಸಾಹಿತ್ಯ ಪುಸ್ತಕಗಳನ್ನು ನೀಡಲು ಉದ್ದೇಶಿಸಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಬೃಹತ್ ಕನ್ನಡ ಪುಸ್ತಕಗಳ ಸಂಗ್ರಹವುಳ್ಳ ಕನ್ನಡ ಗ್ರಾಮದ ಕೆ.ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯದ ಗ್ರಂಥ ಭಂಡಾರಕ್ಕೆ ತಾವು ಉದಾರವಾಗಿ ನೀಡಿದ ಹೆಚ್ಚುವರಿ ಸಾಹಿತ್ಯ ಕೃತಿಗಳನ್ನು, ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಲು ವಿನಂತಿಸುತ್ತೇವೆ.ತಮ್ಮಲ್ಲಿರುವ ಹಳೆಯ, ಹೊಸ, ಅಮೂಲ್ಯ ಸಾಹಿತ್ಯ ಕೃತಿಗಳು ತಮ್ಮ ಮನೆಯಲ್ಲಿ ಸ್ಥಳ ಅವಕಾಶದ ಕೊರತೆಯಿಂದ ದಾಸ್ತಾನು ಇಟ್ಟವರಿಗೆ ಈ ಪುಸ್ತಕ ದಾನ ಯೋಜನೆಯ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬಹುದು. ತಾವು ಉದಾರವಾಗಿ ನೀಡಿದ ಸಾಹಿತ್ಯ ಕೃತಿಗಳಿಗೆ ಕೃತಜ್ಞತಾ ಪತ್ರ ನೀಡಿ ಗೌರವಿಸಲಾಗುವುದು.
ದೇಶ ವಿದೇಶಗಳ ಲೇಖಕರು, ಸಾಹಿತಿ,ಕವಿಗಳು, ಪ್ರಕಾಶಕರು ಸಾಹಿತ್ಯ ಪೋಷಕರು, ಸಾಹಿತ್ಯ ಪ್ರೋತ್ಸಾಹಕರು ಪುಸ್ತಕ, ದಾನಿಗಳು ಶಿವರಾಮ ಕಾಸರಗೋಡು,ಅಧ್ಯಕ್ಷರು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕಾಸರಗೋಡು, ಕೇರಳ-ಕರ್ನಾಟಕ ಭವನ,ಕನ್ನಡ ಗ್ರಾಮ,
ಕನ್ನಡ ಗ್ರಾಮ ರಸ್ತೆ,
ಕಾಸರಗೋಡು -671121
ಮೊಬೈಲ್:9448572016,9901951965
ಇವರನ್ನು ಸಂಪರ್ಕಿಸಿ ಪುಸ್ತಕದಾನದ ಮಾಹಿತಿ ನೀಡಬಹುದು.
ಕಾಸರಗೋಡು ಜಿಲ್ಲೆಯ ಕನ್ನಡದ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಹೈಸ್ಕೂಲು,ಕಾಲೇಜು ವಿಭಾಗದ ಕನ್ನಡ ಮಕ್ಕಳಿಗೆ ಪುಸ್ತಕಜ್ಞಾನದ ಹವ್ಯಾಸವನ್ನು ಬೆಳೆಸುವುದಕ್ಕಾಗಿ ಕಾಸರಗೋಡು ಕನ್ನಡ ಗ್ರಾಮದ ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯಕ್ಕೆ ರಾಜ್ಯದ ಕವಿ ಸಾಹಿತಿ ಲೇಖಕರು ಬರಹಗಾರರು ಪ್ರಕಾಶಕರು ಸಂಘ ಸಂಸ್ಥೆಗಳು ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳು,ವಿವಿಧ ಅಕಾಡೆಮಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕದ ವಿವಿಧ ವಿಶ್ವವಿದ್ಯಾನಿಲಯಗಳ ವಿವಿಧ ಪ್ರಸಾರಾಂಗಗಳು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ರಾಜ್ಯದ ವಿವಿಧ ಟ್ರಸ್ಟ್ ಗಳು,ಮಠ, ಆಶ್ರಮ,ದೇವಸ್ಥಾನಗಳು ಈ ಪುಸ್ತಕದಾನದ ಯೋಜನೆಗೆ ಸಾಹಿತ್ಯ ಕೃತಿಗಳೊಂದಿಗೆ ತಮ್ಮ ಉದಾರವಾದ ಆರ್ಥಿಕ ಸಹಕಾರವನ್ನು ದೇಣಿಗೆಯ ರೂಪದಲ್ಲಿ ನೀಡುವ ಮೂಲಕ ಈ ಬೃಹತ್ ಪುಸ್ತಕ ದಾನ ಯೋಜನೆಗೆ ಪ್ರೋತ್ಸಾಹಿಸಬಹುದು.
ರಾಜ್ಯದಲ್ಲಿರುವ ಕವಿ ಸಾಹಿತಿ ಲೇಖಕ ಪ್ರಕಾಶಕರು ಪ್ರಕಟಿಸಿದ ಕಥಾಸಂಕಲನ,ಕವನ ಸಂಕಲನ, ಲೇಖನಗಳ ಮೂಲಕ ಕನ್ನಡ ಸಾಹಿತ್ಯ ವಲಯದಲ್ಲಿ ಈಗಾಗಲೇ ಗುರುತಿಸಿಕೊಂಡಿರುವವರು, ಪತ್ರಿಕೆಗಳಲ್ಲಿ ಪ್ರಕಟಗೊಂಡ ಕಥೆ ಕವನ ಲೇಖನ ಲಲಿತ ಪ್ರಬಂಧ ಚುಟುಕುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದವರು ಈ ಪುಸ್ತಕ ದಾನ ಯೋಜನೆಯಲ್ಲಿ ನಮ್ಮೊಂದಿಗೆ ಕೈಜೋಡಿಸಲು ಅವಕಾಶ ನೀಡಲಾಗುವುದು.
ಶಿವರಾಮ ಕಾಸರಗೋಡು, ಅಧ್ಯಕ್ಷರು,ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕೇರಳ-ಕರ್ನಾಟಕ ಭವನ ಕನ್ನಡ ಗ್ರಾಮ,
ಕನ್ನಡ ಗ್ರಾಮರಸ್ತೆ, ಕಾಸರಗೋಡು- 671121
ಮೊಬೈಲ್: 9448572016
ಈ ಪುಸ್ತಕದಾನ ಯೋಜನೆಗೆ ಧನಸಹಾಯ ನೀಡಿ ಪ್ರೋತ್ಸಾಹಿಸುವವರು google pay ಸಂಖ್ಯೆ 9448572016 ಇವರಿಗೆ ಪಾವತಿಸಿ ಪ್ರೋತ್ಸಾಹಿಸಬಹುದು.
ಮಂಗಳೂರು ವಿಳಾಸ:
ಶಿವರಾಮ ಕಾಸರಗೋಡು, ಅಧ್ಯಕ್ಷರು,ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಶ್ರೀ ಮಹಾಮಾಯಾ ,ವೈದ್ಯನಾಥ ನಗರ 1ನೇ ಮುಖ್ಯ ಅಡ್ಡರಸ್ತೆ ಮಾಡೂರು,ಅಂಚೆ ಕೋಟೆ ಕಾರು 575022 ಉಳ್ಳಾಲ ತಾಲೂಕು,ದಕ್ಷಿಣ ಕನ್ನಡ ಜಿಲ್ಲೆ ಮೊಬೈಲ್:9448572016

LEAVE A REPLY

Please enter your comment!
Please enter your name here