ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದೀಪಾವಳಿ ಹಬ್ಬದ ಆಚರಣೆ

0
99

ಕಡಂದಲೆ : ಅ. 18ರಂದು ಶನಿವಾರದಂದು ಸಚ್ಚೇರಿಪೇಟೆಯ ಲಯನ್ಸ್ ಶಾಲಾ ಸಭಾಂಗಣದಲ್ಲಿ ಬಹಳ ಸಡಗರ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.
ಜೇಸಿಐ ಬೆಳ್ಮಣ್ ಘಟಕದ ಪೂರ್ವಾಧ್ಯಕ್ಷರಾದ ಎನ್ ತುಕರಾಮ್ ಶೆಟ್ಟಿಯವರು ದೀಪ ಬೆಳಗಿಸಿ ದೀಪಾವಳಿ ಹಬ್ಬದ ಆಚರಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ತಿಳಿಸಿದರು.

ಸಂಸ್ಥೆಯ ಗೌರವಾನ್ವಿತ ಸಂಚಾಲಕರಾದ ಲ . ಕೆ . ಸತ್ಯಶಂಕರ್ ಶೆಟ್ಟಿಯವರು ಹಿಂದೂ ಧರ್ಮದಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷವಾದ ಸ್ಥಾನಮಾನಗಳಿವೆ ಮೂರು ದಿನಗಳ ಕಾಲ ಈ
ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಮು.ಕ .ಲಯನ್ಸ್ ಕ್ಲಬ್ ನ ಪೂರ್ವಾದ್ಯಕ್ಷರಾದ ಲ. ವಿಕಾಸ್ ಶೆಟ್ಟಿಯವರು ಬಲಿಚಕ್ರವರ್ತಿಯ ಕಥೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವುದರೊಂದಿಗೆ ಬಲಿಂದ್ರನನ್ನು ಮನೆಯಲ್ಲಿ ಪೂಜಿಸುವ ವಿಧಾನವನ್ನು ತಿಳಿಸಿದರು.

ವೇದಿಕೆಯಲ್ಲಿ ಮು . ಕ . ಲ . ಕ್ಲಬ್ ನ ಅಧ್ಯಕ್ಷರಾದ ಲ . ಯಶವಂತ ಆಚಾರ್ಯ , ಆನಂದ್ ಆಚಾರ್ಯ, ಲ. ಕೃಷ್ಣ ಶೆಟ್ಟಿ ಸಂಸ್ಥೆಯ ಕ್ರಿಯಾಶೀಲ ಮುಖ್ಯೋಪಾಧ್ಯಾಯರಾದ ಗೌರವ್ ಆರ್. ಕೆ ಉಪಸ್ಥಿತರಿದ್ದರು.
ಕುಮಾರಿ ಮಾನ್ವಿ ಸ್ವಾಗತಿಸಿ ಕುಮಾರಿ ಪೃಥ್ವಿ ನಿರೂಪಿಸಿ ವಿದ್ಯಾರ್ಥಿ ಭವಿಷ್ ಶೆಟ್ಟಿ ವಂದಿಸಿದರು.
ಸಂಸ್ಥೆಯ ವಿದ್ಯಾರ್ಥಿಗಳಿಂದ ದೀಪಾವಳಿ ಹಬ್ಬಕ್ಕೆ ಸಂಬಂಧಪಟ್ಟ ನೃತ್ಯ ಹಾಡು ಪ್ರಹಸನ ಬಲಿಂದ್ರ ಕೂಗುವುದು ಇತ್ಯಾದಿ ಕಾರ್ಯಕ್ರಮಗಳು *ಬಹಳ ಅದ್ದೂರಿಯಾಗಿ ವೇದಿಕೆಯಲ್ಲಿ ಪ್ರಸಾರಗೊಂಡಿತು.ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಯಹ್ನಾ ಹಾಗೂ ಶಾನ್ವಿ ಎಸ್ ನೆರವೇರಿಸಿದರು.

LEAVE A REPLY

Please enter your comment!
Please enter your name here